ಕಾಕತಿ ಪಿಐ ವಿಜಯಕುಮಾರ ಸಿನ್ನೂರ ಸಸ್ಪೆಂಡ್..!
ಕೊನೆಗೂ ಬೇಜವಾಬ್ದಾರಿತನ ತೋರಿದ್ದ ಪೊಲೀಸಪ್ಪನ ಮೇಲೆ ಆಯ್ತು ಕ್ರಮ..!
ವಂಟಮೂರಿ ಪ್ರಕರಣದಲ್ಲಿ ಪೊಲೀಸ್ ಇಲಾಖೆಗೆ ಚಾಟಿ ಬಿಸಿದ್ದ ಹೈಕೋರ್ಟ್ ..!
ಪಿಐ ಬೇಜವಾಬ್ದಾರಿತನದ ಸುದ್ದಿ ಬಿತ್ತಿರಿಸಿದ್ದ “ಜನಜೀವಾಳ”.
ಬೆಳಗಾವಿ : ಕಾಕತಿ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿನ ಹೊಸವಂಟಮೂರಿ ಗ್ರಾಮದಲ್ಲಿ ಮಹಿಳೆಯೊಂದಿಗೆ ನಡೆದ ಅಮಾನವೀಯ ಘಟನೆಯಲ್ಲಿ ಕಾಕತಿ ಪಿಐ ವಿಜಯಕುಮಾರ ಸಿನ್ನೂರ ಒಬ್ಬ ಪೊಲೀಸ್ ಅಧಿಕಾರಿಯಾಗಿ ಜವಾಬ್ದಾರಿಯುತವಾಗಿ ನಡೆದುಕೊಳ್ಳದೆ, ಉದ್ದೇಶ ಪೂರ್ವಕವಾಗಿ ಬೇಜವಾಬ್ದಾರಿ ತೋರಿಸಿದ್ದಕ್ಕೆ ಇಂದು ಅವರನ್ನು ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಸೇವೆಯಿಂದ ಅಮಾನತ್ತು ಮಾಡಲಾಗಿದೆ.
ಈ ಪ್ರಕರಣದಲ್ಲಿ ಪೊಲೀಸರು ಸರಿಯಾಗಿ ಕೆಲಸ ಮಾಡಿದ್ದರೆ ಈ ಪ್ರಕರಣ ಇಷ್ಟೊಂದು ದೊಡ್ಡ ದಾಗಿ ಆಗುತ್ತಿರಲಿಲ್ಲ ಎಂದು ಪೊಲೀಸ್ ಇಲಾಖೆಗೆ ಹೈಕೋರ್ಟ್ ಚಾಟಿ ಬಿಸಿ ಅಧಿಕಾರಿಯ ಕರ್ತವ್ಯಲೋಪದ ಬಗ್ಗೆ ವರದಿ ಕೇಳಿತ್ತು. ಇದರಿಂದಾಗಿ ಇಲಾಖೆಗೆ ಕಳಂಕ ಬಂದ ಹಿನ್ನಲೆಯಲ್ಲಿ ಉದ್ದೇಶ ಪೂರ್ವಕವಾಗಿ ಬೆಜವಾಬ್ದಾರಿ ತೋರಿದ್ದ ಕಾಕತಿ ಪಿಐ ಸಿನ್ನೂರ ಅವರನ್ನು ಅಮಾನತ್ತು ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಪಿಐ ಬೇಜವಾಬ್ದಾರಿತನದ ಸುದ್ದಿ ಬಿತ್ತಿರಿಸಿದ್ದ “ಜನಜೀವಾಳ”.
ಪಿಐ ಬೇಜವಾಬ್ದಾರಿತನ ತೋರಿದ ಬಗ್ಗೆ ಜನಜೀವಾಳ ದಿನಪತ್ರಿಕೆ “ಘಟನೆ ನಡೆದು 5 ಘಂಟೆಯ ಮೇಲೆ ಬಂದು ಪೊಸ್ ಕೊಟ್ಟ ಕಾಕತಿ ಠಾಣಾಧಿಕಾರಿ” ಎಂಬ ಶೀರ್ಷಿಕೆ ಹಾಕಿ ವರದಿ ಮಾಡಿ ಸತ್ಯದ ಅನಾವರಣ ಮಾಡಲಾಗಿತ್ತು.