ಹುಬ್ಬಳ್ಳಿ :
ಉತ್ತರ ಕರ್ನಾಟಕದ ಬೆಳಗಾವಿ, ಹುಬ್ಬಳ್ಳಿ- ಧಾರವಾಡ ನಗರಗಳನ್ನು ಹೆಚ್ಚಿನ ಮಟ್ಟದಲ್ಲಿ ಅಭಿವೃದ್ಧಿ ಪಡಿಸಲು ಸರಕಾರ ಗಂಭೀರ ಚಿಂತನೆ ನಡೆಸಬೇಕು ಎಂಬ ಒತ್ತಾಯ ಕೇಳಿಬಂದಿದೆ.
ನಗರದಲ್ಲಿ 2 ದಿನಗಳ ಕಾಲ ನಡೆದ ಟೆಕ್ಲರೇಶನ್-2022
ರ ಐಟಿ,ಬಿಟಿ ಮುಖ್ಯಸ್ಥರ ದುಂಡುಮೇಜಿನ ಸಭೆಯಲ್ಲಿ ಬೆಳಗಾವಿ-ಹುಬ್ಬಳ್ಳಿ- ಧಾರವಾಡ ತ್ರಿವಳಿ ನಗರಗಳಾಗುವಂತೆ ಅಭಿವೃದ್ಧಿ ಪಡಿಸಬೇಕು ಒತ್ತಾಯ ಕೇಳಿಬಂದಿದೆ.
ಐಟಿ ಕಂಪನಿ ಸಿಇಒಗಳು, ಕೆಲ ವಾಣಿಜ್ಯ ಸಂಸ್ಥೆಗಳ ಪ್ರಮುಖರು ಮಾಹಿತಿ ತಂತ್ರಜ್ಞಾನ ಸಚಿವ ಡಾ.ಸಿ. ಎನ್. ಅಶ್ವತ್ಥನಾರಾಯಣ ಅವರಿಗೆ ಈ ಬಗ್ಗೆ ಮನವಿ ಮಾಡಿದ್ದಾರೆ. ಈ 3ನಗರಗಳನ್ನು ಕ್ಷಿಪ್ರಗತಿಯಲ್ಲಿ ಬೆಳೆಸುವ ಕೆಲಸವನ್ನು ಸರಕಾರ ಮಾಡಬೇಕು. ಅಂತಾರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣ ಇಲ್ಲಿ ಸ್ಥಾಪಿಸಬೇಕು. ಐಟಿಬಿಟಿ ಉದ್ಯಮಕ್ಕೆ ಅಗತ್ಯವಿರುವ ಮಾನವ ಸಂಪನ್ಮೂಲ ಸೃಷ್ಟಿಸುವ ಶಿಕ್ಷಣ ಸಂಸ್ಥೆಗಳು ಈ ಭಾಗದಲ್ಲಿ ವೃದ್ಧಿಯಾಗಬೇಕು, ಐಟಿ ಉದ್ಯಮಗಳ ಸ್ಥಾಪನೆಗೆ ಒಂದೇ ಛತ್ರದಡಿ ಎಲ್ಲ ಪರವಾನಿಗೆ ಲಭಿಸುವಂತೆ ವ್ಯವಸ್ಥೆ ಮಾಡಬೇಕು, ಐಟಿ ಸ್ಟಾರ್ಟಪ್ ಗಳಿಗೆ ವಿಶೇಷ ಒತ್ತು ನೀಡಬೇಕು.
ಒಟ್ಟಾರೆ, ಉತ್ತರ ಕರ್ನಾಟಕ ಭಾಗದಲ್ಲಿ ಐಟಿ ಬೆಳವಣಿಗೆಯಾಗುವುದರಿಂದ ಇದಕ್ಕೆ ಪೂರಕ ವ್ಯವಸ್ಥೆ ಮಾಡುವುದಕ್ಕೆ ಸರಕಾರ ಒತ್ತು ನೀಡಬೇಕು ಎಂದು ಐಟಿ ಕಂಪನಿ ಸಿಇಒಗಳು ಹಾಗೂ ವಾಣಿಜ್ಯ ಸಂಸ್ಥೆಗಳ ಮುಖ್ಯಸ್ಥರು ಮನವಿ ಮಾಡಿದರು.
ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಮಾತನಾಡಿ,
ಉತ್ತರ ಕರ್ನಾಟಕ ಭಾಗದಲ್ಲಿ ಐಟಿ ಬಿಟಿ ಉದ್ಯಮ ಬೆಳವಣಿಗೆಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಯಾವುದೇ ಷರತ್ತುಗಳನ್ನು ಹಾಕದೆ ಇಲ್ಲಿಯ ಉದ್ದಿಮೆಗಳಿಗೆ ನೀಡಲು ಸರಕಾರ ಬದ್ಧವಾಗಿದೆ ಎಂದು ಹೇಳಿದರು.