ಬೆಳಗಾವಿ: ಬೆಳಗಾವಿಯ ಪ್ರತಿಷ್ಠಿತ ಬೀಮ್ಸ್ ಆಸ್ಪತ್ರೆಯಲ್ಲಿ ಕಾರವಾರ ಮೂಲದ ನಕಲಿ ನರ್ಸ್ ಒಬ್ಬಳು ಚಿಕ್ಕ ಸಿಕ್ಕ ರೋಗಿಗಳಿಗೆ ಚುಚ್ಚುಮದ್ದು ನೀಡಿರುವ ಆರೋಪ ಕೇಳಿ ಬಂದಿದೆ.
ಕಾರವಾರದ ಸನಾ ಶೇಖ್ ಎಂಬ ವಿದ್ಯಾರ್ಥಿನಿ ಕಳೆದ ಎರಡು-ಮೂರು ತಿಂಗಳಿನಿಂದ ಬೆಳಗಾವಿ ಬೀಮ್ಸ್ ನಲ್ಲಿದ್ದು ರೋಗಿಗಳಿಗೆ ಚುಚ್ಚುಮದ್ದು ನೀಡಿದ್ದಾಳೆ ಎಂಬ ಮಾಹಿತಿ ಗುರುವಾರ ಹೊರ ಬಿದ್ದಿದೆ. ಸೆಕ್ಯುರಿಟಿ ಗಾರ್ಡ್ ವಿಚಾರಿಸಿದಾಗ ಈ ಬಗ್ಗೆ ಇವಳ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇವಳು ವಿದ್ಯಾರ್ಥಿನಿ ಅಲ್ಲ ಎಂಬ ಅನುಮಾನ ವ್ಯಕ್ತವಾಗಿದ್ದು ಹೆಚ್ಚಿನ ತನಿಖೆ ನಡೆಯಬೇಕಾಗಿದೆ.
ಬೆಳಗಾವಿ ಬೀಮ್ಸ್ ನಲ್ಲಿ ಕಾರವಾರ ಮೂಲದ ನಕಲಿ ನರ್ಸ್ ನಿಂದ ಚುಚ್ಚುಮದ್ದು..?
