ಕಾಬೂಲ್: ಗುರುವಾರ ರಾತ್ರಿ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಗರದ ಮೇಲೆ ಪಾಕಿಸ್ತಾನ ಯುದ್ಧ ವಿಮಾನಗಳನ್ನು ಬಳಸಿ ವಾಯು ದಾಳಿ ನಡೆಸಿದೆ.
ಅಫ್ಘಾನಿಸ್ತಾನದ ಹಂಗಾಮಿ ವಿದೇಶಾಂಗ ಸಚಿವ ಅಮೀರ್ ಖಾನ್ ಮುತಾಕಿ ಭಾರತಕ್ಕೆ ಭೇಟಿ ನೀಡುತ್ತಿರುವ ಸಮಯದಲ್ಲಿ ಮತ್ತು ಶುಕ್ರವಾರದಂದು ವಿದೇಶಾಂಗ ಸಚಿವ ಎಸ್ .ಜೈಶಂಕರ್ ಅವರೊಂದಿಗೆ ಪ್ರಮುಖ ಮಾತುಕತೆ ನಡೆಸಲು ಸಿದ್ಧರಾಗಿರುವ ಸಮಯದಲ್ಲಿ ಕಾಬೂಲ್ನಲ್ಲಿ ಪಾಕಿಸ್ತಾನ ದಾಳಿ ನಡೆಸಿರುವುದು ಮಹತ್ವ ಪಡೆದಿದೆ.
ಕಾಬೂಲ್ ಮೇಲೆ ಏರ್ಸ್ಟೈಕ್ ನಡೆದ ಬೆನ್ನಲ್ಲೇ ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್ ಮತ್ತು ಸೇನೆಯ ಪ್ರಧಾನ ಕಚೇರಿ ಇರುವ ರಾವಲ್ಪಿಂಡಿಯಲ್ಲಿ ಮುಂದಿನ ಆದೇಶ ಜಾರಿಯಾಗುವವರೆಗೂ ಮೊಬೈಲ್ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
ಗುರುವಾರ ರಾತ್ರಿ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಗರದ ಮೇಲೆ ಪಾಕಿಸ್ತಾನ ಯುದ್ಧ ವಿಮಾನಗಳನ್ನು ಬಳಸಿ ವಾಯು ದಾಳಿ ನಡೆಸಿದೆ.
ಕಾಬೂಲ್ ನಗರದಲ್ಲಿ ಸ್ಫೋಟದ ಶಬ್ದ ಕೇಳಿಬಂದಿದೆ. ಯಾರೂ ಭಯಪಡುವ ಅಗತ್ಯವಿಲ್ಲ.ಘಟನೆಯ ತನಿಖೆ ನಡೆಯುತ್ತಿದೆ, ಇಲ್ಲಿಯವರೆಗೆ ಯಾವುದೇ ಹಾನಿಯ ವರದಿ ಬಂದಿಲ್ಲ ಎಂದು ಅಫ್ಘಾನ್-ತಾಲಿಬಾನ್ ವಕ್ತಾರರು ತಿಳಿಸಿದ್ದಾರೆ. ವರದಿಗಳ ಪ್ರಕಾರ ಕಾಬೂಲ್ನ ಪೂರ್ವ ಭಾಗದಲ್ಲಿರುವ ತಾಲಿಬಾನ್ ಸರ್ಕಾರದ ಪ್ರಮುಖ ಸರ್ಕಾರಿ ಕಚೇರಿಗಳನ್ನು ಗುರಿಯಾಗಿಸಿ ಈ ದಾಳಿ ನಡೆದಿದೆ.
ಪಾಕಿಸ್ತಾನದ ಯುದ್ಧ ವಿಮಾನಗಳು ಕಾಬೂಲ್ ನಗರದೊಳಗಿನ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ ನೆಲೆಗಳನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿ ನಡೆಸಿದೆ. ಅಫ್ಘಾನಿಸ್ತಾನ ರಾಜಧಾನಿಯಲ್ಲಿ ಸ್ಫೋಟಗಳ ಶಬ್ದ ಕೇಳಿಬಂದಿದೆ ಎಂದು ವರದಿಯಾಗಿದೆ.
ನಗರದ ಮೇಲೆ ವೈಮಾನಿಕ ಚಟುವಟಿಕೆಯನ್ನು ಅಫ್ಘಾನ್ ಅಧಿಕಾರಿಗಳು ದೃಢಪಡಿಸಿದರು. ತಾಲಿಬಾನ್ ವಕ್ತಾರ ಜಬೀಹುಲ್ಲಾ ಮುಜಾಹಿದ್, “ಕಾಬೂಲ್ ನಗರದಲ್ಲಿ ಸ್ಫೋಟದ ಶಬ್ದ ಕೇಳಿಬಂದಿದೆ. ಆದಾಗ್ಯೂ, ಯಾರೂ ಚಿಂತಿಸಬೇಡಿ, ಎಲ್ಲವೂ ಸರಿಯಾಗಿದೆ, ಘಟನೆಯ ತನಿಖೆ ನಡೆಯುತ್ತಿದೆ, ಇಲ್ಲಿಯವರೆಗೆ ಯಾವುದೇ ಹಾನಿಯ ವರದಿ ಬಂದಿಲ್ಲ” ಎಂದು ಎಕ್ಸ್ ಪೋಸ್ಟ್ ಮಾಡಿದ್ದಾರೆ.
ಟಿಟಿಪಿ ಮುಖ್ಯಸ್ಥ ನೂರ್ ವಾಲಿ ಮೆಹ್ಸೂದ್ ಅವರನ್ನು ಈ ದಾಳಿಗಳಲ್ಲಿ ನಿರ್ದಿಷ್ಟವಾಗಿ ಗುರಿಯಾಗಿರಿಸಿಕೊಳ್ಳಲಾಗಿದೆ ಎಂದು ವರದಿಗಳು ಸೂಚಿಸುತ್ತವೆ. ಆತ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.
ಕಾಬೂಲ್ ನಿವಾಸಿಗಳು ಘಟನೆಯ ಬಗ್ಗೆ ಮಾತನಾಡಿದ್ದು, ಅಪರಿಚಿತ ಜೆಟ್ಗಳು ಅನೇಕ ಸ್ಥಳಗಳಲ್ಲಿ ದಾಳಿ ನಡೆಸಿವೆ, ಭಾರೀ ಸ್ಫೋಟಗಳು ನಗರದ ಮಧ್ಯ ಮತ್ತು ಉತ್ತರ ಜಿಲ್ಲೆಗಳಲ್ಲಿ ಜನರನ್ನು ಎಚ್ಚರಗೊಳಿಸಿದವು ಎಂದು ಸ್ಥಳೀಯರು ಹೇಳಿದ್ದಾರೆ.
ವಾಯುದಾಳಿಗಳ ಸಮಯದಲ್ಲಿ ನಾಗರಿಕರ ಮನೆಗಳಿಗೆ ಹಾನಿಯಾಗಿದೆ ಎಂದು ಹಲವಾರು ವರದಿಗಳು ದೃಢಪಡಿಸಿವೆ. ದಾಳಿಯ ನಂತರ ಕಾಬೂಲ್ ಮೇಲೆ ಯುದ್ಧ ವಿಮಾನಗಳು ಕಾಣಿಸಿಕೊಂಡಿವೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸ್ಕ್ರೀನ್ಶಾಟ್ಗಳು ಮತ್ತು ಪೋಸ್ಟ್ಗಳು ಹೇಳುತ್ತವೆ.