ದುಬೈ : ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಎದುರು ಭಾರತ ಜಯಭೇರಿ ಬಾರಿಸಿದೆ.
ನಾಯಕ ಸೂರ್ಯಕಾಂತ ಯಾದವ್ ಅಜೇಯ 47 ಮತ್ತು ಶಿವಂ ದುಬೆ ಅಜೆಯ 10 ರನ್ ಗಳಿಸಿದರು. ಭಾರತ15.5 ಓವರ್ಗಳಲ್ಲಿ ಕೇವಲ ಮೂರು ವಿಕೆಟ್ ಕಳೆದುಕೊಂಡು 7 ವಿಕೆಟ್ ಗಳ ಭರ್ಜರಿ ಜಯಭೇರಿ ಬಾರಿಸಿತು.
ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಏಷ್ಯಾ ಕಪ್ ಟ್ವೆಂಟಿ-20 ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಕಿಸ್ತಾನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿತು. 20 ಓವರ್ ಗಳಲ್ಲಿ ಒಂಬತ್ತು ವಿಕೆಟ್ ಕಳೆದುಕೊಂಡು ಕೇವಲ 127 ರನ್ ಗಳಿಸಿತು. ಫರ್ಹಾನ್ 40 ಮತ್ತು ಶಾಹಿನ್ ಅಫ್ರಿದಿ ಔಟಾಗದೆ 33 ರನ್ ಗಳಿಸಿದರು. ಉಳಿದ ಆಟಗಾರರು ಉತ್ತಮ ಬ್ಯಾಟಿಂಗ್ ನಡೆಸುವಲ್ಲಿ ವಿಫಲರಾದರು.
ಭಾರತದ ಪರ ಕುಲದೀಪ್ ಯಾದವ್ ಮೂರು, ಅಕ್ಷರ ಪಟೇಲ್ ಎರಡು ವಿಕೆಟ್ ಪಡೆದರು. ಹಾರ್ದಿಕ ಪಾಂಡ್ಯ, ವರುಣ್ ಚಕ್ರವರ್ತಿ ತಲಾ ಒಂದೊಂದು ವಿಕೆಟ್ ತಮ್ಮದಾಗಿಸಿಕೊಂಡರು.
ಭಾರತದ ಅಭಿಷೇಕ್ ಶರ್ಮ 31 ಮತ್ತು ಗಿಲ್ 10 ರನ್ ಗಳಿಸಿದರು ನಾಯಕ ಸೂರ್ಯಕಾಂತ್ ಯಾದವ್ ಶ್ರೇಷ್ಠ ಪ್ರದರ್ಶನ ನೀಡಿದರು.