ಬಾಗಲಕೋಟೆ: ಪಹಲ್ಗಾಮ್ ದಾಳಿಯ ಬಳಿಕ ಭಾರತ-ಪಾಕಿಸ್ತಾನ ನಡುವೆ ಯುದ್ಧದ ಕಾರ್ಮೋಡ ಕವಿದಿರುವ ಸಂದರ್ಭದಲ್ಲಿ ಭಾರತ-ಪಾಕಿಸ್ತಾನ ಸಂಘರ್ಷದ ಕುರಿತು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ.
ಪಹಲ್ಗಾಮ್ ದಾಳಿ ಹಿನ್ನೆಲೆಯಲ್ಲಿ ಯುದ್ಧ ಅಲ್ಲಗಳೆಯುವಂತಿಲ್ಲ. ಮತೀಯ ಮತಾಂಧತೆ ಗೊಂದಲ ಹೆಚ್ಚಾಗುತ್ತದೆ ಯುದ್ಧದ ಭೀತಿ ಇದೆ ಎಂದು ಅವರು ಹೇಳಿದ್ದಾರೆ. ಯುದ್ಧ ಮಾಡುವವರು ತಯಾರಿದ್ದಾರೆ. ಯುದ್ಧಮಾಡಿಸಿಕೊಳ್ಳುವವರು ಹೆದರುತ್ತಿದ್ದಾರೆ. ಎದುರಾಳಿ ಬೆಚ್ಚಿದಾಗ ಯಾರ ಮೇಲೆ ಯುದ್ಧ ಮಾಡುವುದು. ಆದರೆ ಯುದ್ಧದ ಲಕ್ಷಣ ಇದೆ ಎಂದರು.
ಬಾಗಲಕೋಟೆಯಲ್ಲಿ ಮಾತನಾಡಿರುವ ಅವರು, ಯುದ್ಧದ ಸಾಧ್ಯತೆ, ಪ್ರಕೃತಿ ವಿಕೋಪಗಳು, ಸುನಾಮಿ, ಭೂಕಂಪ, ರಾಜ್ಯ ರಾಜಕಾರಣ ಹಾಗೂ ದೇಶದ ಕುರಿತಂತೆ ಭವಿಷ್ಯ ಹೇಳಿದ್ದಾರೆ. ದೇಶದಲ್ಲಿ ಯುದ್ಧದ ಭೀತಿ ಅಲ್ಲಗಳೆಯುವ ಹಾಗಿಲ್ಲ. ಮತಾಂಧತೆ ಗೊಂದಲ ಬಹಳ ಹೆಚ್ಚಾಗುತ್ತದೆ. ಸಾವು ನೋವುಗಳು ಹೆಚ್ಚಾಗುತ್ತದೆ. ಕಂದಕ ಉಂಟಾಗುತ್ತದೆ. ಅದು ಯಾರಿಗೂ ಶಾಂತಿ ಕೊಡುವಂತ ಪ್ರಸಂಗವಲ್ಲ, ಆದ್ದರಿಂದ ಯುದ್ದದ ಭೀತಿ ಇದೆ ” ಎಂದು ಹೇಳಿದರು.
ಜಗತ್ತಿನ ಎರಡು ಮೂರು ಜನ ಮಹಾನ್ ನಾಯಕರಿಗೆ ಅಪಾಯ ಸಂಭವಿಸಬಹುದು. ದೊಡ್ಡ ದೊಡ್ಡ ನಾಯಕರಿಗೆ ಅಪಾಯವಿದೆ. ಜತ್ತಿನ ಎರಡ್ಮೂರು ನಾಯಕರಿಗೆ ಅಪಮೃತ್ಯುವಿನ ಅಪಾಯವಿದೆ. ಗೌರಿಶಂಕರ ಶಿಖರ ಶಿವಾ ಶಿವಾ ಎಂದೀತು. ಹಿಮಾಲಯದಲ್ಲಿ ಸುನಾಮಿ ಆದೀತು, ಅಲ್ಲಿಂದ ಬಂದು ಡೆಲ್ಲಿಗೆ ತಲುಪುತ್ತದೆ. ಹಿಮಾಲಯ ಸುನಾಮಿಯಿಂದ ಡೆಲ್ಲಿಗೂ ಅಪಾಯವಿದೆ. ಉತ್ತರ ರಾಷ್ಟ್ರಗಳಿಗೆ ಅಪಾಯವಿದೆ. ಜಲಬಾಧೆ ಇದೆ ಎಂದು ಕೋಡಿಮಠದ ಸ್ವಾಮೀಜಿ ಹೇಳಿದ್ದಾರೆ.
