ಖಾನಾಪುರ: ಪಟ್ಟಣದಲ್ಲಿ ಭಾರತೀಯ ಜನತಾ ಪಕ್ಷ(ಬಿಜೆಪಿ) ನೂತನ ಕಚೇರಿಯ ಉದ್ಘಾಟನೆ ಹಾಗೂ ರಸ್ತೆ ಕಾಮಗಾರಿಯ ಭೂಮಿಪೂಜೆಯನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಗುರುವಾರ ನೆರವೇರಿಸಿದರು.
ಖಾನಾಪುರ ಶಾಸಕ ವಿಠ್ಠಲ ಹಲಗೇಕರ, ಖಾನಾಪುರ ಬಿಜೆಪಿ ಅಧ್ಯಕ್ಷ ಬಸವರಾಜ ಸಾಣಿಕೊಪ್ಪ, ಮಾಜಿ ಅಧ್ಯಕ್ಷ ಸಂಜಯ ಕುಬಲ್, ಜಿಲ್ಲಾ ಉಪಾಧ್ಯಕ್ಷರಾದ ಪ್ರಮೋದ ಕೋಚೇರಿ, ಧನಶ್ರೀ ಸರ್ ದೇಸಾಯಿ, ಬಾಬುರಾವ್ ದೇಸಾಯಿ, ಸುನಿಲ್ ಮಡ್ಡಿಮನಿ, ಶ್ರೀಕಾಂತ ಇಟಗಿ, ಚೇತನ್ ಮನೆರಿಕರ, ಗುಂಡು ತೋಪಿನಕಟ್ಟಿ, ಮಲ್ಲಪ್ಪ ಮಾರಿಹಾಳ, ವಸಂತ ದೇಸಾಯಿ, ಬರಮಣಿ ಪಾಟೀಲ, ಸದಾನಂದ ಪಾಟೀಲ, ಸುಂದರ ಕುಲಕರ್ಣಿ, ಅಪ್ಪಯ್ಯ ಕೊಡೋಳಿ, ಯುವ ಮುಖಂಡರಾದ ಪಂಡಿತ್ ಒಗಲೆ, ಕಿಶೋರ್ ಹೆಬ್ಬಾಳ್ಳರ್, ಜಿಲ್ಲಾ ಮಾಧ್ಯಮ ಪ್ರಮುಖರಾದ ಸಿದ್ದು ಪಾಟೀಲ, ಬಾಳೇಶ ಚೆನ್ನಣ್ಣವರ, ಪಕ್ಷದ ಬೂತ್ ಪ್ರಮುಖರು ಹಾಗೂ ಹಿರಿಯರು ಭಾಗವಹಿಸಿದ್ದರು.


