
ಬೆಳಗಾವಿ : ಡಾ. ಅನಿಲ ಕಮತಿ ಗೆಳೆಯರ ಬಳಗ ಯಕ್ಸಂಬಿ ವತಿಯಿಂದ ಕನ್ನಡೋತ್ಸವ-38 ನವೆಂಬರ್ 1 ರಂದು ಮಧ್ಯಾಹ್ನ 2:30 ಗಂಟೆಗೆ ಯಕ್ಸಂಬಿಯ ಗೆಳೆಯರ ಬಳಗ ಶಾರದಾಲಯದ ಬಿ.ಸರೋಜಾದೇವಿ ಮಂಟಪದ ಎಸ್.ಎಲ್.ಭೈರಪ್ಪ ವೇದಿಕೆಯಲ್ಲಿ ನಡೆಯಲಿದೆ.
ಚಿಂಚಣಿ ಸಿದ್ದ ಸಂಸ್ಥಾನ ಮಠದ ನೂತನ ಪಟ್ಟದ ದೇವರಾದ ಶ್ರೀ ಶಿವಪ್ರಸಾದ ದೇವರು ಸಾನ್ನಿಧ್ಯ ವಹಿಸುವರು. ಧಾರವಾಡದ ಹಿರಿಯ ವಿದ್ವಾಂಸ ಮತ್ತು ನಿಗದಿ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಶ್ರೀಧರ ಹೆಗಡೆ ಭದ್ರನ್ ಉದ್ಘಾಟಿಸುವರು. ಪಾರಂಪರಿಕ ಆಯುರ್ವೇದ ವೈದ್ಯ ಮತ್ತು ಧರ್ಮ ಜಾಗರಣ ಪ್ರಾಂತ ಕಾರ್ಯಕಾರಿಣಿ ಸದಸ್ಯ ಹನುಮಂತ ಮಳಲಿ, ಯಕ್ಸಂಬಿ ಕನ್ನಡ ಗೆಳೆಯರ ಬಳಗದ ಉಪ ಕಾರ್ಯದರ್ಶಿ ವಿಜಯ ದಾನವಾಡೆ ಉಪಸ್ಥಿತರಿರುವರು.

 
             
         
         
        
 
  
        
 
    