ಹೃದಯಾಘಾತ; ಕಾಕತಿ ಪೊಲೀಸ್ ಪೇದೆ ಸಾವು..!
ಎದೆ ನೋವು ಎಂದು ಮನೆಗೆ ಹೋದ ಮೇಹಬೂಬ್ ಬರಲೇ ಇಲ್ಲಾ…!
ಬೆಳಗಾವಿ : ಕಾಕತಿ ಪೊಲೀಸ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 29 ವರ್ಷದ ಯುವ ಪೊಲೀಸ ಪೇದೆಯೊಬ್ಬ ಹೃದಯಾಘಾತದಿಂದ ಸಾವನಪ್ಪಿರುವ ಘೋರ ಘಟನೆ ಇಂದು ಸಂಭವಿಸಿದೆ.
29 ವರ್ಷದ ಮೆಹಬೂಬ್ ರಾಜಮಹ್ಮದ ರೇಶ್ಮಿ ಎಂಬಾತ ಮೃತ ದುರ್ದೈವಿ.
ಇವರು ಇಂದು(ಸೋಮವಾರ) ಮುಂಜಾನೆ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೇಳೆ ಎದೆ ನೋವು ಎಂದು ಮನೆಗೆ ಹೋಗಿದ್ದಾರೆ. ಸ್ವಲ್ಪ ಸಮಯದ ನಂತರ ಮನೆಯಿಂದ ಠಾಣೆಗೆ ಕರೆ ಬಂದ ಮೇಲೆ ಸಿಬ್ಬಂದಿಗಳು ಅವರನ್ನು ಕೆಎಲ್ಇ ಆಸ್ಪತ್ರೆಗೆ ದಾಖಲಿಸಲು ಬಂದಾಗ ಅವರು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ಖಚಿತ ಪಡಿಸಿದ್ದಾರೆ.
ದಂಪತಿಗಳಿಬ್ಬರು ಪೊಲೀಸರು..!
ಮೃತ ಮೆಹಬೂಬ್ ರೇಶ್ಮಿ ಮತ್ತು ಪತ್ನಿ ಒಂದೇ ಇಲಾಖೆಯಲ್ಲಿ ಹಾಗೂ ಒಂದೇ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಸುಖ ದಂಪತಿಗಳಾಗಿದ್ದ ಇವರು ಇತ್ತೀಚೆಗಷ್ಟೇ ಎರಡನೇ ಮಗುವಿನ ತಂದೆಯಾಗಿದ್ದರು.
ಮೃತ ಮೇಹಬೂಬ್ ಅವರಿಗೆ ತ ಪತ್ನಿ, ಇಬ್ನರು ಪುತ್ರರು, ಸೇರಿದಂತೆ ಅಪಾರ ಬಂಧು ಬಳಗ ಇದ್ದಾರೆ.
ಮೆಹಬೂಬ್ ನಿಧನಕ್ಕೆ ನಗರ ಪೊಲೀಸ್ ಕಮೀಷನರ್, ಡಿಸಿಪಿ ಪಿವಿ ಸ್ನೇಹಾ, ಡಿಸಿಪಿ ಶೇಖರ ಎಸಿಪಿಗಳಾದ ನಾರಾಯಣ ಭರಮನಿ, ಎಸ್ ವಿ ಗಿರೀಶ್, ಪಿಐ ಗುರುನಾಥ, ಕೌಜಲಗಿ, ಹಳ್ಳೂರ, ಸಿನ್ನೂರ, ಪಿಎಸ್ಐಗಳಾದ ಅವಿನಾಶ ಯರಗೊಪ್ಪ, ಮಂಜುನಾಥ ಹುಲಕುಂದ ಹಾಗೂ ಹಿರಿಯ ಅಧಿಕಾರಿಗಳು ಸೇರಿದಂತೆ ಇಲಾಖೆಯ ಮತ್ತು ಕಾಕತಿ ಪೊಲೀಸ್ ಠಾಣೆಯ ಸರ್ವ ಸಿಬ್ಬಂದಿಗಳು ಕಂಬನಿ ಮಿಡಿದಿದ್ದಾರೆ.