ಕೊಯಮತ್ತೂರು : ತಮಿಳುನಾಡಿನ ಕೊಯಮತ್ತೂರಿನಲ್ಲಿ ಶನಿವಾರ (ಜನವರಿ 18) ರಾತ್ರಿ ಕಾಡಾನೆಯೊಂದು ಮನೆಯೊಂದಕ್ಕೆ ನುಗ್ಗಲು ಯತ್ನಿಸಿದ ಭಯಾನಕ ಘಟನೆ ನಡೆದಿದೆ. ಅನಿರೀಕ್ಷಿತ ಅತಿಥಿಯ ಭೇಟಿಯಿಂದ ಮನೆಯೊಳಗಿದ್ದ ಜನರು ಭಯಭೀತರಾಗಿದ್ದರು. ಈ ಘಟನೆಯನ್ನು ಮನೆಯವರೇ ವೀಡಿಯೊ ಮಾಡಿದ್ದು, ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದೃಷ್ಟವಶಾತ್ ಆನೆ ಮನೆಯೊಳಗೆ ನುಗ್ಗದ ಕಾರಣ ಯಾರಿಗೂ ಹಾನಿಯಾಗಿಲ್ಲ, ಬಾಗಿಲ ಬಳಿಯೇ ನಿಂತಿದ್ದ ಆನೆ ಅಕ್ಕಿ ಮೂಟೆಯನ್ನು ಕಿತ್ತುಕೊಂಡು ತಿಂದಿದೆ.
ವರದಿಗಳ ಪ್ರಕಾರ, ಕೊಯಮತ್ತೂರು ಜಿಲ್ಲೆಯ ತೆರ್ಕ್ಕುಪಾಳ್ಯಂನ ವಸತಿ ಪ್ರದೇಶದಲ್ಲಿ ಗಂಡು ಕಾಡು ಆನೆಯೊಂದು ಅಲೆದಾಡಿದೆ ಕಾಡಾನೆ ಮನೆಗೆ ನುಗ್ಗಿ ಅಕ್ಕಿ ಸೇರಿದಂತೆ ಹಲವು ಸಾಮಾನುಗಳನ್ನು ದೋಚಿಕೊಂಡು ತೆರಳಿದೆ. ಒಳಗಿದ್ದ ನಾಲ್ವರು ವಲಸೆ ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಾಡಿಗೆ ಮನೆಯಲ್ಲಿ ವಾಸವಿದ್ದ ಕಾರ್ಮಿಕರು ಅಡುಗೆ ಮಾಡುತ್ತಿದ್ದು, ಸಮೀಪದಲ್ಲಿ ಆನೆ ಓಡಾಡುತ್ತಿರುವುದನ್ನು ಗಮನಿಸಿದ್ದಾರೆ. ತಕ್ಷಣವೇ ಅವರುಆಕರ್ಷಿಸುವುದನ್ನು ತಪ್ಪಿಸಲು ಗ್ಯಾಸ್ ಸ್ಟೌವ್ ಅನ್ನು ಆಫ್ ಮಾಡಿದ್ದಾರೆ.
l
ಆನೆಯು ತನ್ನ ಸೊಂಡಿಲನ್ನು ಬಳಸಿ ಮನೆಯೊಳಗೆ ತನಗೆ ಏನು ತಿನ್ನಲು ಲಭ್ಯವಿದೆ ಎಂಬುದನ್ನು ಪರಿಶೀಲಿಸಿದೆ. ಅದು ತನ್ನ ಸೊಂಡಿಲಿನಿಂದ ಮನೆಯೊಳಗಿನ ಎಲ್ಲವನ್ನೂ ಮುಟ್ಟಿದೆ. ಆನೆ ತನ್ನ ಸೊಂಡಿಲಿನಿಂದ ಗ್ಯಾಸ್ ಸಿಲಿಂಡರ್ ಅನ್ನು ಸಹ ಸ್ಪರ್ಶಿಸಿದೆ. ಅದೃಷ್ಟವಶಾತ್, ಮನೆಯೊಳಗಿದ್ದ ವಲಸೆ ಕಾರ್ಮಿಕರು ಗ್ಯಾಸ್ ಆಫ್ ಮಾಡಿದ್ದರು. ಕೊನೆಗೆ ಆನೆ ಮನೆಯಲ್ಲಿದ್ದ ಅಕ್ಕಿ ಚೀಲವನ್ನು ಎಳೆದುಕೊಂಡು ತಿಂದಿದೆ. ನಂತರ ಅದು ಯಾವುದಕ್ಕೂ ಹಾನಿ ಮಾಡದೆ ಸ್ಥಳವನ್ನು ಬಿಟ್ಟುಹೋಗಿದೆ.
ಆನೆಯು ಹಸಿವಿನಿಂದಾಗಿ ಆಹಾರಕ್ಕಾಗಿ ಮನೆಗೆ ಬಂದಿರಬಹುದು ಎಂದು ಊಹಿಸಲಾಗಿದೆ. ಈ ಘಟನೆಯು ಕಾಡುಗಳ ಸಮೀಪವಿರುವ ಪ್ರದೇಶಗಳಲ್ಲಿ ವನ್ಯಜೀವಿಗಳು ಮತ್ತು ಮನುಷ್ಯರ ನಡುವಿನ ಸಂಘರ್ಷ ಹಾಗೂ ಭೇಟಿಯನ್ನು ಎತ್ತಿ ತೋರಿಸುತ್ತದೆ. ಯಾವುದೇ ಸಂಭವನೀಯ ಅಪಾಯವನ್ನು ತಪ್ಪಿಸಲು ಜಾಗರೂಕರಾಗಿರಲು ಸಲಹೆ ನೀಡಲಾಗಿದೆ.