ಬೆಳಗಾವಿ :
ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಬೆಳಗಾವಿ ಪೊಲೀಸರು ಹಲವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
1) ಕ್ಯಾಂಪ್ ಪೊಲೀಸ್ರಿಂದ ಬೈಕ್ ಕಳ್ಳನ ಬಂಧನ :
ನಗರದಲ್ಲಿ ನಡೆಯುತ್ತಿರುವ ಮೋಟರ್ ವಾಹನ ಕಳ್ಳತನ ತಡೆಗಟ್ಟಲು ಹಾಗೂ ವಾಹನ ಕಳ್ಳರನ್ನು ಪತ್ತೆ ಮಾಡುವಂತೆ ಅಧೀನ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದಂತೆ, ಎಸಿಪಿ ಖಡೇಬಜಾರರವರ ಮಾರ್ಗದರ್ಶನದಲ್ಲಿ ಕ್ಯಾಂಪ್ ಠಾಣಿಯ ಪಿಐ ಅಲ್ತಾಫ್ ಮುಲ್ಲಾ ಹಾಗೂ ಸಿಬ್ಬಂದಿಯವರ ತಂಡ ಸಂಶಯಾಸ್ಪದ ಮೋಟರ್ ವಾಹನ ಕಳ್ಳ
1. ಸೈಫಿಲ್ ಕಾಜೀಮ ತಹಶೀಲ್ದಾರ (35) ವರ್ಷ ಸಾ: ಉಜ್ವಲ್ ನಗರ ಬೆಳಗಾವಿ,
ಈತನನ್ನು ಪತ್ತೆ ಮಾಡಿ 09/09/2023 ರಂದು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದಾಗ ಆತನು ಘಟಪ್ರಭಾ ರೈಲು ನಿಲ್ದಾಣ-01, ನಿಪ್ಪಾಣಿ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ-01, ಚಿಕ್ಕೋಡಿ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ-01 ಮತ್ತು ಕೆಎಲ್ಇ ಬೆಳಗಾವಿ ಆಸ್ಪತ್ರೆ ಆವರಣದಲ್ಲಿ-2 ಹೀಗೆ ಒಟ್ಟು 05 ಬೈಕ್ಗಳನ್ನು ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದಾನೆ. ಆತನನ್ನು ಬಂಧಿಸಿ ಅವರಿಂದ ರೂ.1.35,000/- ಮೌಲ್ಯದ ಒಟ್ಟು 05 (ಹಿರೋ ಹೊಂಡಾ ಸ್ಟೆಂಡರ್-03, ಪ್ಯಾಶನ್ ಪ್ಲಸ್-01 ಅಕ್ಟಿವಾ-01) ಮೋಟರ್ ಸೈಕಲ್ಗಳನ್ನು ಜಪ್ತ ಮಾಡಿ ಆರೋಪಿತನ ವಿರುದ್ಧ ಕಾನೂನು ಕ್ರಮ ಜರುಗಿಸಿ, ತನಿಖೆ ಮುಂದುವರೆಸಲಾಗಿದೆ.
ಆರೋಪಿತನನ್ನು ಪತ್ತೆ ಮಾಡುವಲ್ಲಿ ಯಶ್ವಸಿಯಾದ ಪಿಐ ಅಲ್ತಾಫ್, ಎಮ್, ಪಿಎಸ್ಐ ಶ್ರೀಮತಿ. ಎ. ರುಕ್ಕಿಣಿ & ಎಸ್. ಎಸ್. ಪೂಜಾರಿ ಹಾಗೂ ಸಿಬ್ಬಂದಿಯವರಾದ 1]ಶ್ರೀಧರ ಎಚ್. ಕಳವಾರ 2)ಸಂತೋಷ, ಬಿ. ಬರಗಿ 3]ಭರಮಪ್ಪ, ಎಲ್. ಸರವಿ 4]ಆರ್. ಬಿ. ಮದಿಹಳ್ಳಿ 5)ಎಸ್. ಆರ್. ಕೋಟೆ ಕ್ಯಾಂಪ್, ಭರಮಾ ಕರೆಗಾರ ಉದ್ಯಮಭಾಗ ಠಾಣೆ ಮತ್ತು ಮೋಹನ ಅರಳಗುಂಡಿ ಖಡೇಬಜಾರ ಠಾಣೆರವರ ಕಾರ್ಯವನ್ನು ಪೊಲೀಸ್ ಆಯುಕ್ತರು, ಉಪ-ಪೊಲೀಸ್ ಆಯುಕ್ತರು (ಕಾಸು) ಹಾಗೂ (ಅ&ಸಂ) ರವರು ಶ್ಲಾಘಿಸಿರುತ್ತಾರೆ.
