ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆಗೆ ನ್ಯಾಯಾಲಯ ಮತ್ತೊಮ್ಮೆ ಬಲವಾದ ತಪರಾಕಿ ನೀಡಿದೆ. ಬೆಳಗಾವಿಯ ಶಹಾಪುರ ಬ್ಯಾಂಕ್ ಆಫ್ ಇಂಡಿಯಾದಿಂದ ಹಳೆ ಬೆಳಗಾವಿವರೆಗೆ ನಿರ್ಮಿಸಲಾದ ರಸ್ತೆ ವಿಷಯಕ್ಕೆ ಸಂಬಂಧಿಸಿ ಭೂ ಪರಿಹಾರ ವಿಷಯದಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳು ಮಹಾನಗರ ಪಾಲಿಕೆಗೆ ಖಡಕ್ ಸಂದೇಶ ರವಾನಿಸಿದ್ದಾರೆ. ಈ ಮೂಲಕ ನ್ಯಾಯಾಲಯ ಮತ್ತೊಮ್ಮೆ ಮಹಾನಗರ ಪಾಲಿಕೆಯ ನಿರ್ಲಕ್ಷ್ಯವನ್ನು ಎತ್ತಿ ಹಿಡಿದಿದ್ದು ಇನ್ನು ಮುಂದೆ ಇಂತಹ ನಿರ್ಲಕ್ಷ್ಯವನ್ನು ಸಹಿಸಲಾರದು ಎಂದು ಎಚ್ಚರಿಕೆ ರವಾನಿಸಿದೆ.
ಇದೇ ತಿಂಗಳ 23 ರೊಳಗೆ ಜಾಗ
ಕೊಡದಿದ್ದರೆ ಸ್ವತಃ ಮಹಾನಗರ ಪಾಲಿಕೆಗೆ ದಂಡ ಹಾಕುವುದಾಗಿ ಕಠಿಣ ಎಚ್ಚರಿಕೆ ರವಾನಿಸಿದೆ.
ಲ್ಯಾಂಡನ್ನು ರಾಬರಿ ಮಾಡಕ್ಕೆ ಬರಲ್ಲ. ಲ್ಯಾಂಡ್ ತಗೊಳುವುದಿದ್ದರೆ ದುಡ್ಡು ಕೊಡಬೇಕು.
ಸೋಮವಾರದೊಳಗೆ ಗೌರವಯುತವಾಗಿ ಆ ಲ್ಯಾಂಡ್ ಕೊಡಿ ಎಂದು ತಿಳಿಸಿದೆ.
ಭೂಮಿಯನ್ನು ಮೂಲ ಮಾಲೀಕರಿಗೆ ಹಿಂದಿರುಗಿಸಿದರೆ ಸಂಭವನೀಯ ಕ್ರಮವನ್ನು ಮರುಪರಿಶೀಲಿಸಲಾಗುವುದು ಎಂದು ತಿಳಿಸಲಾಯಿತು.
ಬೆಳಗಾವಿ ಶಹಾಪುರದ ಬ್ಯಾಂಕ್ ಆಫ್ ಇಂಡಿಯಾದಿಂದ ಹಳೇ ಬೆಳಗಾವಿವರೆಗೆ ನಿರ್ಮಿಸಿದ ಭೂ ಪರಿಹಾರ ವಿಷಯದಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳು ಮಹಾನಗರ ಪಾಲಿಕೆ ಕುರಿತು ಖಡಕ್ ಮಾತುಗಳಿವು.
ಕಳೆದ ಸಲ ಈ ಬಗ್ಗೆ ಮಾತುಕತೆ ಆಗಿದೆ. ಈಗ ಈಗ ಮತ್ತದೇ 5 ವರ್ಷ ಚರ್ಚೆ ಮಾಡೊಕೆ ಆಗಲ್ಲ ಎಂದು ಜಡ್ಜ್ ಗರಂ ಆದರು.
.ಈ ಜಾಗವನ್ನು ಹಸ್ತಾಂತರಿಸುವಾಗ ಪೊಲೀಸ್ ಪಡೆಯನ್ನು ನಿಯೋಜಿಸಬೇಕು, ಪ್ರತಿವಾದಿ ಅಥವಾ ಬೇರೆ ಯಾರಾದರೂ ಹಸ್ತಾಂತರಕ್ಕೆ ವಿರೋಧ ವ್ಯಕ್ತಪಡಿಸಿದರೆ ಅವರನ್ನು ಕೂಡಲೇ ಬಂಧಿಸಬೇಕು ಎಂದು ಕೋರ್ಟ್ ಸೂಚನೆ ನೀಡಿದೆ.
