ಟೋಕಿಯೋ : ನಿರಾಶಾದಾಯಕ ಚುನಾವಣಾ ಫಲಿತಾಂಶಗಳ ನಂತರ ಅದರ ಸ್ಥಾಪಕರ ಹಠಾತ್ ನಿರ್ಗಮನದ ನಂತರ, ಜಪಾನಿನ ರಾಜಕೀಯ ಪಕ್ಷವೊಂದು ಮಂಗಳವಾರ ಕೃತಕ ಬುದ್ಧಿಮತ್ತೆ(AI)ಯನ್ನೇ ತನ್ನ ಹೊಸ ನಾಯಕನನ್ನಾಗಿ ನೇಮಿಸುವುದಾಗಿ ಘೋಷಿಸಿದೆ ಎಂದು ಎಎಫ್ಪಿ (AFP) ವರದಿ ಮಾಡಿದೆ.
ಈ ವರ್ಷದ ಜುಲೈನಲ್ಲಿ ನಡೆದ ದೇಶದ ಮೇಲ್ಮನೆ ಚುನಾವಣೆಯಲ್ಲಿ ಪಾತ್ ಟು ರೀಬರ್ತ್ ಪಕ್ಷದ 10 ಅಭ್ಯರ್ಥಿಗಳು ಸೋಲನುಭವಿಸಿದ ನಂತರ ಪಕ್ಷದ ಸಂಸ್ಥಾಪಕ ಶಿಂಜಿ ಇಶಿಮಾರ್ ಇತ್ತೀಚೆಗೆ ಪಕ್ಷಕ್ಕೆ ರಾಜೀನಾಮೆ ನೀಡಿದ ನಂತರ ಈ ಬೆಳವಣಿಗೆ ನಡೆದಿದೆ. ಜೂನ್ನಲ್ಲಿ ನಡೆದ ಟೋಕಿಯೊ ವಿಧಾನಸಭಾ ಚುನಾವಣೆಯಲ್ಲಿ ಪಾತ್ ಟು ರೀಬರ್ತ್ ಪಕ್ಷದ ಎಲ್ಲಾ 42 ಅಭ್ಯರ್ಥಿಗಳು ಸೋತಿದ್ದರು.
ವರದಿಯ ಪ್ರಕಾರ, ಇಶಿಮಾರು ರಾಜೀನಾಮೆ ನೀಡಿದ ನಂತರ ಒಮ್ಮತದ ಮೂಲಕ ನಾಯಕಿಯಾಗಿ ಆಯ್ಕೆಯಾದ ಕ್ಯೋಟೋ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕೋಕಿ ಒಕುಮುರಾ ಅವರು ಪಕ್ಷ ಮತ್ತು ಕೃತಕ ಬುದ್ಧಿಮತ್ತೆ (AI) ನಾಯಕನ ನಡುವೆ ಮಾನವ ಕೊಂಡಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಇದು ಮುಖ್ಯವಾಹಿನಿಯ ರಾಜಕೀಯ ಪಕ್ಷದಲ್ಲಿ ಇದೇ ಮೊದಲು. ಈ ವರ್ಷದ ಮೇಲ್ಮನೆ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ನೀಡಿದ ನಂತರ ಇಶಿಮಾರು ರಾಜೀನಾಮೆ ನೀಡಿದ ನಂತರ ಪಾತ್ ಟು ರೀಬರ್ತ್ ಪಕ್ಷವು ಈ ನಿರ್ಧಾರವನ್ನು ಪ್ರಕಟಿಸಿತು.
ಕ್ಯೋಟೋ ವಿಶ್ವವಿದ್ಯಾಲಯದ ಡಾಕ್ಟರೇಟ್ ವಿದ್ಯಾರ್ಥಿ ಮತ್ತು ಪಕ್ಷದ ನಾಮಮಾತ್ರ ಮುಖ್ಯಸ್ಥರಾಗಿ ಸೇವೆ ಸಲ್ಲಿಸಲಿರುವ 25 ವರ್ಷದ ಕೋಕಿ ಒಕುಮುರಾ, “ಹೊಸ ನಾಯಕ ಎಐ (AI)ಆಗಿರುತ್ತಾರೆ. ಅದು ಸದಸ್ಯರ ರಾಜಕೀಯ ಚಟುವಟಿಕೆಗಳನ್ನು ನಿರ್ದೇಶಿಸುವುದಿಲ್ಲ, ಅವರು ಪಕ್ಷದ ನಾಮಮಾತ್ರ ಮುಖ್ಯಸ್ಥರಾಗಿರುತ್ತಾರೆ ಎಂದು ವಿವರಿಸಿದರು. ಆದರೆ ಸಂಪನ್ಮೂಲ ವಿತರಣೆಯಂತಹ ಇತರ ನಿರ್ಧಾರಗಳ ಮೇಲೆ ಎಐ ಕೇಂದ್ರೀಕರಿಸುತ್ತದೆ” ಎಂದು ಹೇಳಿದ್ದಾರೆ.
ಪಾತ್ ಟು ರೀಬರ್ತ್ ಪಕ್ಷವನ್ನು ಜನವರಿಯಲ್ಲಿ ಪಶ್ಚಿಮ ಜಪಾನ್ನ ಒಂದು ಸಣ್ಣ ನಗರದ ಮಾಜಿ ಮೇಯರ್ ಶಿಂಜಿ ಇಶಿಮಾರು ಪ್ರಾರಂಭಿಸಿದರು. ಪಕ್ಷವು ಏಕೀಕೃತ ನೀತಿಯ ಮೇಲೆ ಕಾರ್ಯನಿರ್ವಹಿಸುವುದಿಲ್ಲ, ಬದಲಿಗೆ ಅದರ ಸದಸ್ಯರಿಗೆ ವೈಯಕ್ತಿಕ ಕಾರ್ಯಸೂಚಿಗಳನ್ನು ಅನುಸರಿಸಲು ಅವಕಾಶ ನೀಡುತ್ತದೆ. ಜೂನ್ನಲ್ಲಿ ನಡೆದ ಟೋಕಿಯೊ ವಿಧಾನಸಭಾ ಚುನಾವಣೆಯಲ್ಲಿ ಪಾತ್ ಟು ರೀಬರ್ತ್ ಪಕ್ಷದ ಎಲ್ಲಾ 42 ಅಭ್ಯರ್ಥಿಗಳು ಸೋತರು ಮತ್ತು ಜುಲೈನಲ್ಲಿ ನಡೆದ ಮೇಲ್ಮನೆ ಮತದಾನದಲ್ಲಿ ಅದರ 10 ಸ್ಪರ್ಧಿಗಳು ಸಹ ವಿಫಲರಾದರು.