ಬೆಳಗಾವಿ: ಭಾರತ ಜಗತ್ತಿನಲ್ಲಿ ಅತ್ಯಂತ ವಿಶಿಷ್ಟ ದೇಶವಾಗಿದೆ. ಇಲ್ಲಿಯ ಸಂವಿಧಾನವು ಇಡೀ ದೇಶದ ಸಮಗ್ರತೆಯ ಸಂಕೇತವಾಗಿ ಹೊರಹೊಮ್ಮಿದೆ ಎಂದು ಜಿ.ಎ. ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಆರ್.ಎಸ್. ಪಾಟೀಲ ಹೇಳಿದರು.
ನಗರದ ಜಿ.ಎ.ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ರವಿವಾರ ನಡೆದ ಗಣರಾಜ್ಯೋತ್ಸವದಲ್ಲಿ ಅವರು ಮಾತನಾಡಿದರು. ಭಾರತೀಯರು ಆಕ್ರಮಣಕಾರಿ ಬ್ರಿಟಿಷರ ವಿರುದ್ಧ ಸುಮಾರು ಎರಡು ಶತಮಾನಗಳ ಕಾಲ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರು. ಅನಂತರ ನಮಗೆ ಸಂವಿಧಾನ ರಚಿಸುವ ಅಗತ್ಯ ಬಿತ್ತು. ಈ ನಿಟ್ಟಿನಲ್ಲಿ ದೇಶದ ಮಹನೀಯರು ದೇಶಕ್ಕೆ ಅತ್ಯಂತ ಶ್ರೇಷ್ಠವಾದ ಸಂವಿಧಾನವನ್ನು ನೀಡಿದ್ದಾರೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹರಡಿರುವ ಭಾರತ ಒಂದು ಸುಂದರ ಹಾಗೂ ಜಗತ್ತಿನಲ್ಲಿ ಸರ್ವ ಶ್ರೇಷ್ಠ ದೇಶವಾಗಿ ಹೊರಹೊಮ್ಮಲು ನಮ್ಮ ಸಂವಿಧಾನವು ಅತ್ಯಂತ ಪೂರಕ ಆಶಯಗಳನ್ನು ಹೊಂದಿದೆ ಎಂದು ಅವರು ಹೇಳಿದರು.
ಮಹಾಂತೇಶ ಮಗದುಮ್ಮ ಮಾತನಾಡಿದರು.
ಕೆಎಲ್ಇ ಆಜೀವ ಸದಸ್ಯ ಮಹದೇವ ಬಳಿಗಾರ, ಉಪ ಪ್ರಾಚಾರ್ಯ ಸಿ.ಪಿ.ದೇವರುಷಿ,ಪಿ.ಎಸ್. ಚಿಮ್ಮಡ ಉಪಸ್ಥಿತರಿದ್ದರು.
ಸೀಮಾ ಕೋರೆ ನಿರೂಪಿಸಿದರು.
ಪ್ರಿಯಾ ಸುಣಗಾರ ವಂದಿಸಿದರು.