
ಬೆಳಗಾವಿ :
ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಬೆಳಗಾವಿ ಘಟಕದ ವತಿಯಿಂದ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥಾಪನೆ ದಿನಾಚರಣೆ ಮತ್ತು ಧ್ವಜ ದಿನಾಚರಣೆ ಶುಕ್ರವಾರ ಬೆಳಗಾವಿ ವ್ಯಾಕ್ಸಿನ್ ಡಿಪೋದ ಕೇಂದ್ರ ಕಚೇರಿಯಲ್ಲಿ ಜರುಗಿತು.
ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ 1950 ರ ನವಂಬರ್ 7 ರಂದು ರೂಪುಗೊಂಡಿದೆ. ಅದರ ಸವಿ ನೆನಪಿನಲ್ಲಿ ಸಂಸ್ಥಾಪನೆ ದಿನಾಚರಣೆ ಹಾಗೂ ಧ್ವಜ ದಿನಾಚರಣೆ ಆಚರಿಸಲಾಗುತ್ತಿದೆ. ಮಕ್ಕಳ ಪ್ರತಿಭೆಗೆ ಸೂಕ್ತ ಪುರಸ್ಕಾರ ದೊರೆತಾಗ ಅವರಲ್ಲಿರುವ ದೈವತ್ವ ಪ್ರಕಟಗೊಳ್ಳುತ್ತದೆ. ಇಂತಹ ವೇದಿಕೆ ಕಲ್ಪಿಸಿರುವ ಸ್ಕೌಟ್ಸ್ ಮತ್ತು ಗೈಡ್ ಸಂಸ್ಥೆಗೆ ಅಭಿನಂದನೆ ವ್ಯಕ್ತಪಡಿಸಲಾಯಿತು. ಬೆಳಗಾವಿಯ ಹೊನಗಾ ದಲ್ಲಿ ಡಿಸೆಂಬರ್ 27 ರಿಂದ ಜ. 1 ರ ವರೆಗೆ 7 ದಿನಗಳ ಕಾಲ ಸ್ಕೌಟ್ಸ್ ಮತ್ತು ಗೈಡ್ಸ್ ಇದರ ರಾಜ್ಯಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ. ಐದು ಸಾವಿರ ವಿದ್ಯಾರ್ಥಿಗಳು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದು ಈ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಮುಖ್ಯ ಅತಿಥಿಗಳಾಗಿ, ನಿರ್ಣಾಯಕರಾಗಿ ದಿಲೀಪ್ ಮಾಳಗಿ, ರವೀಂದ್ರ ವಾಮನಾಚಾರ್ಯ, ಸ್ಕೌಟರ್ ಮತ್ತು ಜಿಎ ಪ್ರೌಢಶಾಲೆಯ ಕ್ರೀಡಾ ವಿಭಾಗದ ಸದಸ್ಯ ಶಿವರಾಯಪ್ಪ ಏಳುಕೋಟಿ, ಸ್ಥಳೀಯ ಕಾರ್ಯದರ್ಶಿ ಸಿ.ಟಿ. ಪೂಜಾರಿ ಆಗಮಿಸಿ, ಭಾರತ ಸ್ಕೌಟ್ ಅಂಡ್ ಗೈಡ್ಸ್ ನ ಧ್ವಜದ ಚೀಟಿಗಳನ್ನು ಬಿಡುಗಡೆಗೊಳಿಸಿದರು.
ಬೆಳಗಾವಿ ಜಿಲ್ಲಾ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಚಾಲಕ ವಿಠ್ಠಲ ಎಸ್.ಬಿ. ನೇತೃತ್ವದಲ್ಲಿ ಬೆಳಗಾವಿ ನಗರದ ಅನೇಕ ಸ್ಕೌಟರ್ ಗಳು ಭಾಗವಹಿಸಿ ಸಲಹೆ ಸೂಚನೆಯನ್ನು ನೀಡಿದರು. ಸ್ಥಳೀಯ ಕಾರ್ಯದರ್ಶಿ ಸಿ.ಟಿ. ಪೂಜಾರಿ ನಿರೂಪಿಸಿದರು.
ಬೆಳಗಾವಿಯಲ್ಲಿ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥಾಪನಾ ಹಾಗೂ ಧ್ವಜ ದಿನಾಚರಣೆ


