ಬೆಳಗಾವಿ: ನಗರದ ಕೆಎಲ್ಇ ಸಂಸ್ಥೆಯ (ಜಕ್ಕೇರಿ ಹೊಂಡ)ವಾಣಿಜ್ಯ ಮಹಾವಿದ್ಯಾಲಯದಲ್ಲಿ ಭಕ್ತ ಕನಕದಾಸರ ಜಯಂತಿ ಆಚರಣೆ ಆಚರಿಸಲಾಯಿತು.
ಭಕ್ತ ಕನಕದಾಸರ ಭಾವಚಿತ್ರಕ್ಕೆ ಪೂಜಾ ಕೈಂಕರ್ಯವನ್ನು ನೇರವರಿಸಿ ಕನ್ನಡ ವಿಭಾಗದ ಅಧ್ಯಾಪಕ ಎಸ್ ಬಿ ತಾರದಾಳೆ ಮಾತನಾಡಿ, ಕನ್ನಡ ಸಾಹಿತ್ಯದಲ್ಲಿ ದಾಸ ಸಾಹಿತ್ಯ ಒಂದು ಮೈಲುಗಲ್ಲು. ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಭಕ್ತ ಕನಕದಾಸರು ಒಬ್ಬರು. ಸಮಾಜದಲ್ಲಿ ಜಾತಿ ಪದ್ಧತಿ, ಸಾಮಾಜಿಕ ಮೂಢನಂಬಿಕೆಗಳನ್ನು, ಅನಿಷ್ಟ ಪದ್ದತಿಗಳನ್ನು ಹೋಗಲಾಡಿಸಲು ತಮ್ಮ ಕೀರ್ತನ ಮೂಲಕ ತಮ್ಮ ವಿಚಾರಧಾರೆಗಳನ್ನು ಬಿತ್ತರಿಸಿದರು. ಇಂದಿನ ಯುವಕರು ಸಮಾಜದಲ್ಲಿ ಜಾತಿ ನಿರ್ಮೂಲನೆ ಮಾಡಬೇಕೆಂದು ಕರೆ ನೀಡಿದರು.
ಕಾಲೇಜಿನ ಪ್ರಾಚಾರ್ಯ ಶ್ರೀದೇವಿ ಹಿರೇಮಠ, ಪ್ರತಿಕ್ಷಾ, ಗೌತಮಿ ,ಸತೀಶ,ಶಿವಲಿಂಗೇಗೌಡ, ರಾಘವೇಂದ್ರ,ಬಿಜಯ ಮುಂತಾದವರು ಉಪಸ್ಥಿತರಿದ್ದರು.


