ಬೆಳಗಾವಿ: ನಗರದ ಕೆಎಲ್ಇ ಸಂಸ್ಥೆಯ, ರಾಜಾ ಲಖಮಗೌಡ ವಿಜ್ಞಾನ (ಸ್ವಾಯತ್ತ) ಮಹಾವಿದ್ಯಾಲಯದಲ್ಲಿ 2024 ರ ವಾರ್ಷಿಕ ಕ್ರೀಡಾಕೂಟ ವನ್ನು ದಿನಾಂಕ:04-04-2025 ರಂದು ಬೆಳಿಗ್ಗೆ :10:00 ಗಂಟೆಗೆ ಉದ್ಘಾಟಿಸಲಾಯಿತು.
ಅಂತರಾಷ್ಟ್ರೀಯ ಈಜು ತರಬೇತುದಾರ ಉಮೇಶ ಜಿ ಕಲಘಟಗಿ ಉದ್ಘಾಟಿಸಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಅಧ್ಯಯನದ ಜೊತೆಗೆ ಕ್ರೀಡೆಗೆ ಹೆಚ್ಚಿನ ಮಹತ್ವ ಕೊಡಬೇಕು. ದೈಹಿಕ ಮತ್ತು ಮಾನಸಿಕ ಸದೃಡವಾಗಬೇಕಾದರೆ ಪ್ರತಿದಿನ ಕ್ರೀಡೆಯಲ್ಲಿ ಭಾಗವಹಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿವೆ. ಅದರ ಸದುಪಯೋಗ ಪಡೆದುಕೊಂಡು ಕ್ರೀಡಾಕ್ಷೇತ್ರದಲ್ಲಿ ಉನ್ನತ ಮಟ್ಟದ ಸಾಧನೆ ಮಾಡಬೇಕೆಂದು ಕರೆ ನೀಡಿದರು.
ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಜ್ಯೋತಿ ಎಸ್ ಕವಳೇಕರ ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ಕ್ರೀಡೆ ಸಾಕಷ್ಟು ಅವಕಾಶಗಳಿವೆ. ಸತತ ಪ್ರಯತ್ನದಿಂದ ಗುರಿ ತಲುಪಿದರೆ ಸರ್ಕಾರ ಕೋಟಾದಡಿ ಸರಕಾರಿ ಸೇವೆ ಸಲ್ಲಿಸಬಹುದೆಂದು ಹೇಳಿದರು.
ಸಂಯುಕ್ತಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಪ್ರೊ ಎಸ್ ಡಿ ಗೋರಿನಾಯಕ ಪರಿಚಯಿಸಿದರು. ರೂಪಾ ಎಂ ಜೆ ಕ್ರೀಡಾಕೂಟದ ಪ್ರತಿಜ್ಞೆ ಬೋಧಿಸಿದರು. ದೈಹಿಕ ನಿರ್ದೇಶಕ ಡಾ.ಶಿವಾನಂದ ಬುಲಬುಲಿ ವಂದಿಸಿದರು. ಸುಶ್ಮಿತಾ ನಿರೂಪಿಸಿದರು. ಸಮಾರಂಭದಲ್ಲಿ ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ಕ್ರೀಡಾಳುಗಳು ಹಾಜರಿದ್ದರು.