ಮುಂಬೈ :
ತಮ್ಮ ನೆಲದ ಮೂಲ ಸಂಸ್ಕ್ರತಿ, ಭವ್ಯ ಪರಂಪರೆಯನ್ನ ವಿಶ್ವಕ್ಕೆ ತಿಳಿಸಲಿ ಮಹಾರಾಷ್ಟ ಸಜ್ಜಾಗಿದೆ. ನಾಳೆಯಿಂದ ಅಂದರೆ 19-28 ರ ತನಕ ಮಹಾರಾಷ್ಟ್ರದ ನಾಲ್ಕು ಜಿಲ್ಲೆಗಳಲ್ಲಿ ಗಣೇಶ ಚತುರ್ಥಿಯನ್ನು ಉತ್ಸವವನ್ನಾಗಿ ಪ್ರವಾಸೋದ್ಯಮ ಇಲಾಖೆ ಆಚರಿಸಲು ಹೊರಟಿದೆ.
ದೇಶದ ವೈಶಿಷ್ಟ್ಯದ ಜೊತೆಗೆ ತಮ್ಮ ರಾಜ್ಯದ ಸಂಸ್ಕೃತಿ ಮತ್ತು ಪರಂಪರೆಯನ್ನು ವಿಶ್ವಕ್ಕೆ ಪರಿಚಯಿಸುವ ಉದ್ದೇಶದಿಂದ ಇದೇ ಮೊದಲ ಬಾರಿ ಅಂತರರಾಷ್ಟ್ರೀಯ ಗಣೇಶ ಹಬ್ಬ ಆಯೋಜಿಸುತ್ತಿದೆ
ವಾಣಿಜ್ಯ ನಗರಿ ಮುಂಬೈ, ಪುಣೆ, ರತ್ನಗಿರಿ, ಪಾಲ್ಘರ್ ಜಿಲ್ಲೆಗಳಲ್ಲಿ ಅಂತರರಾಷ್ಟ್ರೀಯ ಉತ್ಸವವನ್ನು ಆಯೋಜಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಸಾಂಸ್ಕೃತಿಕ ಉತ್ಸವಕ್ಕೆ ವಿನೂತನ ಮೆರುಗು ನೀಡಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ.
ಹಬ್ಬಕ್ಕಾಗಿ ಮೀಸಲಿಟ್ಟಿರುವ ಸ್ಥಳಗಳು ಮಹಾರಾಷ್ಟ್ರದ ಆಳವಾದ ಬೇರೂರಿರುವ ಇತಿಹಾಸ ಮತ್ತು ಸಂಪ್ರದಾಯಗಳಿಗೆ ಪ್ರಮುಖವಾಗಿವೆ.
ಮಹಾರಾಷ್ಟ್ರ ಸರ್ಕಾರದ ಪ್ರವಾಸೋಧ್ಯಮ ಸಚಿವ ಗಿರೀಶ್ ಮಹಾಜನ್, ಅಂತರರಾಷ್ಟ್ರೀಯ ಗಣೇಶೋತ್ಸವ ಕೇವಲ ತೋರಿಕೆಯ ವೈಭವ ಅಲ್ಲ ಎಂದಿದ್ದಾರೆ. ಇದು ಮಹಾರಾಷ್ಟ್ರದ ನಾಡಿ ಮಿಡಿತ, ಇದು ಆತ್ಮನಿರ್ಭರ ಗುರಿ ಹೊಂದಿದೆ. ಗಣೇಶ ಹಬ್ಬವು ಸರಿಸಾಟಿ ಇಲ್ಲದ ನಮ್ಮ ಕಲೆ, ಸಂಸ್ಕೃತಿ ಮತ್ತು ವೈಶಿಷ್ಟತೆಯನ್ನು ಜಾಗತಿಕ ಮಟ್ಟದಲ್ಲಿ ತಿಳಿಸುತ್ತದೆ ಎಂದರು.
ಅಂತರಾಷ್ಟ್ರೀಯ ಗಣೇಶೋತ್ಸವದ ಹಿನ್ನೆಲೆಯಲ್ಲಿ ಗೇಟ್ ವೇ ಆಫ್ ಇಂಡಿಯಾದಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ಮರಳು ಕಲೆಯ ಪ್ರದರ್ಶನ, ಮೊಸಾಯಿಕ್ ಕಲೆಗಳ ವಿಶೇಷತೆಗಳ ಅನಾವರಣ ಮಾಡಲಾಗುತ್ತದೆ. ಮಹಾರಾಷ್ಟ್ರ ನೆಲದ ಇತಿಹಾಸದ ಕತೆಗಳನ್ನು ಸಾರುವ ನೃತ್ಯ, ವಸ್ತು ಪ್ರದರ್ಶನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