ನ್ಯಾಯಾಲಯವು ತೀರ್ಪನ್ನು ಕಾಯ್ದಿರಿಸಿ ವಿಚಾರಣೆಯನ್ನು ಬರುವ 23ಕ್ಕೆ ಮುಂದೂಡಿತು,
ಮಂಗಳವಾರ ನ್ಯಾಯಾಲಯದಲ್ಲಿ ಪಾಲಿಕೆ ಸಲ್ಲಿಸಿದ ಅಫಿಡವಿಟ್ ಬಗ್ಗೆ ವಿಚಾರಣೆ ಆರಂಭವಾಗುತ್ತಿದ್ದಂತೆಯೇ ಪಾಲಿಕೆ ಪರ ವಕೀಲರು ಈ ರಸ್ತೆಯನ್ನು ಸ್ಮಾರ್ಟ್ ಸಿಟಿಯವರು ಇನ್ನೂ ಹಸ್ತಾಂತರಿಸಿಲ್ಲ ಎಂದು ಹೇಳಿದರು, ಈ ವೇಳೆ ಸ್ಮಾರ್ಟ್ ಸಿಟಿ ಇಲಾಖೆಯ ವಕೀಲರು ತಮ್ಮ ವಾದವನ್ನು ಪ್ರಸ್ತಾಪಿಸುತ್ತಿದ್ದಂತೆಯೇ ಅದಕ್ಕೆ ನ್ಯಾಯಮೂರ್ತಿಗಳು
ಅದಕ್ಕೆ ಅವಕಾಶ ಕೊಡಲಿಲ್ಲ.
ಇಲ್ಲಿ ಲ್ಯಾಂಡನ್ನು ರಾಬರಿ ಮಾಡಕ್ಕೆ ಬರಲ್ಲ. ಲ್ಯಾಂಡ್ ತಗೋಳುವುದಿದ್ದರೆ ದುಡ್ಡು ಕೊಡಬೇಕು ಎಂದರು.
ನ್ಯಾಯಮೂರ್ತಿಗಳು ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತ ಅಶೋಕ ದುಡಗುಂಟಿ ಅವರನ್ನು ಗಮನಿಸಿ, ಖಾಸಗಿ ಭೂಮಿಯನ್ನು ದರೋಡೆ ಮಾಡಲು ಆಗುವುದಿಲ್ಲ. ಜನರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕಲ್ಲವೇ ?ನಾವೇನು ತಾಜ್ ಮಹಲ್ ಕಟ್ಟಿಸಲು ಹೇಳುತ್ತಿದ್ದೇವೆಯೇ ?ಸಂತ್ರಸ್ತರಿಗೆ ಪರಿಹಾರ ಕೊಡಿ ಅಷ್ಟೇ. ಒಂದೇ ದಿನದಲ್ಲಿ ಭೂಮಿ ಮರಳಿಸಬೇಕು, ಇಲ್ಲವಾದರೆ, ದಂಡ ಕೊಡಬೇಕು ಎಂದು ಎಚ್ಚರಿಕೆ ನೀಡಿದರು.
ಮಹಾನಗರ ಪಾಲಿಕೆ ಪರ ವಕೀಲ ಚೈತನ್ಯ ಮುನವಳ್ಳಿ ಅವರು ದಂಡ, ಶಿಕ್ಷೆ ಪ್ರಮಾಣ ಕಡಿಮೆ ಮಾಡಬೇಕು. ಕಾಲಾವಕಾಶ ಕೊಡಬೇಕು. ಸ್ಮಾರ್ಟ್ ಸಿಟಿ ಕಂಪನಿ ಕಾಮಗಾರಿ ಮಾಡಿದ್ದು ಪಾಲಿಕೆಗೆ ಇದುವರೆಗೆ ಹಸ್ತಾಂತರವಾಗಿಲ್ಲ. ಇದರಲ್ಲಿ ಸ್ಮಾರ್ಟ್ ಸಿಟಿ ಅಧಿಕಾರಿಗಳ ತಪ್ಪಿದೆ ಎಂದು ವಾದಿಸಿದರು. ಆದರೆ ಇದಕ್ಕೆ ಸಮಾಧಾನಗೊಳ್ಳದ ನ್ಯಾಯಮೂರ್ತಿಗಳು ಹಸ್ತಾಂತರವಾಗಿಲ್ಲ ಎಂದಾದರೆ ಪಾಲಿಕೆ ಸಭೆಯಲ್ಲಿ ಪಾಸ್ ಮಾಡಿ ಪರಿಹಾರವನ್ನು ಹೇಗೆ ಘೋಷಣೆ ಮಾಡಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು. ಸೆಪ್ಟೆಂಬರ್ 23ರ ಸೋಮವಾರದೊಳಗೆ ಭೂಮಿ ಮರಳಿಸಿದರೆ ನೀವು ದಂಡ ಮತ್ತು ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತೀರಿ. ಇಲ್ಲವಾದರೆ ಆಜ್ಞೆಯ ಪ್ರತಿ ಸಿದ್ಧವಾಗಿ ಇಟ್ಟಿರುತ್ತೇನೆ ಅಂದು ಸಹಿ ಮಾಡುತ್ತೇನೆ ಎಂದು ನ್ಯಾಯಮೂರ್ತಿಗಳು ಎಚ್ಚರಿಕೆ ನೀಡಿದರು. ಸಂತ್ರಸ್ತರ ಪರವಾಗಿ ವಾದಿಸಿದ ನ್ಯಾಯವಾದಿ ಆರ್. ಕೆ. ಪಾಟೀಲ್ ಅವರು ಇದು ಒಬ್ಬರ ಸಮಸ್ಯೆಯಲ್ಲ, ಅಧಿಕಾರಿಗಳು ಸಾರ್ವಜನಿಕರ ಹಣವನ್ನು ವ್ಯರ್ಥ ಮಾಡಿದ್ದಾರೆ ಎಂದರು.
