ಬೆಳಗಾವಿ :
ಮುಂಗಾರು-೨೦೨೩ ನೇ ಹಂಗಾಮಿಗೆ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ದ್ರಾಕ್ಷಿ, ದಾಳಿಂಬೆ, ಮಾವು ಹಾಗೂ ಹಸಿ ಮೆನಸಿಣಕಾಯಿ ಬೆಳೆಗಳಿಗೆ ಬೆಳೆ ವಿಮೆ ಪಾವತಿಸಬಹುದಾಗಿದೆ.
ಅಥಣಿ ತಾಲ್ಲೂಕಿಗೆ ದ್ರಾಕ್ಷಿ ಹಾಗೂ ದಾಳಿಂಬೆ, ಬೈಲಹೊಂಗಲ ಮತ್ತು ಕಿತ್ತೂರು ತಾಲ್ಲೂಕಿಗೆ ಮಾವು ಹಾಗೂ ಹಸಿಮೆಣಸಿನಕಾಯಿ, ಬೆಳಗಾವಿ ತಾಲ್ಲೂಕಿಗೆ ಮಾವು ಬೆಳೆ, ಚಿಕ್ಕೋಡಿ ನಿಪ್ಪಾಣಿ ತಾಲ್ಲೂಕಿಗೆ ಹಸಿಮೆಣಸಿನಕಾಯಿ ಬೆಳೆ, ಗೋಕಾಕ ಮೂಡಲಗಿ ತಾಲ್ಲೂಕಿನ ಕೌಜಲಗಿ ಹೋಬಳಿಗೆ ದ್ರಾಕ್ಷಿ ಬೆಳೆ, ಗೋಕಾಕ ಹೋಬಳಿಗೆ ಮಾವು, ಗೋಕಾಕ, ಅರಭಾಂವಿ ಹಾಗೂ ಕೌಜಲಗಿ ಹೋಬಳಿಗಳಿಗೆ ಹಸಿಮೆಣಸಿನಕಾಯಿ ಬೆಳೆ, ಹುಕ್ಕೇರಿ ತಾಲ್ಲೂಕಿಗೆ ಹಸಿಮೆಣಸಿನಕಾಯಿ ಬೆಳೆ, ಖಾನಾಪೂರ ತಾಲ್ಲೂಕಿನ ಖಾನಾಪುರ ಹಾಗೂ ಬೀಡಿ ಹೋಬಳಿಗಳಿಗೆ ಮಾವು, ರಾಯಬಾಗ ತಾಲೂಕಿಗೆ ದ್ರಾಕ್ಷಿ, ರಾಮದುರ್ಗ ತಾಲ್ಲೂಕಿನ ಮುದಕವಿ, ಕೆ, ಚಂದರಗಿ, ಕಟಕೋಳ, ಹೋಬಳಿಗಳಿಗೆ ದ್ರಾಕ್ಷಿ ಹಾಗೂ ದಾಳಿಂಬೆ ಬೆಳೆ ಮತ್ತು ಸವದತ್ತಿ ಯರಗಟ್ಟಿ ತಾಲ್ಲೂಕಿಗೆ ಹಸಿಮೆಣಸಿನಕಾಯಿ ಬೆಳೆಗಳಿಗೆ ಜುಲೈ.೩೧ ೨೦೨೩ ರೊಳಗಾಗಿ ಬೆಳೆ ವಿಮಾ ಪಾವತಿಸಲು ಕೊನೆಯ ದಿನಾಂಕವಾಗಿರುತ್ತದೆ.
