ಬೆಂಗಳೂರು :
ಒಬಿಸಿ ಮಾಲಿಕತ್ವದ ಪತ್ರಿಕೆಗಳ ಕೆಲ ಪದಾಧಿಕಾರಿಗಳ ನೇತೃತ್ವದಲ್ಲಿ ಇಂದು ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಹಾಗೂ ಇಲಾಖೆ ಆಯುಕ್ತ ಜಯರಾಮ ಅವರನ್ನು ಭೇಟಿ ಮಾಡಿ ಒಬಿಸಿ ಜಾಹೀರಾತಿನ ಬಗ್ಗೆ ಚರ್ಚಿಸಿದರು.
ಪ್ರಭಾಕರ್ ಅವರನ್ನು ಭೇಟಿ ಮಾಡಿದಾಗ ಇಲಾಖೆ ಕಾರ್ಯದರ್ಶಿ ಎನ್.ಜಯರಾಮ್ ಅವರಿಗೆ ಜಾಹೀರಾತಿನ ಬಗ್ಗೆ ತ್ವರಿತ ಕ್ರಮ ಜರುಗಿಸುವಂತೆ ತಿಳಿಸಿದರು.
ಅದರಂತೆ ಆಯುಕ್ತ ಜಯರಾಮ್ ಅವರೊಂದಿಗೆ ಒಂದು ಗಂಟೆ ಸಮಯ ಚರ್ಚಿಸಿ ಕೊನೆಗೂ ತಾರ್ಕಿಕ ಅಂತ್ಯಕ್ಕೆ ಬರಲಾಯಿತು.ಒಂದು ವಾರದೊಳಗೆ ಜೂನ್ ತಿಂಗಳಿಂದ ಅನ್ವಯವಾಗುವಂತೆ ಜಾಹೀರಾತು ನೀಡಲಾಗುವುದು. ಮೇ, ಏಪ್ರಿಲ್ ತಿಂಗಳ ಜಾಹೀರಾತನ್ನು ನಂತರ ಸರ್ಕಾರದೊಂದಿಗೆ ಸಮಾಲೋಚಿಸಿ ಬಿಡುಗಡೆ ಮಾಡುವುದಾಗಿ ಜಯರಾಮ ತಿಳಿಸಿದರು.
ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷ
ಶಿವಾನಂದ ತಗಡೂರು, ಮಲ್ಲಿಕಾರ್ಜುನ ಕಬ್ಬೂರು, ರಾಜು ನದಾಫ ಸೇರಿದಂತೆ ಪತ್ರಕರ್ತರು ಉಪಸ್ಥಿತರಿದ್ದರು.