ಬೆಳಗಾವಿ:ಸುಮಾರು 80 ಲಕ್ಷ ಗುಳುಂ ಮಾಡಿರುವ ಶಂಕೆ ಮಹಾನಗರ ಪಾಲಿಕೆಯ ಮೇಲೆ ವ್ಯಕ್ತವಾಗಿದ್ದು, ಅನುದಾನ ದುರ್ಬಳಕೆಯ ಘಟನೆ ಹೊರ ಬಿದ್ದಿದೆ.
ಸದಾಶಿವ ನಗರ ಕಲ್ಮಠ ರುದ್ರಭೂಮಿ ಅಭಿವೃದ್ಧಿಗೆ ಬಿಡುಗಡೆಯಾಗಿದ್ದ ಸುಮಾರು 96 ಲಕ್ಷದಲ್ಲಿ ಬರೀ 15ಲಕ್ಷದ ಕಾಮಗಾರಿ ಮಾತ್ರ ನಡೆದಿದ್ದು, ಇನ್ನುಳಿದ ಹಣ ಎಲ್ಲಿ ಹೋಗಿದೆ ಎಂದು ಲಿಂಗಾಯತ ಸಂಘಟನೆಗಳು ಮಹಾನಗರ ಪಾಲಿಕೆ ಆಡಳಿತಾಧಿಕಾರಿ, ಪಾಲಿಕೆ ಆಯುಕ್ತ ಹಾಗೂ ಗುತ್ತಿಗೆದಾರನನ್ನು ಪ್ರಶ್ನಿಸಿದ್ದಾರೆ.
ಲಿಂಗಾಯತ ರುದ್ರಭೂಮಿ ಅಭಿವೃದ್ಧಿಗೆ ಬಿಡುಗಡೆಯಾಗಿ ಮೀಸಲಿರಿಸಿದ್ದ ಹಣವನ್ನು ಗುಳುಂಮಾಡಿದಚರು ಯಾರು, ಎಲ್ಲಿ ಯಾರು ಯಾವ ಕೆಲಸ ಮಾಡಿಸಿದ್ದಾರೆ ಎಂದು ಪ್ರಶ್ನೆ ಎತ್ತಿದ್ದು ಅಧಿಕಾರಗಳತ್ತ ಸಂಶಯದ ನೋಟ ಬೀರಿದೆ.
ಲಿಂಗಾಯತ ರುದ್ರಭೂಮಿಯ ಯಾವ ಅಭಿವೃದ್ದಿಯೂ ಕಾಣುತ್ತಿಲ್ಲ, ಕೂಡಲೇ ಜಿಲ್ಲಾಧಿಕಾರಿ ನಿತೇಶ ಪಾಟೀಲ ಭೇಟಿ ನೀಡಿ ಹಣ ಬಳಕೆ ಮತ್ತು ಅಭಿವೃದ್ಧಿ ಎರಡರ ಬಗ್ಗೆಯೂ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಲಾಗಿದೆ.
ಬಸವರಾಜ ರೊಟ್ಟಿ, ಸುಜೀತ್ ಮುಳಗುಂದ, ರಾಜು ಟೋಪನ್ನವರ, ಪ್ರಭು ಯತ್ನಟ್ಟಿ, ರವೀಂದ್ರ ಬೆಲ್ಲದ, ಪ್ರಕಾಶ ಕಕಮರಿ, ಸಂತೋಷ ಕಾಗವಾಡೆ, ನಾಗರಾಜ ದೊಡ್ಡಮನಿ ಇತರ ಕಾರ್ಯಕರ್ತರು ಉಪಸ್ಥಿತರಿದ್ದರು.