ಬೆಳಗಾವಿ :
ಸಂತಿಬಸ್ತವಾಡ ಗ್ರಾಮದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.
ಗ್ರಾಮ ಪಂಚಾಯತ್ ಕಚೇಯನ್ನು ಸುಂದರವಾಗಿ ಅಲಂಕರಿಸಿ ಹಬ್ಬದ ವಾತಾವರಣವನ್ನು ನಿರ್ಮಿಸಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಸರಕಾರಿ ಕನ್ನಡ ಶಾಲೆಯ ಮಕ್ಕಳ ಸ್ವಾಗತ ನೃತ್ಯದೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬೆಳಗಾವಿ ತಾಲೂಕು ಪಂಚಾಯತ್ ಸದಸ್ಯ, ಗ್ರಾಮದ ಹಿರಿಯ ಎಂ.ಜಿ ತಹಸೀಲ್ದಾರರವರು ಮಹಾತ್ಮಾ ಗಾಂಧೀಜಿ ಪೋಟೋ ಪೂಜೆ ಮತ್ತು ಅಂಬೇಡ್ಕರ್ ಪೋಟೋ ಪೂಜೆಯನ್ನು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಮಲ್ಪೂರಿ ಕಲ್ಲಪ್ಪಾ ಜಿಡ್ಡಿಮನಿರವರು ನೆರವೇರಿಸಿದರು. ಲಕ್ಷ್ಮೀ ಪರಶುರಾಮ ಚನ್ನಿಕುಪ್ಪಿ ರಾಷ್ಟ್ರ ಧ್ವಜಾರೋಹಣ ಮಾಡಿದರು. ನಂತರ ಎಲ್ಲರಿಗೂ ಸಿಹಿ ಹಂಚಲಾಯಿತು. ಗ್ರಾಮದಲ್ಲಿರುವ ಎಲ್ಲಾ ಯೋಧರನ್ನು ಸರ್ವ ಗ್ರಾಮ ಪಂಚಾಯತ್ ಸದಸ್ಯರು ಸನ್ಮಾನಿಸಿದರು. ಗ್ರಾಮದ ಸರಕಾರಿ ಶಾಲೆಯಲ್ಲಿ 2022-23 ನೇ ಸಾಲಿನಲ್ಲಿ ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದವರಿಗೆ ಗ್ರಾಮ ಪಂಚಾಯತ್ ದಿಂದ ಬಹುಮಾನಗಳನ್ನು ವಿತರಿಸಲಾಯಿತು . ಕಾರ್ಯಕ್ರಮದಲ್ಲಿ ಭಾಗವಹಿಸಿದ ಗ್ರಾಮ ಪಂಚಾಯತ್ ಸದಸ್ಯರು ಸ್ವಾತಂತ್ರ್ಯ ದಿನದ ಕುರಿತು ಮಾತನಾಡಿ ಸ್ವಾತಂತ್ರ್ಯ ಹೋರಾಟಗಾರರು, ಸ್ವಾತಂತ್ರ್ಯ ಪಡೆದ ರೀತಿ, ಭಾರತ ದೇಶದ ಅಭಿವೃದ್ಧಿ ಸಾಧನೆ ಕುರಿತು ಮಾತನಾಡಿದರು.