ಶೀಘ್ರದಲ್ಲೇ ತೇರದಾಳ, ತುಕ್ಕಾನಟ್ಟಿ,
ಮೂಡಲಗಿ: ಕುರುಹಿನಶೆಟ್ಟಿ ಅರ್ಬನ ಸೊಸಾಯಿಟಿಯು ಸಮಾಜಿಕ, ಧಾರ್ಮಿಕ, ಶೈಕ್ಷಣ ಕ್ಷೇತ್ರದಲ್ಲಿ ಸಹಾಯ ಸಹಕಾರ ಸಲ್ಲಿಸುತ್ತಾ ಕಳೆದ ೨೦೨೩-೨೪ ನೇ ಆರ್ಥಿಕ ವರ್ಷದ ಅಂತ್ಯಕ್ಕೆ ೪.೯೩ ಕೋಟಿ ರೂ ನಿವ್ವಳ ಲಾಭಗಳಿಸಿದೆ ಪ್ರಗತಿ ಪತಥದತ್ತ ಮುನ್ನಡೆಯುತ್ತಿದೆ ಎಂದು ಸೊಸಾಯಟಿಯ ಅಧ್ಯಕ್ಷ ಬಿ.ಸಿ.ಮುಗಳಖೋಡ ಹೇಳಿದರು.
ಪಟ್ಟಣದ ಕುರುಹಿನಶೆಟ್ಟಿ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಯ ಪ್ರಧಾನ ಕಛೇರಿಯಲ್ಲಿ ಸಭಾಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಸೊಸಾಯಿಟಿ ಪ್ರಗತಿಯನ್ನು ವಿವರಿಸಿದ ಅವರು ೨೦೨೪ರ ಮಾರ್ಚ ಅಂತ್ಯಕ್ಕೆ ೩.೯೦ ಕೋಟಿ ರೂ ಶೇರು ಬಂಡವಾಳ, ೨೩೦.೮೫ ಕೋಟಿ ರೂ ಠೇವುಗಳು, ೨೨.೨೨ ಕೋಟಿ ರೂ ನಿಧಿಗಳನ್ನು ಹೊಂದಿ, ವಿವಿಧ ಬ್ಯಾಂಕುಗಳಲ್ಲಿ ಠೇವಣ ದಾರರ ಭದ್ರತೆಗಾಗಿ ೭೭.೯೪ ಕೋಟಿ ರೂ ಗುಂತಾವಣ ಮಾಡಿ, ವಿವಿಧ ಕ್ಷೇತ್ರಕ್ಕೆ ೧೬೨.೪೨ ಕೋಟಿ ರೂ ಸಾಲ ವಿತರಿಸಿ ಒಟ್ಟು ೨೬೯.೪೦ ಕೋಟಿ ರೂ ದುಡಿಯುವ ಬಂಡವಾಳ ಹೊಂದಿದೆ ಎಂದ ಅವರು ಸೊಸಾಯಿಟಿಯಲ್ಲಿ ಸಾಲ ಪಡೆದ ನೇಕಾರರ ೩.೧೦ಲಕ್ಷ ರೂ, ಬಡ್ಡಿ ಮನ್ನಾ ಮಾಡುವುದರ ಜೊತೆಗೆ ಶೇರುದಾರರಿಗೆ ಶೇ.೧೫ ರಷ್ಟು ಲಾಭಂಶ ವಿತ್ತರಿಸಲ್ಲಾಗಿದೆ ಎಂದರು.
ಸೊಸಾಯಿಟಿಯ ಮಾಜಿ ಅಧ್ಯಕ್ಷ ಹಾಲಿ ನಿರ್ದೇಶಕ ಸುಭಾಸ ಬೆಳಕೂಡ ಮಾತನಾಡಿ, ಸೊಸಾಯಿಟಿಯು ಈಗಾಗಲೇ ೧೪ ಶಾಖೆಗಳನ್ನು ಹೊಂದಿದ್ದು, ಮುಂದಿನ ತಿಂಗಳಲ್ಲಿ ರಾಮದುರ್ಗ ತಾಲೂಕಿನ ಚಂದರಗಿಯಲ್ಲಿ ಹೊಸ ಶಾಖೆಯನ್ನು ಪ್ರಾರಂಭಿಸಲಾಗುವುದು. ಏ.೨೬ರಂದು ಮಹಾಲಿಂಗಪೂರ ಶಾಖೆಯ ಸ್ವಂತ ಕಟ್ಟಡ ಉದ್ಘಾಟನೆ ಮತ್ತು ದಶಮಾನೋತ್ಸವ ಕಾರ್ಯಕ್ರಮ ಜರುಗಿದ್ದು, ಶೀಘ್ರದಲ್ಲೇ ತೇರದಾಳ, ತುಕ್ಕಾನಟ್ಟಿ, ರಾಮದುರ್ಗ ಶಾಖೆಗಳ ಸ್ವಂತ ಕಟ್ಟಡಗಳ ಉದ್ಘಾಟನಾ ಕಾರ್ಯ ಕೂಡಾ ಜರುಗಲಿದೆ. ವರ್ಷದಿಂದ ವರ್ಷಕ್ಕೆ ಪ್ರಗತಿ ಪಥದತ್ತ ಸಾಗಲು ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರ ನಿಸ್ವಾರ್ಥ ಸೇವೆ ಹಾಗೂ ಗ್ರಾಹಕ ವಿಶ್ವಾಸ ಮತ್ತು ಸಹಕಾರ ಮಹತ್ವದಾಗಿದೆ ಎಂದರು.
ಸಭೆಯಲ್ಲಿ ಸೊಸಾಯಿಟಿ ಉಪಾಧ್ಯಕ್ಷ ಲಕ್ಕಪ್ಪ ಪೂಜೇರಿ, ನಿರ್ದೇಶಕರಾದ ಗೋಡಚೆಪ್ಪ ಮೂರಗೋಡ, ಬಸವರಾಜ ಬೆಳಕೂಡ, ಇಸ್ಮಾಯಿಲ್ ಕಳ್ಳಿಮನಿ, ವಿಶಾಲ ಶೀಲವಂತ, ಉಮಾ ಬೆಳಕೂಡ, ಮಹಾಬೂಬಿ ಕಳ್ಳಿಮನಿ, ಮಾಲಾ ಬೆಳಕೂಡ, ಶಾಂತವ್ವಾ ಬೋರಗಲ್, ಶ್ಯಾಲನ್ ಕೋಡತೆ, ಪ್ರಧಾನ ಕಾರ್ಯದರ್ಶಿ ರಮೇಶ ಒಂಟಗೂಡಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಫೋಟೋ ಕ್ಯಾಪ್ಸನ್> ಮೂಡಲಗಿ: ಪಟ್ಟಣದ ಕುರುಹಿನಶೆಟ್ಟಿ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಯ ಪ್ರಧಾನ ಕಛೇರಿಯಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಸೋಸೈಟಿಯ ಅಧ್ಯಕ್ಷ ಬಿ.ಸಿ.ಮೂಗಳಖೋಡ ಮಾತನಾಡಿದರು.