ಇಟಗಿ :
ಸಾಮಾಜಿಕ, ಆರ್ಥಿಕ, ರಾಜಕೀಯ, ಶಿಕ್ಷಣ ಸೇರಿ ಎಲ್ಲ ರಂಗಗಳಲ್ಲಿ ಸಾಧನೆಗೈಯುತ್ತಿದ್ದಾಳೆ ಭಾಗ್ಯಲಕ್ಷ್ಮೀ ಮಹಿಳಾ ವಿವಿಧೋದ್ದೇಶಗಳ ಸಹಕಾರಿ ಸಂಘದ ಅಧ್ಯಕ್ಷೆ ಮುಕ್ತಾ ಲದ್ದಿಮಠ ಹೇಳಿದರು.
ಇಟಗಿ ಗ್ರಾಮದ ಭಾಗ್ಯಲಕ್ಷ್ಮೀ ಮಹಿಳಾ ವಿವಿಧೋದ್ದೇಶಗಳ ಸಹಕಾರಿ ಸಂಘದಲ್ಲಿ ಶನಿವಾರ ನಡೆದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಮ್ಮ ಸನಾತನ ಧರ್ಮದ ಹಬ್ಬಹರಿದಿನಗಳನ್ನು ಶೃದ್ಧೆಯಿಂದ ಆಚರಿಸಬೇಕು. ಇದರಿಂದ ಮಕ್ಕಳಿಗೆ ಧರ್ಮದ ಜಾಗೃತಿಯಾಗುತ್ತದೆ. ಇಂದು ಮಹಿಳೆಯರು ಎಲ್ಲ ಕ್ಷೇತ್ರಗಳನ್ನು ಸಶಕ್ತರಾಗಿ ನಿಭಾಯಿಸುವಷ್ಟು ಸದೃಢವಾಗಿದ್ದಾಳೆ ಎಂದರು.
ಉಪಾಧ್ಯಕ್ಷೆ ರೇಖಾ ಸತ್ಯಪ್ಪಗೋಳ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ಪೂಜ್ಯನೀಯ ಸ್ಥಾನ ನೀಡಿದ್ದೇವೆ. ನಮ್ಮ ಸಂಘದಲ್ಲಿ ಮಹಿಳೆಯರು ಸದಸ್ಯೆಯಾಗಿ, ನಿರ್ದೇಶಕಿಯಾಗಿ, ಅಧ್ಯಕ್ಷೆ, ಸಿಬ್ಬಂದಿಯಾಗಿ ಸಮರ್ಥವಾಗಿ ಅಭಿವೃದ್ಧಿಪತದತ್ತ ಸಾಗಿಸಲಾಗುತ್ತಿದ್ದಾರೆ. ಇದರೊಂದಿಗೆ ತನ್ನ ಕುಟುಂಬವನ್ನು ವ್ಯವಸ್ಥಿತವಾಗಿ ಸಾಗಿಸುತ್ತಿದ್ದಾಳೆ ಎಂದರು.
ನಿರ್ದೇಶಕಿಯರಾದ ಚೆನ್ನಮ್ಮ ಬಡಿಗೇರ, ಶೈಲಾ ಕಲಾಲ, ನಿರ್ಮಲಾ ಸೋನಪ್ಪನವರ, ನಭೀಮಾ ನದಾಫ, ರೂಪಾಲಿ ಸೋನಪ್ಪನವರ, ಶಾಭಿರಾ ನದಾಫ, ರೇಷ್ಮಾ ನಾಯಕ, ಅಂಜನಾ ಭೋವಿ, ಕಾರ್ಯದರ್ಶಿ ಗೀತಾ ನಿಲಜಕರ, ವಿಠ್ಠಲ ನಿಲಜಕರ ಹಾಗೂ ಇತರರು ಉಪಸ್ಥಿತರಿದ್ದರು.
ಮಹಾಲಕ್ಷ್ಮೀ ಕರಮಳ್ಳನವರ ನಿರೂಪಿಸಿದರು. ಅಶ್ವಿನಿ ಯರಗಟ್ಟಿ ಸ್ವಾಗತಿಸಿದರು. ದಿಲ್ ಶಾದಬಿ ನದಾಫ ವಂದಿಸಿದರು.