ಬೆಳಗಾವಿ: ಬೆಳಗಾವಿ ತಾಲೂಕಿನ ಯಳ್ಳೂರು ಗ್ರಾಮದಲ್ಲಿ ರಾಷ್ಟ್ರಮಟ್ಟದ ಕುಸ್ತಿ ಪಂದ್ಯ ಆಯೋಜನೆ ಮಾಡಲಾಗಿದ್ದು, ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಜಗದೀಶ್ ಶೆಟ್ಟರ್ ಅವರು ಭಾಗಿಯಾಗಿ ಕುಸ್ತಿ ಪಂದ್ಯ ವೀಕ್ಷಿಸಿದರು. ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ್ ಕವಟಗಿಮಠ ಸಾಥ್ ನೀಡಿದರು.
ಗುರುವಾರ ಯಳ್ಳೂರು ಗ್ರಾಮದ ಹೊರ ವಲಯದಲ್ಲಿ ಚಾಂಗಳೇಶ್ವರ ದೇವಿ ಮತ್ತು ಕಲ್ಮೇಶ್ವರ ದೇವರ ಜಾತ್ರೆ ನಿಮಿತ್ತ ಆಯೋಜನೆ ಮಾಡಲಾಗಿದ್ದ ರಾಷ್ಟ್ರಮಟ್ಟದ ಕುಸ್ತಿ ಪಂದ್ಯವನ್ನು ಜಗದೀಶ್ ಶೆಟ್ಟರ್ ಅವರು ವೀಕ್ಷಣೆ ಮಾಡಿದರು. ಇದಕ್ಕಿಂತ ಮುಂಚೆ ಯಳ್ಳೂರು ಗ್ರಾಮದಲ್ಲಿರುವ ಚಾಂಗಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿ ದರ್ಶನ ಪಡೆದರು.
ಈ ಒಂದು ಕುಸ್ತಿ ಪಂದ್ಯದಲ್ಲಿ ಕರ್ನಾಟಕ, ಹರಿಯಾಣ, ಪಂಜಾಬ್, ದೆಹಲಿ, ಮಾಹಾರಾಷ್ಟ್ರ ಸೇರಿದಂತೆ ಅನೇಕ ರಾಜ್ಯದ ಕುಸ್ತಿಪಟುಗಳು ಭಾಗ ವಹಿಸಿದರು. ಜಗದೀಶ್ ಶೆಟ್ಟರ್ ಅವರು ಭೇಟಿ ನೀಡಿದ ವೇಳೆ ಸಾಂಪ್ರದಾಯಕ ವಾದ್ಯಗಳನ್ನು ನುಡಿಸುವ ಮೂಲಕ ಭವ್ಯವಾಗಿ ಸ್ವಾಗತ ಕೋರಲಾಯಿತು.

 
             
         
         
        
 
  
        
 
    