This is the title of the web page
This is the title of the web page

Live Stream

March 2023
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

Local News

ಕರುನಾಡು ಗೆಲ್ಲಲು ಕಮಲ ಸಜ್ಜು : ನಾಲ್ಕು ದಿಕ್ಕುಗಳಿಂದ ಭರ್ಜರಿ ಯಾತ್ರೆ Kamala outfit to win Karunadu: Great journey from four directions


8000 ಕಿ.ಮೀ. ಬಸ್ ಯಾತ್ರೆ ಬಿಜೆಪಿ ಹಮ್ಮಿಕೊಂಡಿದೆ. ಮಾ .1 ರಿಂದ 8000 ಕಿ.ಮೀ. ಬಸ್ ಯಾತ್ರೆ ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟ , ಬೆಳಗಾವಿಯ ನಂದಗಡದ ಸಂಗೊಳ್ಳಿ ರಾಯಣ್ಣ ಸ್ಮಾರಕ , ಬೀದರ್ ಜಿಲ್ಲೆಯ ಬಸವಕಲ್ಯಾಣದ ಅನುಭವ ಮಂಟಪ ಹಾಗೂ ಕೆಂಪೇಗೌಡರ ಜನ್ಮಸ್ಥಳ ಬೆಂಗಳೂರು ಹೊರವಲಯದ ದೇವನಹಳ್ಳಿ ಬಳಿಯ ಆವತಿಯಿಂದ ಆರಂಭವಾಗಲಿದೆ ಎಂದು ಬಿಜೆಪಿ ನಾಯಕ ಎನ್.ರವಿಕುಮಾರ್ ಮಾಹಿತಿ ನೀಡಿದ್ದಾರೆ.

ಬಿಜೆಪಿ ಯಾತ್ರೆ ಮಾರ್ಚ್ 1- ಚಾಮರಾಜ ನಗರದ ಮಲೆ ಮಹದೇಶ್ವರ ಬೆಟ್ಟದಲ್ಲಿ ಜೆಪಿ ನಡ್ಡಾ ಚಾಲನೆ- ಕೆ.ಎಸ್ . ಈಶ್ವರಪ್ಪ ನೇತೃತ್ವ   ಮಾರ್ಚ್ 2- ನಂದಗಡದಲ್ಲಿ ರಾಜನಾಥ್ ಸಿಂಗ್ ಚಾಲನೆ ಗೋವಿಂದ ಕಾರಜೋಳ ನೇತೃತ್ವ ಮಾರ್ಚ್ 3- ಬಸವಕಲ್ಯಾಣದಲ್ಲಿ ಅಮಿತ್ ಶಾ ಚಾಲನೆ ಜಗದೀಶ್ ಶೆಟ್ಟರ್ ನೇತೃತ್ವ             ಮಾರ್ಚ್ 4- ಕೆಂಪೇಗೌಡ ಜನ್ಮಸ್ಥಳದಲ್ಲಿ ಅಮಿತ್ ಶಾ ಚಾಲನೆ- ಆರ್.ಅಶೋಕ್ ನೇತೃತ್ವ

