ಕಕ್ಕೇರಿ : ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಈ ನಿಟ್ಟಿನಲ್ಲಿ ಗ್ರಾಮಕ್ಕೆ ಸಕಲ ಸೌಲಭ್ಯ ಕಲ್ಪಿಸಿ ಕೊಡುವಂತೆ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕಿಶೋರ ಮಿಠಾರಿ ಒತ್ತಾಯಿಸಿದ್ದಾರೆ.
ಕಕ್ಕೇರಿ ಗ್ರಾಮ ಪುಣ್ಯಕ್ಷೇತ್ರ ಶ್ರೀ ಬಿಷ್ಟಾದೇವಿ ಮಂದಿರ ಹಾಗೂ ಶ್ರೀ ಶಿವಶರಣ ಡೋಹರ ಕಕ್ಕಯ್ಯ ನವರು ಐಕ್ಯವಾದ ಸ್ಥಳ ಇದು. ಬಸ್ ಗಳ ಸೌಲಭ್ಯ, ಸರ್ಕಾರಿ ಪ್ರೌಢಶಾಲೆ ಹಾಗೂ ಕಾಲೇಜು, ಸರ್ಕಾರಿ ಆಸ್ಪತ್ರೆ 1968ರಲ್ಲಿ ಪ್ರಾರಂಭವಾದ ಆಸ್ಪತ್ರೆ ಮೇಲ್ದರ್ಜೆಗೇರಿಸುವುದು,ಉಪ ಪೊಲೀಸ್ ಸ್ಟೇಷನ್ ಸ್ಥಾಪಿಸಬೇಕು.
ಮೈಸೂರು ದಸರಾಕ್ಕೆ ಸಿಕ್ಕಂತೆ , ಕಕ್ಕೇರಿ ಗ್ರಾಮದ ಶ್ರೀ ಬಿಷ್ಟಾದೇವಿ ಜಾತ್ರೆಗೂ ಮಹತ್ವದ ಸ್ಥಾನಮಾನ ಸಿಗಬೇಕು. ಸುರಪುರ ಕೇರವಾಡ (ಹಿಡಕಲ) ಕಂದಾಯ ಗ್ರಾಮ ಮಾಡಬೇಕು, ಖಾನಾಪುರ ದಿಂದ ಲಿಂಗನಮಠ ಕ್ರಾಸ್ ವರೆಗೆ ತಾಳಗುಪ್ಪ-ಬೆಳಗಾವಿ ರಾಜ್ಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದ್ದು, ತಗ್ಗು ಗುಂಡಿಗಳಿಂದ ಕೂಡಿದ ರಸ್ತೆಯನ್ನು ದುರಸ್ತಿ ಮಾಡಿಸಬೇಕು. ಅಕ್ಟೋಬರ್ 11-10-2024. ರಂದು ವಿಜಯದಶಮಿ ಹಬ್ಬದ ನಿಮಿತ್ತ ಶ್ರೀ ಬಿಷ್ಟಾದೇವಿ ಜಾತ್ರೆ ನಾಲ್ಕು ದಿನ ನಡೆಯುತ್ತದೆ. ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಗೋವಾ, ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ಹಲವಾರು ಕಡೆಗಳಿಂದ ಭಕ್ತರು ಆಗಮಿಸುತ್ತಾರೆ. ಜನತಾದರ್ಶನ ಕಾರ್ಯಕ್ರಮ ಸೇರಿದಂತೆ ಜಿಲ್ಲಾಡಳಿತಕ್ಕೂ ಹಲವಾರು ಸಲ ಗ್ರಾಮಕ್ಕೆ ಮೂಲ ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡಿದರೂ ಜಿಲ್ಲಾಡಳಿತ ಸ್ಪಂದಿಸಿಲ್ಲ. ತಕ್ಷಣ ಗ್ರಾಮಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸಿ ಕೊಡಬೇಕು ಎಂದು ಅವರು ಒತ್ತಾಯಿಸಿದರು.
ಮೂಲಭೂತ ಸೌಲಭ್ಯ ಒದಗಿಸಿ ಕೊಡುವಂತೆ ಒತ್ತಾಯಿಸಿ ಸೆಪ್ಟೆಂಬರ್ 27ರಂದು ಕಕ್ಕೇರಿ ಗ್ರಾಮದಲ್ಲಿ ಬೆಳಗಾವಿ-ತಾಳಗುಪ್ಪ ಹೆದ್ದಾರಿ ತಡೆ ಚಳವಳಿ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.