This is the title of the web page
This is the title of the web page

Live Stream

February 2023
T F S S M T W
 1
2345678
9101112131415
16171819202122
232425262728  

| Latest Version 8.0.1 |

Local News

ಆರ್ ಎಲ್ ಎಸ್ ವಿವಿಧ ಸಂಘಗಳ ಉದ್ಘಾಟನೆ Inauguration of various associations of RLS


 

ಬೆಳಗಾವಿ :
ಕೆ.ಎಲ್.ಇ. ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ (ಸ್ವಾಯತ್ತ) ಮಹಾವಿದ್ಯಾಲಯದಲ್ಲಿ ಕ್ರೀಡಾ, ಸಾಂಸ್ಕೃತಿಕ ಹಾಗೂ ವಿವಿಧ ಸಂಘಗಳ ಉದ್ಘಾಟನಾ ಸಮಾರಂಭ ಶನಿವಾರ ಕಾಲೇಜಿನ ಸರ್. ಸಿ.ವಿ. ರಾಮನ್ ಸಭಾಂಗಣದಲ್ಲಿ ಜರುಗಿತು.
ಕಾಕತಿಯ ಇಂಡಸ್ ಇಂಟರ್‌ನ್ಯಾಶನಲ್ ಸ್ಕೂಲ್‌ನ ಆಡಳಿತಾಧಿಕಾರಿಗಳಾದ ಕರ್ನಲ್. ಶ್ಯಾಮ್ ವಿಜಯ ಸಿಂಹ ಮಾತನಾಡಿ, ಸೈನ್ಯದಲ್ಲಿದ್ದಾಗಿನ ತಮ್ಮ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳುವ ಮೂಲಕ ಸ್ಫೂರ್ತಿದಾಯಕ ನುಡಿಗಳನ್ನಾಡಿದರು. ವಿದ್ಯಾರ್ಥಿಗಳಿಗೆ ಶಿಸ್ತು, ಸಂಯಮ, ಆತ್ಮಸ್ಥೈರ್ಯ, ಸಮಯ ಪ್ರಜ್ಞೆ, ಉನ್ನತವಾದ ಧ್ಯೇಯ, ಉತ್ಕೃಷ್ಠವಾದ ಗುರಿ ಹಾಗೂ ಗುರಿ ಸಾಧನೆಯ ಹಾದಿಯಲ್ಲಿ ಎಂತಹದ್ದೇ ಕಷ್ಟವನ್ನಾದರೂ ಎದುರಿಸುವ ಮನೋಬಲ ಇರಬೇಕೆಂಬುದನ್ನು ವಿವರಿಸಿದರು.

ಅಧ್ಯಕ್ಷತೆ ವಹಿಸಿ ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಎಲ್.ವಿ.ದೇಸಾಯಿ ನುಡಿಗಳನ್ನಾಡಿದರು. ಪ್ರಾಚಾರ್ಯ ಡಾ.ಜೆ.ಎಸ್. ಕವಳೇಕರ ಅವರು ಸ್ವಾಗತಿಸಿದರು. ಪದವಿಪೂರ್ವ ಪ್ರಾಚಾರ್ಯ ವಿ.ಸಿ. ಕಾಮಗೋಳ ಪರಿಚಯಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಡಾ. ಶಿವಾನಂದ ಬುಲಬುಲಿ ವಂದಿಸಿದರು. ಕಾವ್ಯ ಹಾಗೂ ಸಂಗಡಿಗರು ಪ್ರಾರ್ಥನೆ ಹಾಡಿದರು. ಓಂ ತಂಗಡಿ ಹಾಗೂ ಆಕಾಂಕ್ಷಾ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಎಲ್ಲ ವಿಭಾಗಗಳ ಮುಖ್ಯಸ್ಥರು ಬೋಧಕ -ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.


Jana Jeevala
the authorJana Jeevala

Leave a Reply