ಬೆಂಗಳೂರು : ಬಿಜೆಪಿಯು 4 ಸ್ಥಳಗಳಿಂದ ವಿಜಯ ಸಂಕಲ್ಪ ಯಾತ್ರೆಯನ್ನು ಮಾರ್ಚ್ ತಿಂಗಳಿನಲ್ಲಿ ಆರಂಭಿಸಲಿದ್ದು, ಇದು ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಸಂಚರಿಸಲಿದೆ ಎಂದು ರಾಜ್ಯದ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಮತ್ತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ನಾಲ್ಕು ಸ್ಥಳಗಳಿಂದ ವಿಜಯ ಸಂಕಲ್ಪ ಯಾತ್ರೆ ಆರಂಭವಾಗಲಿದೆ. ಮಾರ್ಚ್ 1 ರಂದು ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಿಂದ ಮೊದಲನೇ ಯಾತ್ರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಚಾಲನೆ ನೀಡಲಿದ್ದಾರೆ. ಮಾರ್ಚ್ 2ರಂದು ನಂದಗಢದ ಸಂಗೊಳ್ಳಿ ರಾಯಣ್ಣ ಸ್ಮಾರಕದಿಂದ ಎರಡನೇ ಯಾತ್ರೆಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಚಾಲನೆ ನೀಡಲಿದ್ದಾರೆ. ನಂದಗಢದಿಂದ ಹೊರಡುವ ಯಾತ್ರೆ ಕಿತ್ತೂರು ಚನ್ನಮ್ಮ ಆಳಿದ ಕಿತ್ತೂರಿಗೂ ಹೋಗಲಿದೆ ಎಂದು ಮಾಹಿತಿ ನೀಡಿದರು.
ಮಾರ್ಚ್ 3 ರಂದು ಬೀದರ ಜಿಲ್ಲೆಯ ಬಸವ ಕಲ್ಯಾಣದ ನೂತನವಾಗಿ ನಿರ್ಮಾಣವಾಗುತ್ತಿರುವ ಅನುಭವ ಮಂಟಪದ ಸ್ಥಳದಿಂದ ಮೂರನೇ ವಿಜಯ ಸಂಖಲ್ಪ ಯಾತ್ರೆ ಆರಂಭವಾಗಲಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಚಾಲನೆ ನೀಡಲಿದ್ದಾರೆ.

ಬೆಂಗಳೂರು ದೇವನಹಳ್ಳಿಯ ನಾಡಪ್ರಭು ಕೆಂಪೇಗೌಡ ಪ್ರತಿಮೆ ಸ್ಥಳದಿಂದ ನಾಲ್ಕನೇ ಯಾತ್ರೆ ಹೊರಡಲಿದ್ದು, ಇದಕ್ಕೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಾಲನೆ ನೀಡಲಿದ್ದಾರೆ ಎಂದರು.
ಮುಖ್ಯಮಂತ್ರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ರಾಜ್ಯ ಅಧ್ಯಕ್ಷ ನಲೀನಕುಮಾರ ಕಟೀಲು, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮೊದಲಾದವರು 4 ಯಾತ್ರೆಗಳ ಉದ್ಘಾಟನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಮಾರ್ಚ್ 25ರಂದು ದಾವಣಗೆರೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಈ ಬೃಹತ್‌ ರ್ಯಾಲಿ ನಡೆಯಲಿದೆ. ಬಿಜೆಪಿ ಸರ್ಕಾರಗಳ ಸಾಧನೆ, ಕಾಂಗ್ರೆಸ್‍ನ ಹುಸಿ ಭರವಸೆ- ಭ್ರಷ್ಟಾಚಾರವನ್ನು ಜನರಿಗೆ ತಿಳಿಸುತ್ತೇವೆ ಎಂದರು.
ರಾಜ್ಯದ ಎಲ್ಲ 31 ಜಿಲ್ಲೆಗಳ 224 ವಿಧಾನಸಭಾ ಕ್ಷೇತ್ರಗಳ ಸಂಪರ್ಕ ಈ ವೇಳೆ ನಡೆಯಲಿದೆ. ನಾಲ್ಕು ರಥಗಳ ಮೂಲಕ ಒಟ್ಟು 8000 ಕಿ.ಮೀನಷ್ಟು. ಯಾತ್ರೆ ಸಂಚರಿಸಲಿದೆ. ಈ ವೇಳೆ 80ಕ್ಕೂ ಹೆಚ್ಚು ರ್ಯಾಲಿಗಳು, 75ಕ್ಕೂ ಹೆಚ್ಚು ಸಾರ್ವಜನಿಕ ಸಭೆಗಳು, 150ಕ್ಕೂ ಹೆಚ್ಚು ರೋಡ್ ಶೋಗಳನ್ನು ಆಯೋಜಿಸಲಾಗುತ್ತದೆ. ಯಾತ್ರೆಯ ಅವಧಿ 20 ದಿನಗಳಾಗಿದ್ದು, ಕನಿಷ್ಠ 150 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು ಇದರ ಗುರಿಯಾಗಿದೆ ಎಂದರು.


Jana Jeevala
the authorJana Jeevala

Leave a Reply