ಬೆಳಗಾವಿ :
ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ಜನಜೀವಾಳ ನುಡಿದ ಭವಿಷ್ಯ ಮತ್ತೊಮ್ಮೆ ನಿಜವಾಗಿದೆ. ಈ ಮೂಲಕ 75 ವರ್ಷಗಳ ಭವ್ಯ ಹಿನ್ನೆಲೆ ಹೊಂದಿರುವ ಜನಜೀವಾಳ ನಾಡಿನ ಸಮಸ್ತ ಜನರ ಪ್ರೀತಿಗೆ ಪಾತ್ರವಾಗಿದೆ.
ಜನಜೀವಾಳ ಪತ್ರಿಕೆ ತನ್ನ ನೇರ ಹಾಗೂ ನಿಖರ ಸುದ್ದಿಗೆ ಸದಾ ಹೆಸರುವಾಸಿ. ಅದರಲ್ಲೂ ಅತ್ಯಂತ ವಿಶ್ವಾಸಾರ್ಹ ಸುದ್ದಿಗಳನ್ನು ಕ್ಷಣ ಕ್ಷಣವು ಹೊತ್ತು ತರುತ್ತಿದೆ. ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ವಾರದ ಹಿಂದೆ ಬೆಳಗಾವಿ ಜಿಲ್ಲೆಗೆ ಸಂಬಂಧಿಸಿದ ಪಟ್ಟಿಯನ್ನು ಬಿಡುಗಡೆಗೊಳಿಸಿತ್ತು. ಆ ಪಟ್ಟಿಯಲ್ಲಿ ಇದ್ದ ಎಲ್ಲರಿಗೂ ಟಿಕೆಟ್ ಸಿಕ್ಕಿದೆ. ಈ ಮೂಲಕ ಎಲ್ಲರಿಗೂ ಮೊದಲೇ ಜನಜೀವಾಳ ಸುದ್ದಿಯನ್ನು ಪ್ರಕಟಸಿದ ಶ್ರೇಯಕ್ಕೆ ಪಾತ್ರವಾಗಿದೆ.
ಅದರಲ್ಲೂ ರಾಮದುರ್ಗ ವಿಧಾನಸಭಾ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಪತ್ರಿಕೆಯು ಕಾಂಗ್ರೆಸ್ ಕಟ್ಟಾಳು ಹಾಗೂ ಮಾಜಿ ಶಾಸಕ ಅಶೋಕ ಪಟ್ಟಣ ಅವರಿಗೆ ಈ ಬಾರಿ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂದು ಅತ್ಯಂತ ಖಚಿತವಾಗಿ ವಿಶೇಷ ಲೇಖನ ಮೂಲಕ ಸುದ್ದಿ ಪ್ರಕಟಿಸಿತ್ತು. ಇದೀಗ ಅಶೋಕ ಪಟ್ಟಣ ಅವರಿಗೆ ಕಾಂಗ್ರೆಸ್ ಪಕ್ಷದ ಪ್ರಥಮ ಪಟ್ಟಿಯಲ್ಲಿ ಟಿಕೆಟ್ ಘೋಷಣೆಯಾಗಿದೆ.
ಒಟ್ಟಾರೆ, ಜನಜೀವಾಳ ಪತ್ರಿಕೆ ಚುನಾವಣೆಗೆ ಸಂಬಂಧಿಸಿದಂತೆ ನೇರ-ನಿಷ್ಪಕ್ಷಪಾತ-ವಿಶ್ವಾಸಾರ್ಹ ಸುದ್ದಿಗಳನ್ನು ಬಿತ್ತರಿಸುವ ಮೂಲಕ ನಾಡಿನ ಜನರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ.

 
             
         
         
        
 
  
        
 
    