ಜಗತ್ತಿನಾದ್ಯಂತ ಜಲ ಸುನಾಮಿ, ವಾಯುಸುನಾಮಿ, ಭೂಸುನಾಮಿ, ಅಗ್ನಿಸುನಾಮಿ ಸಂಭವಿಸಬಹುದು. ವಿಪರೀತ ಶಾಖದಿಂದ ಜನರಿಗೆ ಕಷ್ಟವಾಗಲಿದೆ. ಒಲೆ ಹತ್ತಿ ಉರಿದರೆ ನಿಲ್ಲಬಹುದು. ಧರೆ ಹತ್ತಿದರೆ ಏನು ಮಾಡುವುದು. ಸಮುದ್ರ ಉಕ್ಕುತ್ತದೆ. ಗಾಳಿಯಿಂದ ಅನೇಕ ಸಾವು ನೋವಾಗುತ್ತದೆ ಎಂದರು.
ಉತ್ತರದ ನಾಡಿನಲ್ಲಿ ಹಗೆಯ ಬೇಗೆ ಹತ್ತೀತು, ಸುತ್ತುವರಿದು ಬರುವಾಗ ಜಗವೆಲ್ಲಾ ಕೂಳಾದೀತು. ಈ ಮಾತನ್ನು ಮೊದಲೇ ನಾನು ಹೇಳಿದ್ದೆ. ಈ ಮಾತನ್ನು ಹೇಳಿದ ವಾರದಲ್ಲೇ, ಕಾಶ್ಮೀರದಲ್ಲಿ ಸಾಮೂಹಿಕ ಹತ್ಯಾಕಾಂಡವಾಯಿತು ಎಂದು ಕೋಡಿಮಠದ ಶ್ರೀಗಳು ಹೇಳಿದರು.
ಒಂದು ದೊಡ್ಡ ಕಾಯಿಲೆ ಬರುವ ಸಂಭವವಿದೆ, ಅದು 5 ವರ್ಷ ಇರಲಿದೆ. ಜನರಿಗೆ ಶಾಂತಿ ಇಲ್ಲ, ನೆಮ್ಮದಿ ಇಲ್ಲ ” ಎಂದು ಸ್ವಾಮೀಜಿ ಹೇಳಿದರು. ಉತ್ತರದ ಭಾಗದಲ್ಲಿ ಅಂದರೆ ಅದು ಕಾಶ್ಮೀರ, ಜಗವೆಲ್ಲಾ ಕೂಳಾದೀತು. ಈ ಸಮಸ್ಯೆ ಬರೀ ಭಾರತಕ್ಕೆ ಮಾತ್ರವಲ್ಲ, ಅದು ವಿಶ್ವದೆಲ್ಲಡೆ ಹರಡಲಿದೆ. ಇದು ದೊಡ್ಡ ಮಟ್ಟದಲ್ಲಿ ಆಗುವ ಸಂಭವವಿದೆ. ಆಳುವ ಅರಸರು ಇದನ್ನು ಆಲೋಚಿಸಬೇಕು. ಸನ್ಯಾಸಿಗಳಾದ ನಾವು, ಜಪತಪದ ಮೂಲಕ ನಮ್ಮ ನಾಡಿಗೆ ಒಳಿತಾಗಲಿ ಎಂದು ಚಿಂತಿಸಬೇಕು ಎಂದು ಶ್ರೀಗಳು ಹೇಳಿದ್ದರು.