ಪ್ರತಿ ಹೆಕ್ಟೇರ್, ದ್ರಾಕ್ಷಿ ಬೆಳೆಗೆ ರೂ. ೧೪೦೦೦/-, ದಾಳಿಂಬೆ ಬೆಳೆಗೆ ರೂ. ೬೩೫೦/-, ಮಾವು ಬೆಳೆಗೆ ರೂ. ೪೦೦೦/- ಹಾಗೂ ಹಸಿಮೆಣಸಿನಕಾಯಿ ಬೆಳೆಗೆ ರೂ. ೩೫೫೦/- ರಂತೆ ರೈತರ ವಂತಿಕೆಯ ವಿಮಾ ಕಂತು ಸರ್ಕಾರದ ಅಧಿಸೂಚನೆ ಯಂತೆ ನಿಗದಿಯಾಗಿರುತ್ತದೆ.
ಈ ಯೋಜನೆಗಳಿಗೆ ಸಂಬಂಧಪಟ್ಟಂತೆ ಅಧಿಸೂಚಿತ ಗ್ರಾಮ ಪಂಚಾಯತಿ/ಹೋಬಳಿವಾರು ಬೆಳೆಗಳ ವ್ಯಾಪ್ತಿಯ ಕುರಿತು ಸಂಬಂಧಪಟ್ಟ ತಾಲ್ಲೂಕು ಮತ್ತು ಹೋಬಳಿ ಮಟ್ಟದ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಿ, ಹತ್ತಿರದ ಬ್ಯಾಂಕ್ ಶಾಖೆಗಳಲ್ಲಿ, ಗ್ರಾಮ-ಒನ್ ಅಥವಾ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಎಮೆ ಕಂತು ಪಾವತಿಸಬಹುದು.
ಅಧಿಸೂಚಿತ ಬೆಳೆಗಳಿಗೆ ಸಾಲ ಪಡೆದ ರೈತರ ವಂತಿಕೆಯನ್ನು ಸಾಲ ಪಡೆದ ಬ್ಯಾಂಕ್ ಗಳಿಂದಲೇ ವಿಮಾ ಮೊತ್ತ ಕಟಾವುಗೊಳಿಸಲಾಗುವುದು, ಆಕ್ಷೇಪಣೆಗಳಿದ್ದಲ್ಲಿ ಕೂಡಲೆ ಬ್ಯಾಂಕ್ಗಳನ್ನು ಸಂಪರ್ಕಿಸಬೇಕು. ಬೆಳಗಾವಿ ಜಿಲ್ಲೆಗೆ ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಗೆ ಕಂಪನಿಯು ಅಧಿಸೂಚಿತ ವಿಮಾ ಕಂಪನಿಯಾಗಿರುತ್ತದೆ. ರೈತರು ಈ ಯೋಜನೆಯ ಸದುಪಯೋಗ ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ ಹೋಬಳಿ/ತಾಲ್ಲೂಕೂ ಮಟ್ಟದ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ: ಬೆಳಗಾವಿ: ೦೮೩೧-೨೪೩೧೫೫೯, ಗೋಕಾಕ: ೦೮೩೩೨-೨೨೯೩೮೨, ಖಾನಾಪೂರ: ೦೮೩೩೬-೨೨೩೩೮೭, ಸವದತ್ತಿ: ೦೮೩೩೦-೨೨೨೦೮೨, ಅಥಣಿ: ೦೮೨೮೯-೨೮೫೦೯೯, ರಾಮದುರ್ಗ: ೦೮೩೩೫-೨೪೧೫೧೨, ರಾಯಬಾಗ : ೦೮೩೩೧-೨೨೫೦೪೯, ಹುಕ್ಕೇರಿ : ೦೮೩೩೩-೨೬೫೯೧೫ ಚಿಕ್ಕೋಡಿ : ೦೮೩೩೮-೨೭೪೯೪೩, ಬೈಲಹೊಂಗಲ : ೦೮೨೮೮-೨೩೩೭೫೮ ಗೆ ಸಂಪರ್ಕಿಸಬಹುದು ಎಂದು ಬೆಳಗಾವಿ ತೋಟಗಾರಿಕೆ’ ಉಪನಿರ್ದೇಶಕರು (ಜಿ.ಪಂ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.