ಬೆಳಗಾವಿ ಶಹಾಪುರ ಬ್ಯಾಂಕ್ ಆಫ್ ಇಂಡಿಯಾದಿಂದ ಹಳೆ ಬೆಳಗಾವಿ ರಸ್ತೆವರೆಗೆ ದ್ವಿಪಥ ರಸ್ತೆ ನಿರ್ಮಾಣ ಮಾಡಲು 23 ಗುಂಟೆ ಜಾಗವನ್ನು 2021 ರಲ್ಲಿ ಬಳಸಿಕೊಳ್ಳಲಾಗಿತ್ತು. ಆದರೆ, ಕಾಮಗಾರಿ ಮಾಡಿ, ನಂತರ ದರ ನಿಗದಿಪಡಿಸಲಾಗಿತ್ತು! ಇದು ಈಗ ವಿವಾದವನ್ನು ಹುಟ್ಟುಹಾಕಿದೆ.
ಅದರಂತೆ ಭೂಮಾಲೀಕರಿಗೆ 20 ಕೋಟಿ ರೂ.ನೀಡಬೇಕು ಎಂದು ಭೂ ಸ್ವಾಧೀನ ಅಧಿಕಾರಿಗಳೇ ಹೇಳಿದ್ದರಿಂದ ಈಗ 20 ಕೋಟಿ ರೂಪಾಯಿ ಪರಿಹಾರ ಕೊಡಬೇಕು ಎಂದು ಹೈಕೋರ್ಟ್ ತಿಳಿಸಿದೆ.
ಈ ನಡುವೆ ಭೂಮಾಲಿಕರಾಗಿರುವ ಬಾಳಾಸಾಹೇಬ್ ಪಾಟೀಲ್ ಅವರು ನ್ಯಾಯ ಕೋರಿ ಧಾರವಾಡದ ಹೈಕೋರ್ಟ್ ಕಟ್ಟೆ ಹತ್ತಿದ್ದರು. ಮುಂಚಿತವಾಗಿ ಅಧಿಕಾರಿಗಳು 20 ಕೋಟಿ ರೂ.ಪರಿಹಾರ ನೀಡಲು ಒಪ್ಪಿದೆ. ಹೀಗಾಗಿ ಹೈಕೋರ್ಟ್ ತನ್ನ ಆದೇಶ ತಿಳಿಸಿದೆ.
ಆದರೆ ಕೆಲ ಬೆಳವಣಿಗೆಗಳ ನಂತರ ಮಹಾನಗರ ಪಾಲಿಕೆ ಅಧಿಕಾರಿಗಳು ಪರಿಹಾರ ಕೊಡಲು ನಮ್ಮ ಬಳಿ ಅಷ್ಟು ಹಣವಿಲ್ಲ, ಮಾಲೀಕರಿಗೆ ಭೂಮಿಯನ್ನು ಹಿಂದಿರುಗಿಸುವುದಾಗಿ ಹೇಳಿದ್ದರು.
ಒಟ್ಟಾರೆ ಇದೀಗ ಮುಂದಿನ ಬೆಳವಣಿಗೆಗಳಾದ ಇಡೀ ಬೆಳಗಾವಿ ಮಹಾನಗರದ ಜನತೆ ಕುತೂಹಲದಿಂದ ಕಾಯುತ್ತಿದ್ದಾರೆ.