ಬೆಳಗಾವಿ : ದಶಕಗಳ ಹಿಂದಿ ಕನ್ನಡಿಗರ ಪಾಲಿಗೆ ಕಗದ ಕುಸುಮವಾಗಿ ಉಳಿದಿದ್ದ ಬೆಳಗಾವಿಯ ನಿಯರ್ ಹಾಗೂ ಉಪಮೇಯರ್ ಹುದ್ದೆಗಳು ಇದೀಗ ಕನ್ನಡಿಗರೇ ಅಲಂಕರಿಸುವ ಕಾಲ ಬಂದಿದೆ. ಎರಡು ಪ್ರತಿಷ್ಠಿತ ಹುದ್ದೆಗಳು ಕನ್ನಡಿಗರ ಪಾಲಾಗಿವೆ.
ಬೆಳಗಾವಿ ಮಹಾನಗರ ಪಾಲಿಕೆಗೆ ಮೇಯರ್ ಸ್ಥಾನಕ್ಕೆ ಪ್ರೀತಿ ಕಾಮಕರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಹನುಮಂತ ಕೊಂಗಾಲಿ ಆಯ್ಕೆ ಆಗಿದ್ದಾರೆ.
ಬೆಳಗಾವಿ ಮಹಾನಗರ ಪಾಲಿಕೆಯ 24ನೇ ಅವಧಿಗೆ ಮೇಯರ್ ಆಗಿ ನೇಕಾರ ಸಮಾಜದ ಪ್ರೀತಿ ಕಾಮಕರ್ ಮತ್ತು ಉಪ ಮೇಯರ್ ಆಗಿ ಲಿಂಗಾಯತ ಸಮಾಜದ ಹನುಮಂತ ಕೊಂಗಾಲಿ ಆಯ್ಕೆ ಆಗಿದ್ದಾರೆ.
ಕೋರ ಕಮಿಟಿ ಸಭೆ ನಡೆಸಿ ಮೇಯರ್, ಉಪಮೇಯರ್ ಸ್ಥಾನಗಳಿಗೆ ಹೆಸರು ಅಂತಿಮ ಮಾಡಲಾಗಿದೆ. ಮೇಯರ್ ಮತ್ತು ಉಪಮೇಯದ ಅವರು ಬಿಜೆಪಿ ಸದಸ್ಯರು ಎನ್ನುವುದು ವಿಶೇಷ.
ಶಾಸಕ ಅಭಯ ಪಾಟೀಲ್ ಮಾತನಾಡಿ, ಮೇಯರ್ ಆಗಿ ಪ್ರೀತಿ ಕಾಮಕರ್, ಹನುಮಂತ ಕೊಂಗಾಲಿ ಉಪಮೇಯರ್ ಆಗಿ ಆಯ್ಕೆ ಆಗಿದ್ದಾರೆ. ನಾಲ್ಕನೇ ಅವಧಿಗೆ ಮೇಯರ್ , ಉಪಮೇಯರ್ ಆಯ್ಕೆ ಮಾಡಿದ್ದೇವೆ. ರಾಜ್ಯದಲ್ಲಿ ಮೊದಲ ಬಾರಿಗೆ ನೇಕಾರ ಸಮಾಜಕ್ಕೆ ಮೇಯರ್ ಸ್ಥಾನ ನೀಡಲಾಗಿದೆ ಎಂದರು.


