- ವಿನಯತೆಗೆ ಹೆಸರುವಾಸಿಯಾಗಿರುವ ಇನ್ಸ್ಪೆಕ್ಟರ್ ವಿನಾಯಕ ಬಡಿಗೇರ ವರ್ಗಾವಣೆ..!
South traffic ನಿಂದ ರಾಮದುರ್ಗಗೆ ಹೋದ ಬೆಸ್ಟ್ ಪಿಐ ಬಡಿಗೇರ.
ಲೋಕಾಯುಕ್ತದಿಂದ ಬೆಳಗಾವಿ ಬಂದ ಬಸನಗೌಡ್ರು.
ಬೆಳಗಾವಿ : ಬೆಳಗಾವಿ ದಕ್ಷಿಣ ಸಂಚಾರಿ ಠಾಣೆಯ ಇನ್ಸ್ಪೆಕ್ಟರ್ ವಿನಾಯಕ ಬಡಿಗೇರ ವರ್ಗಾವಣೆ ಆಗಿದ್ದು, ಇವರ ಸ್ಥಳಕ್ಕೆ ಬಸನಗೌಡ ಜೆ ಪಾಟೀಲ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೋರಡಿಸಿದೆ.
ಪಿಐ ವಿನಾಯಕ ಬಡಿಗೇರ ಅವರನ್ನು ರಾಮದುರ್ಗ ಸರ್ಕಲ್ ಇನ್ಸ್ಪೆಕ್ಟರ್ ಸ್ಥಾನಕ್ಕೆ ವರ್ಗಾಯಿಸಲಾಗಿದೆ.
ಕಳೆದೆರಡೂವರೆ ವರ್ಷಗಳಿಂದ ದಕ್ಷಿಣ ಸಂಚಾರ ಠಾಣೆಯ ಪಿಐ ಆಗಿ ಕೇಲಸ ಮಾಡುತ್ತಿದ್ದ ಇನ್ಸ್ಪೆಕ್ಟರ್ ವಿನಾಯಕ ಬಡಿಗೇರ ಜನಸ್ನೇಹಿ, ದಕ್ಷ ಹಾಗೂ ಮುಖ್ಯವಾಗಿ ಎಲ್ಲರೊಂದಿಗೆ ವಿನಯತೆಯಿಂದ ವರ್ತಿಸುವ ಅಧಿಕಾರಿ ಎಂದು ಹೆಸರುವಾಸಿಯಾಗಿದ್ದರು.
ಇವರ ಸ್ಥಾನಕ್ಕೆ ಲೋಕಾಯುಕ್ತ ಇಲಾಖೆಯಿಂದ ಬಸನಗೌಡ ಪಾಟೀಲ ನಿಯುಕ್ತರಾಗಿದ್ದಾರೆ.