ಖಾನಾಪುರ : ತಾಲೂಕಿನ ಲಕೇಬೈಲ್ ಗ್ರಾಮದಲ್ಲಿ ಭಕ್ತಿಭಾವಪೂರ್ಣ ವಾತಾವರಣದ ಮಧ್ಯೆ ಶ್ರೀ ಚವಾಟೇಶ್ವರ ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮ ಭವ್ಯವಾಗಿ ನೆರವೇರಿತು.
ಈ ಪವಿತ್ರ ಸಂದರ್ಭದಲ್ಲಿ ಖಾನಾಪುರ ಶಾಸಕ ವಿಠ್ಠಲ ಸೋಮಣ್ಣ ಹಲಗೆಕರ ಅವರು ದೇವಸ್ಥಾನವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಮೋದ ಕೊಚೇರಿ, ಚಂಗಪ್ಪ ನೀಲಜಕರ್ ಸೇರಿದಂತೆ ಅನೇಕ ಭಕ್ತರು ಉಪಸ್ಥಿತರಿದ್ದು, ದೇವರ ಆಶೀರ್ವಾದ ಪಡೆದರು.


