This is the title of the web page
This is the title of the web page

Live Stream

February 2023
T F S S M T W
 1
2345678
9101112131415
16171819202122
232425262728  

| Latest Version 8.0.1 |

Local News

ಬಿಜಗರಣಿಯಲ್ಲಿ ಅಂಬೇಡ್ಕರ್ ಭವನ ಉದ್ಘಾಟನೆ, ಗೋದಾಮು, ಗ್ರಾಪಂ ಕಟ್ಟಡಕ್ಕೆ ಶಂಕುಸ್ಥಾಪನೆ Inauguration of Ambedkar Bhawan Godown Gramam building at Bijagarani


 

ಬೆಳಗಾವಿ:

ಬಿಜಗರಣಿ ಗ್ರಾಮದಲ್ಲಿ ಭಾರತೀಯ ಸಂವಿಧಾನ ದಿನದ ಪ್ರಯುಕ್ತ ನೂತನವಾಗಿ ನಿರ್ಮಾಣಗೊಂಡ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಭವನವನ್ನು ಉದ್ಘಾಟಿಸಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್, ಗ್ರಾಮ ಪಂಚಾಯತ ಕಟ್ಟಡ ಹಾಗೂ ರೈತರ ಗೋದಾಮ ಕಟ್ಟಡಗಳ ನಿರ್ಮಾಣದ ಕಾರ್ಯಕ್ಕೂ ಶನಿವಾರ ಶಂಕುಸ್ಥಾಪನೆ ನೆರವೇರಿಸಿದರು.

ವಿಶ್ವದ ಶ್ರೇಷ್ಠ ಸಂವಿಧಾನದ ಮೂಲಕ ದೇಶದ ಪ್ರತಿಯೊಬ್ಬ ಪ್ರಜೆಗೂ ಸಮಾನತೆಯ ಹಕ್ಕು ಕೊಟ್ಟಿರುವವರು ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು. ‘ಭಾರತದ ಸಂವಿಧಾನ’ವು ಅಂಗೀಕಾರವಾದ ಈ ದಿನದಂದು ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಅವರ ಹೆಸರಿನ ಭವನವನ್ನು ಉದ್ಘಾಟಿಸುವ ಮೂಲಕ ಗೌರವಪೂರ್ವಕ ನಮನಗಳನ್ನು ಸಲ್ಲಿಸೋಣ. ಅವರು ಹಾಕಿಕೊಟ್ಟ ಆದರ್ಶದ ಮಾರ್ಗದಲ್ಲಿ ಸಾಗೋಣ ಎಂದು ಲಕ್ಷ್ಮೀ ಹೆಬ್ಬಾಳಕರ್ ಈ ಸಂದರ್ಭದಲ್ಲಿ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಗ್ರಾಮದ ಸ್ವಚ್ಚತೆ ಹಾಗೂ ಸುರಕ್ಷತೆಯ ಹಿತದೃಷ್ಟಿಯಿಂದ ಕಸವನ್ನು ಎತ್ತುವ ಸ್ವಚ್ಚ ವಾಹಿನಿ‌‌ ಎನ್ನುವ ವಾಹನಕ್ಕೆ ಶಾಸಕರು ಚಾಲನೆಯನ್ನು ನೀಡಿದರು.

ಈ ಸಮಯದಲ್ಲಿ ಗ್ರಾಮದ ಹಿರಿಯರು, ಎಪಿಎಂಸಿ ಚೇರಮನ್ ಯುವರಾಜ ಕದಂ, ಕಾಂಗ್ರೆಸ್ ಯುವ ಮುಖಂಡ ಮೃಣಾಲ ಹೆಬ್ಬಾಳಕರ್, ಯಲ್ಲಪ್ಪ ಬೆಳಗಾಂವ್ಕರ್, ಮನೋಹರ್ ಬೆಳಗಾಂವ್ಕರ್, ಅಶೋಕ ಚೌಗುಲೆ, ಗ್ರಾಮ ಪಂಚಾಯತಿ ಸದಸ್ಯರು, ಪಂಚಾಯತ ಅಭಿವೃದ್ಧಿ ಅಧಿಕಾರಿ ಹರ್ಷವರ್ಧನ್ ಅಗಸರ, ಪೂಜಾ ಸುತಾರ, ವಿರೇಶ ಹೊಸಮಠ, ಕಾರ್ಯ ನಿರ್ವಾಹಕ ಅಧಿಕಾರಿ ರಾಜೇಶ್ ದಾನವಾಡಕರ್, ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷರಾದ ಅರುಣ ಕಟಾಂಬಳೆ ರಾಜೇಂದ್ರ ಮೊರಬದ, ಗಣೇಶ ಕೆ ಎಸ್ ನಾಮದೇವ ಮೋರೆ, ಸಂತೋಷ ಕಾಂಬಳೆ, ಪ್ರೇಮ ಕಾಂಬಳೆ ಹಾಗೂ ಗ್ರಾಮದ ಅನೇಕ ಜನರು ಉಪಸ್ಥಿತರಿದ್ದರು.


Jana Jeevala
the authorJana Jeevala

Leave a Reply