ಬೆಳಗಾವಿ : ಖಾನಾಪುರ ತಾಲೂಕು ದೇವಲತ್ತಿ ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕೊಠಡಿಯನ್ನು ಶಾಸಕ ವಿಠಲ ಹಲಗೇಕರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶಾಸಕರ ಅನುದಾನದಲ್ಲಿ ಹಣ ಬಿಡುಗಡೆ ಮಾಡುವುದಾಗಿ ತಿಳಿಸಿದರು. ಶಾಲೆಗೆ ಸ್ಥಳದಾನ ಮಾಡಿದ ನಾಗರಿಕರ ಸೇವೆಯನ್ನು ಕೊಂಡಾಡಿದರು. ಶ್ರೀ ಚನ್ನಬಸವ ದೇವರು, ಶ್ರೀ ಶಿವಾನಂದ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಎಸ್ ಡಿ ಎಂ ಸಿ ಅಧ್ಯಕ್ಷ ಜಯವಂತ ನಿಡಗಲ್ಕರ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಂಜುಳಾ, ನಿವೃತ್ತ ಪ್ರಾಚಾರ್ಯ ಜಿ.ಕೆ.ಹೊಸೂರು, ನಿವೃತ್ತ ಶಿಕ್ಷಕ ಬಸನಗೌಡ ಪಾಟೀಲ, ಶಾಲೆಗೆ ಭೂದಾನ ಮಾಡಿದ ಪ್ರದೀಪ ಗೌಡ ರಾಮನಗೌಡ ಪಾಟೀಲ, ವಿಠಲ ಹಿಂಡಾಲ್ಕರ್, ದಶರಥ ಬನೋಶಿ, ರಾಜಶೇಖರ ಕಮ್ಮಾರ, ರಾಜು ಖಾತೆದಾರ, ಸದಾಶಿವ ಮರಡಿ, ಗ್ರಾಮ ಪಂಚಾಯಿತಿ ಸದಸ್ಯರು, ಮುಖ್ಯ ಶಿಕ್ಷಕರು, ಶಿಕ್ಷಕರು, ಗ್ರಾಮಸ್ಥರು ಉಪಸ್ಥಿತರಿದ್ದರು. ನಾಗೇಂದ್ರ ಸ್ವಾಗತಿಸಿದರು. ಚನ್ನಪ್ಪ ಕೋಲ್ಕಾರ ವಂದಿಸಿದರು.