ರಡ್ಡೇರಹಟ್ಟಿ :
ರಾಜಕೀಯ ಬದುಕಿನ ಸಂಕಷ್ಟದ ಸಂದಿಗ್ಧ ಕಾಲದಲ್ಲಿ ಕೈಹಿಡಿದ ಜನರ ಋಣಭಾರ ಹಗುರ ಮಾಡಿಕೊಳ್ಳಲು ಅವರ ಕಷ್ಟಗಳಿಗೆ ಪ್ರಾಮಾಣಿಕ ಸ್ಪಂದನೆ ಮಾಡುತ್ತಾ ಅಥಣಿ ಮತಕ್ಷೇತ್ರದ ಪ್ರಗತಿಯ ಚಕ್ರವನ್ನು ವೇಗಗೊಳಿಸುವುದಾಗಿ ಮಾಜಿ ಉಪ ಮುಖ್ಯಮಂತ್ರಿˌ ಶಾಸಕ ಲಕ್ಷ್ಮಣ ಸವದಿ ಹೇಳಿದರು. ಅವರು ಚಿಕ್ಕೂಡ ಗ್ರಾಮದವರು ಆಯೋಜಿಸಿದ ಅಭಿನಂದನಾ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡುತ್ತಾ ಪ್ರಾಂಜಲ ಪ್ರೀತಿಯ ಸನ್ಮಾನಗಳು ನನ್ನ ಭವಿಷ್ಯದ ಶ್ರೀರಕ್ಷಾಕವಚಗಳಾಗಲಿವೆ. ನನ್ನ ಮತಕ್ಷೇತ್ರವೇ ನನ್ನ ಮನೆ. ಅದರ ಅಭಿವೃದ್ಧಿಗಾಗಿ ಮಂತ್ರಿ ಪದವಿಯನ್ನು ನಾನೇ ನಿರಾಕರಿಸಿದ್ದು ಸ್ವಪ್ರತಿಷ್ಠೆˌ ಗೌರವಗಳಿಗಿಂತ ಕುಂದು ಕೊರತೆಗಳನ್ನು ಸರಿಪಡಿಸುವುದು ಮುಖ್ಯವಾಗಿದೆ. ಚಿಕ್ಕೂಡ ಗ್ರಾಮವು ಆರೂಢ ಪರಂಪರೆಯನ್ನನುಸರಿಸುವ ಪುಣ್ಯ ತಾಣವಾಗಿದ್ದು ಈ ಗ್ರಾಮದ ಅಭಿವೃದ್ಧಿಗೆ ಕಂಕಣಬದ್ಧನಾಗಿದ್ದೇನೆಂದು ಕೃತಜ್ಞತಾ ನುಡಿಗಳಲ್ಲಿ ತಿಳಿಸಿದರು.
ಹೆಚ್ಚು ವಚನಗಳನ್ನು ಕಂಠಪಾಠ ಮಾಡಿಕೊಂಡ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ಸಾಕ್ಷಿ ಮಠಪತಿˌ ಶಿಲ್ಪಾ ವಡ್ಡರˌ ಸುಶ್ಮಿತಾ ಬಚ್ಚನ್ನವರˌ ಸಹನಾ ಕತ್ತಿˌ ಮಾಸಾಯಿ ಚಿಂಚಲಿˌ ಸುದರ್ಶನ ಹರವಿˌ ಪ್ರಜ್ವಲ ತೇಲಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶ್ರೀಶೈಲ ನಾಯಿಕˌ ಶ್ರೀಶೈಲ ಹಳ್ಳದಮಳ್ಳˌ ಅಶೋಕ ಮುಳ್ಳೂರ ಭೀಮಣ್ಣ ಐನಾಪುರ, ಗುಂಡು ರಡ್ರಟ್ಟಿ, ಹಣಮಂತ ಕುಳಲಿ, ವಿಜಯ ಕಲಾದಗಿ, ರಾಹುಲ ಮಾಚಕನೂರ, ಮಹೇಶ ಮುಳ್ಳೂರ, ಮಲ್ಲಿಕಾರ್ಜುನ ಹಲಕಿ, ಶಿವಾನಂದ ತೇಲಿ, ಮಲ್ಲಪ್ಪ ತೇಲಿ, ಸಂಜಯ ತೇಲಿ ರಾಜೇಂದ್ರ ಮುಳ್ಳೂರ ಉಪಸ್ಥಿತರಿದ್ದರು.
ಸುಮಿತ್ರಾ ಮಗೆಣ್ಣವರ ಸ್ವಾಗತಿಸಿದರು. ಶ್ರೀಕಾಂತ ಹಳ್ಳೂರ ನಿರೂಪಿಸಿದರು. ಆರ್.ಎಮ್.ಪಾಟೀಲ ವಂದಿಸಿದರು.