ಬೆಳಗಾವಿ: ರಾಷ್ಟ್ರ ಸೇವಿಕಾ ಸಮಿತಿ ವತಿಯಿಂದ ವಂದೇ ಮಾತರಂ ದಿವ್ಯ ಮಂತ್ರದ ಭವ್ಯ ಪರಿಚಯ ಮತ್ತು ಭಾರತ ಮಾತಾ ಪೂಜನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ವ್ಯಕ್ತಿಯ ಅಂತಃಶಕ್ತಿಯು ಜಾಗೃತವಾಗಿ ತನುವು ರಾಷ್ಟ್ರಾರ್ಪಿತವಾಗಲು ಅಂದಿನಿಂದ ಇಂದಿನವರೆಗೂ ಸ್ಪೂರ್ತಿಯ ಸೆಲೆಯಾದ ‘ವಂದೇ ಮಾತರಂ’ ಮಹಾಮಂತ್ರ ರಚನೆಯಾಗಿ 150 ವರ್ಷಗಳು ತುಂಬಿದ ಈ ವರ್ಷದಲ್ಲಿ ಸಮೂಹ ಗಾಯನ ಮಾಡುತ್ತಾ ಮಾತೆ ಭಾರತಿಯನ್ನು ಪೂಜಿಸುವ ಈ ಕಾರ್ಯಕ್ರಮವನ್ನು ಬೆಳಗಾವಿಯ ಬಿ.ಕೆ.ಮಾಡೆಲ್ ಶಾಲಾ ಮೈದಾನದಲ್ಲಿ ಜ.25 ರಂದು ಸಂಜೆ 4 ಗಂಟೆಗೆ ಆಯೋಜಿಸಲಾಗಿದೆ.
ಮುಂಡರಗಿಯ ನ್ಯಾಯವಾದಿ,
ಭಾರತೀಯ ಸೈನಿಕ ತರಬೇತಿ ಕೇಂದ್ರದ ನಿವೃತ್ತ ಅಧಿಕಾರಿ ಶರಶ್ಚಂದ್ರ ರಾವಜಿ ಮುಖ್ಯ ವಕ್ತಾರರಾಗಿ ಆಗಮಿಸುವರು.
ರಾಷ್ಟ್ರ ಸೇವಿಕಾ ಸಮಿತಿಯ ಅಖಿಲ ಭಾರತೀಯ ಸಹ ಕಾರ್ಯವಾಹಿಕಾ
ಅಲಕಾತಾಯಿ ಇನಾಮದಾರ ಭಾಗವಹಿಸುವರು ಎಂದು ರಾಷ್ಟ್ರ ಸೇವಿಕಾ ಸಂಘದ ನಗರ ಕಾರ್ಯ ವಾಹಿಕರಾದ
ವಿದ್ಯಾ ಜೋಶಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಶನಿವಾರ ವಂದೇ ಮಾತರಂ ದಿವ್ಯ ಪರಿಚಯ, ಭಾರತ ಮಾತಾ ಪೂಜನ ಕಾರ್ಯಕ್ರಮ
