ಬೆಂಗಳೂರು :
ಕರ್ನಾಟಕ ಏಕೀಕರಣದ ವೀರಾಗ್ರಣಿ ಡಾ. ಜಯದೇವತಾಯಿ ಲಿಗಾಡೆ ಅವರ ಹೆಸರಿನಲ್ಲಿ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಗಡಿನಾಡ ಚೇತನ ಪ್ರಶಸ್ತಿಯನ್ನು ಗುರುವಾರ ಬೆಂಗಳೂರಿನ ಗಾಂಧಿ ಭವನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರದಾನ ಮಾಡಿದರು. ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ.ಚಂದ್ರಶೇಖರ ಕಂಬಾರ, ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ, ಮತ್ತೊಬ್ಬ ಪ್ರಶಸ್ತಿ ವಿಜೇತ ಎಂ.ಎಸ್.ಸಿಂಧೂರ,
ಮಾಜಿ ಸಚಿವರಾದ ರಾಣಿ ಸತೀಶ, ಲೀಲಾದೇವಿ ಪ್ರಸಾದ, ಕಾಸರಗೋಡು ಎಡನೀರು ಮಠದ ಪ್ರತಿನಿಧಿ, ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ ಮತ್ತಿಹಳ್ಳಿ ಅವರು ಉಪಸ್ಥಿತರಿದ್ದರು.