26 ಗಂಟೆಯಲ್ಲಿ ಪ್ರಕರಣ ಭೇದಿಸಿದ ಕ್ರೈಂ ಟೀಮ್ ..!
ಈ ಗ್ಯಾಂಗ್ ಎಲ್ಲಿಂದ ಬಂದಿದ್ದು ಹೇಗೆ ಗೊತ್ತಾ..?
ಬೆಳಗಾವಿ : ಖಡೇಬಜಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 20/10/2023 ರಂದು ಸಾಯಂಕಾಲ 6-00 ಗಂಟೆಗೆ ಶಗುಣ ಟ್ರೇಡರ್ಸ ( ಡ್ರೈಫ್ರೂಟ್ಸ ಅಂಗಡಿ) ಯಲ್ಲಿ ಗ್ರಾಹಕರಾಗಿ ಬಂದು ಕೆಲಸಗಾರರ ಗಮನವನ್ನು ಬೇರೆಡೆಗೆ ಸೆಳೆದು ಮೋಸ ಮಾಡಿ ಕಳ್ಳತನ ಮಾಡಿದ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 70/2023 ನಯ ವಂಚನೆ ಪರಾರಿಯಾಗಿದ್ದ ಪ್ರಕರಣದಲ್ಲಿ 4 ಜನ ಇರಾನಿ ಗ್ಯಾಂಗಿನ ಖದೀಮರನ್ನು ಕಳ್ಳತನ ನಡೆದು 26 ಗಂಟೆಯೊಳಗೆ ಬಂಧಿಸುವಲ್ಲಿ ಪೋಲೀಸರು ಯಶಸ್ವಿಯಾಗಿದ್ದಾರೆ.
1] BAHMAN BINIAZ S/O ABDOLHOSSEIN, AGE: 36 YRS,
2] HABIBEH MOGHOL D/O HASSAN, AGE: 60 YRS,
3] SHEIDA KARIMIZADEH D/O GHOLAM, AGE: 20 YRS,
4] KARIM DAVALOO S/O AHMAD, ಬಂಧಿತ ಆರೋಪಿಗಳು.
ಬಂಧಿತ ಆರೋಪಿಗಳು ಇರಾನಿ ಪ್ರಜೆಗಳು. ಪ್ರಕರಣ ದಾಖಲಾದ 26 ಗಂಟೆಯ ಒಳಗೆ ಪತ್ತೆ ಹಚ್ಚಿ ವಿಚಾರಣೆಗೊಳಪಡಿಸಿ ಆರೋಪಿತರಿಂದ ಕಳ್ಳತನ ಮಾಡಿದ ನಗದು ಹಣ, ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಟೊಯೊಟಾ ಕೊರೊಲಾ ಅಲ್ಟೀಸ್ ಕಾರು ಮತ್ತು ಆರೋಪಿತರ 07 ಮೊಬೈಲ್ಗಳು ಹೀಗೆ ಒಟ್ಟು 14,00,000/- ರೂ ಕಿಮ್ಮತ್ತಿನವುಗಳನ್ನು ವಶಪಡಿಸಿಕೊಂಡು ಆರೋಪಿಗಳ ಮೇಲೆ 380 IPC ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೇ ಇರಾನಿ ಆರೋಪಿಗಳ ಇರಾನ್ ದೇಶದವರಿದ್ದು ಎಲ್ಲ ಆರೋಪಿತರ ವೀಸಾ ಅವಧಿ ಮುಗಿದಿದ್ದರೂ ಸಹ ನವೀಕರಿಸದೇ ಕಾನೂನು ಬಾಹಿರವಾಗಿ, ಅನಧಿಕೃತವಾಗಿ ಭಾರತದಲ್ಲಿ ವಾಸವಾಗಿದ್ದರಿಂದ ಪ್ರಕರಣದಲ್ಲಿ ಕಲಂ. 14A(b) The Foreigners Act 1946 (Amendment Act 2004) ನೇದ್ದರಲ್ಲಿ ಅಳವಡಿಸಿ ಆರೋಪಿತರಿಗೆ ಮಾನ್ಯ ನ್ಯಾಯಾಲಯಕ್ಕೆ ಹಾಜರಪಡಿಸಿದ್ದಾರೆ.
ಈ ಗ್ಯಾಂಗ್ ಹಿಂದೆ ಹೈದರಾಬಾದ್ ನಲ್ಲಿ
ಕೂಡ ಈ ರೀತಿ ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ತನಿಖೆಯಿಂದ ತಿಳಿದು ಬಂದಿದೆ.
ಬೆಳಗಾವಿ ಡಿಸಿಪಿ ಸ್ನೇಹಾ ಪಿ ವಿ ನೇತೃತ್ವದಲ್ಲಿ ಖಡೇಬಜಾರ ಎಸಿಪಿ ಅರುಣ್ ಕೊಳೂರ್ ಮಾರ್ಗದರ್ಶನದಲ್ಲಿ ಖಡೆಬಜಾರ್ ಪೊಲೀಸ್ ಠಾಣೆಯ ಪಿ ಐ
ದಿಲೀಪ್ ಪಿ ನಿಂಬಾಳಕರ, ಪಿಎಸ್ಐ ಆನಂದ ಆದಗೊಂಡ ಹಾಗೂ ಸಿಬ್ಬಂದಿ ಜನರಾದ ಎ ಬಿ ಶೆಟ್ಟಿ, ಬಿ ಎಸ್ ರುದ್ರಾಪೂರ, ಎಮ್ ವಿ ಅರಳಗುಂಡಿ, ವಿ ವಾಯ್ ಗುಡಿಮೇತ್ರಿ, ಜಿ ಪಿ ಅಂಬಿ ಮೇಲಾಧಿಕಾರಿಗಳು ಸದರಿ ಆರೋಪಿತರ ಪತ್ತೆ ಕಾರ್ಯದಲ್ಲಿ ಭಾಗವಹಿಸಿ ಯಶಸ್ವಿಯಾಗಿ ಕಾರ್ಯಾಚರಣೆ ಮಾಡಿದ್ದಾರೆ. ಪೊಲೀಸ್ ಆಯುಕ್ತರು ಬೆಳಗಾವಿ ನಗರ, ಪೊಲೀಸ್ ಉಪ ಆಯುಕ್ತರು (ಕಾ&ಸು), ಪೊಲೀಸ್ ಉಪ ಆಯುಕ್ತರು (ಅ&ಸಂ) ಶ್ಲಾಘಿಸಿದ್ದಾರೆ.