ಬೆಳಗಾವಿ :
ಇಡೀ ಜಗತ್ತಿನಲ್ಲಿ ಈಗ ಕನ್ನಡ ನಾಡಿನ ಕಾಂತಾರ ಚಲನಚಿತ್ರದ ಅಬ್ಬರ ಚಿತ್ರ ಪ್ರೇಮಿಗಳನ್ನು ಮೋಡಿಗೊಳಪಡಿಸುತ್ತಿದೆ. ಭಾರತೀಯ ಚಲನಚಿತ್ರದಲ್ಲೇ ದಾಖಲೆ ನಿರ್ಮಿಸುತ್ತ ದಾಪುಗಾಲು ಹಾಕುತ್ತಿದೆ. ಖ್ಯಾತ ನಾಮ ಚಲನಚಿತ್ರಗಳ ದಾಖಲೆಯನ್ನು ಪುಡಿಗಟ್ಟುತ್ತಾ ಸಾಗುತ್ತಿದೆ.
ಆದರೆ ಬೆಳಗಾವಿಯಲ್ಲಿ….!
ಕಾಂತಾರ ಚಲನ ಚಿತ್ರ ಪ್ರದರ್ಶನಕ್ಕೆ ತಾಂತ್ರಿಕ ಅಡಚಣೆಯುಂಟಾದ ಪರಿಣಾಮವಾಗಿ ಒಂದೂವರೆ ಗಂಟೆ ವಿಳಂಬವಾಯಿತು. ಇದರಿಂದಾಗಿ ರೊಚ್ಚಿಗೆದ್ದ ವೀಕ್ಷಕರು ಚಲನಚಿತ್ರ ಮಂದಿರದ ಕಚೇರಿಗೆ ಮುತ್ತಿಗೆ ಹಾಕಿದ ಘಟನೆ ರವಿವಾರ ನಗರದಲ್ಲಿ ನಡೆದಿದೆ.
ಮಧ್ಯಾಹ್ನ 3.30 ರ ಚಿತ್ರ ಪ್ರದರ್ಶನ 4.45 ಗಂಟೆ ಆದರೂ ಆರಂಭವಾಗಲೇ ಇಲ್ಲ. ಇದರಿಂದ ತಾಳ್ಮೆ ಕಳೆದುಕೊಂಡ ವೀಕ್ಷಕರು ಚಿತ್ರಮಂದಿರದ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಹಣ ಮರಳಿಸುವಂತೆ ಆಗ್ರಹಿಸಿದರು. ಪೊಲೀಸರು ಮನವೊಲಿಸಲು ಹರಸಾಹಸ ಪಟ್ಟರು.
ನ್ಯೂಕ್ಲಿಯಸ್ ಮಾಲ್ ನಲ್ಲಿ ಘಟನೆ ನಡೆದಿದ್ದು, ಪ್ರತಿ ಟಿಕೆಟ್ ಗೆ 150 ರೂ. ಹೆಚ್ಚುವರಿಯಾಗಿ ಹಣ ಮರಳಿಸಿದರು.
ಆದರೆ, ವೀಕ್ಷಕರು ಎರಡರಷ್ಟು ಹಣ ನೀಡುವಂತೆ ಆಗ್ರಹಿಸಿದರು. ಸ್ಥಳಕ್ಕೆ ಖಡೇಬಜಾರ್ ಠಾಣೆಯ ಪೊಲೀಸರು ಬಂದು ತಿಳಿಗೊಳಿಸಿದರು. ಹಣ ಮರಳಿ ಪಡೆಯಲು ನೂಕುನುಗ್ಗಲು ಉಂಟಾಯಿತು.
ವಿಶ್ವದೆಲ್ಲೆಡೆ ಕಾಂತಾರ ಅಬ್ಬರ ..ಆದರೆ ಬೆಳಗಾವಿಯಲ್ಲಿ ಎದುರಾಯ್ತು ತಾಂತ್ರಿಕ ಅಡಚಣೆ ರೊಚ್ಚಿಗೆದ್ರು ಅಭಿಮಾನಿಗಳು…!
