ಬೆಳಗಾವಿ ಜನ ಜೀವಾಳ ಜಾಲ :ಮೂಕ ಪಕ್ಷಿಗಳಾದ ಹದ್ದುಗಳು ಕಳೆದ ಒಂದು ವಾರದಿಂದ ಇಲ್ಲಿನ ಕಾಂಟೋನ್ಮೆಂಟ್ ಶಾಲಾ ಆವರಣದ ನೆಟ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದು ನಾಗರಿಕ ಸಮಾಜದಲ್ಲಿ ಒಬ್ಬರು ಸಹ ಅವುಗಳಿಗೆ ಮುಕ್ತಿ ಕೊಡಲು ಮುಂದಾಗಿಲ್ಲ.
ಸುಮಾರು ಏಳೆಂಟು ಹದ್ದುಗಳು ಸಿಕ್ಕಿಕೊಂಡು ಆಹಾರ ಇಲ್ಲದೇ ಮೂಕವೇದನೆ ಅನುಭವಿಸುತ್ತಿದ್ದರೂ ಸರಕಾರದ ಸಂಬಂಧಿತ ಇಲಾಖೆಗಳಿಗೆ ಗಮನವಿಲ್ಲ.
ಕ್ಯಾಂಟೋನ್ಮೆಂಟ್ ಶಾಲೆಯ ಟರ್ಪ್ ಆಟದ ಮೈದಾನದ ಒಂದು ಮೂಲೆಯಲ್ಲಿ ನೆಟ್ ಹರಿದು ಹೋಗಿದ್ದು ಅದರ ಮೂಲಕ ಒಳಗೆ ಹೋಗಿ ಕಳೆದ ಏಳು ದಿನಗಳಿಂದ ಸಿಕ್ಕಿಹಾಕಿಕೊಂಡು ಒದ್ದಾಡುತ್ತಿರುವ ಐದು ಹದ್ದುಗಳು ಅವುಗಳನ್ನು ರಕ್ಷಿಸಲು ಶಾಲೆ ಹಾಗೂ ಆಫೀಸಿನ ಎಲ್ಲ ಸಿಬ್ಬಂದಿಗಳು ಪ್ರಯತ್ನಿಸಿದರು ಅವುಗಳನ್ನು ಹೊರಗೆ ತೆಗೆಯಲು ಆಗುತ್ತಿಲ್ಲ ಮತ್ತು ಅರಣ್ಯ ಇಲಾಖೆಯವರಿಗೆ ಇದರ ಬಗ್ಗೆ ತಿಳಿಸಿದಾಗಲೂ ಅವರು ಪಕ್ಷಿ ರಕ್ಷಿಸುವವರನ್ನು ಕರೆದು ತಿಳಿಸಿ ಎಂದು ಹೇಳಿ ಕೈ ತೊಳೆದಿದ್ದು ಗಮನ ಸೆಳೆದಿದೆ. ಜಿಲ್ಲಾಧಿಕಾರಿ ನಿತೇಶ ಪಾಟೀಲ ತತಕ್ಷಣ ಗಮನ ಹರಿಸಿ ಮೂಕ ಪಕ್ಷಿಗಳ ಜೀವನ ರಕ್ಷಿಸಬೇಕಿದೆ.