2) ಕ್ಯಾಂಪ್ & ಸಿಸಿಬಿ ತಂಡದ ಕಾರ್ಯಾಚರಣಿ 1 ವ್ಯಕ್ತಿಯನ್ನು ಅಪಹರಿಸಿ ಹಣದ ಬೇಡಿಕೆ ಇಟ್ಟಿದ್ದ ಕುಖ್ಯಾತ ರೌಡಿ ವಿಶಾಲಸಿಂಗನ ಬಂಧನ
ದಿನಾಂಕಃ 01/05/2023 ರಂದು ಪ್ಲಾಟ್ ತೋರಿಸುವುದಾಗಿ ನಂಬಿಸಿ ರಿಯಲ್ ಎಸ್ಟೇಟ್ ಉದ್ಯಮಿಯನ್ನು ಆತನ ಕಾರ್ನಲ್ಲಿಯೇ ಅಪಹರಿಸಿಕೊಂಡು ಹೋಗಿ, ಅಕ್ರಮ ಬಂಧನದಲ್ಲಿಟ್ಟು, ಜೀವ ಬೆದರಿಕೆ ಹಾಕಿ, ಆತನ ಬಿಡುಗಡೆಗಾಗಿ ಹಣದ ಬೇಡಿಕೆ ಇಟ್ಟು, ಫಿರ್ಯಾದಿಯಿಂದ ಹಣ ತೆಗೆದುಕೊಂಡು, ಇನ್ನೂ ಹೆಚ್ಚಿನ ಮೊತ್ತದ ಹಣದ ಬೇಡಿಕೆ ಇಟ್ಟು, ಫಿರ್ಯಾದಿಯ ಕಾರ್ ತೆಗೆದುಕೊಂಡು ಹೋದ ಬಗ್ಗೆ ತಿಲಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದಲ್ಲಿ ಆರೋಪಿತರ ಪತ್ತೆಗಾಗಿ ವಿಶೇಷ ತನಿಖಾ ತಂಡ ನಿಯೋಜಿಸಿದಂತೆ, ನಂದೀಶ್ವರ ಕುಂಬಾರ ಪಿಐ ಸಿಸಿ ಅಲ್ತಾಫ್ ಮುಲ್ಲಾ, ಪಿಐ ಕ್ಯಾಂಪ್ ರವರ ನೇತೃತ್ವದ ತಂಡವು ಕಾರ್ಯಾಚರಣೆ ನಡೆಸಿ ಈ ಪ್ರಕರಣದ ಪ್ರಮುಖ ಕುಖ್ಯಾತ ರೌಡಿ ಆರೋಪಿ 1) ವಿಶಾಲಸಿಂಗ್ ವಿಜಯಸಿಂಗ್ ಚವ್ಹಾಣ(25), ಸಾ: ಶಾಸ್ತ್ರಿ ನಗರ, ಬೆಳಗಾವಿ ಈತನನ್ನು ಪತ್ತೆ ಹಚ್ಚಿ, ವಶಕ್ಕೆ ಪಡೆದು ಆತನಿಂದ ಫಿರ್ಯಾದಿಯ ಕೃತ್ಯಕ್ಕೆ ಬಳಸಿದ ಆಯುಧಗಳನ್ನು ವಶಪಡಿಸಿಕೊಂಡು ಆತನ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದು, ಪ್ರಕರಣದ ತನಿಖೆ ಮುಂದುವರೆಸಲಾಗಿದೆ. ಗೋವಾ ರಾಜ್ಯದ ಮಾಪಸಾ, ಬಿಚೋಲಿ, ಸಾಕಳ ಮತ್ತು ಅಂಜುನಾ ಸ್ಥಳಗಳಲ್ಲಿ ಸರಗಳ್ಳತನ ಮಾಡಿರುವ ಬಗ್ಗೆ ತಿಳಿದುಬಂದಿರುತ್ತದೆ.
ಈತನ ವಿರುದ್ಧ ಈಗಾಗಲೇ ಬೆಳಗಾವಿ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 10 ಪ್ರಕರಣಗಳು ದಾಖಲಾಗಿ ವಿಚಾರಣೆ ಹಾಗೂ ತನಿಖೆಯಲ್ಲಿರುತ್ತವೆ.
ಆರೋಪಿತನನ್ನು ಪತ್ತೆ ಮಾಡುವಲ್ಲಿ ಯಶ್ವಸಿಯಾದ ನಂದೀಶ್ವರ ಕುಂಬಾರ ಪಿಐ ಸಿಸಿಬಿ & ಅಲ್ತಾಫ್ ಮುಲ್ಲಾ, ಪಿಐ ಕ್ಯಾಂಪ್ & ಸಿಪಿಐ ಹಾಗೂ ಕ್ಯಾಂಪ್ ಠಾಣೆಯ ಸಿಬ್ಬಂದಿಯವರ ಒಂಟಿ ಕಾರ್ಯಾಚರಣೆಯನ್ನು ಮಾನ್ಯ ಪೊಲೀಸ್ ಆಯುಕ್ತರು, ಉಪ-ಪೊಲೀಸ್ ಆಯುಕ್ತರು (ಕಾ&ಸು) ಹಾಗೂ (ಅ&ಸಂ) ರವರು ಶ್ಲಾಘಿಸಿರುತ್ತಾರೆ.
3) ಎಪಿಎಂಸಿ ಪೊಲೀಸ್ ಠಾಣೆರವರ ಕಾರ್ಯಾಚರಣೆ : ರೂ.2,55,000/- ಮೌಲ್ಯದ ಬಂಗಾರದ ಆಭರಣಗಳು ವಶ.
ದಿನಾಂಕಃ 01/08/2023 ರಂದು ಎಪಿಎಂಸಿ ಪೊಲೀಸ್ ಠಾಣೆ ಹದ್ದಿಯ ರಘುನಾಥ ಟೋಪನ್ನ ಪಾಟೀಲ ಇವರು ತಮ್ಮ ಮನೆಯಲ್ಲಿ ಬಂಗಾರದ ಆಭರಣಗಳು ಕಳುವಾದ ಬಗ್ಗೆ ನೀಡಿದ ದೂರಿನ ಮೇರೆಗೆ ಪ್ರಕರಣ ಸಂಖ್ಯೆಃ 122/2023 ದಾಖಲಾಗಿ ತನಿಖೆಯಲ್ಲಿತ್ತು, ಪ್ರಕರಣ ಆರೋಪಿತರನ್ನು ಪತ್ತೆ ಮಾಡುವಂತೆ ಅಧೀನ ಎಲ್ಲ ಪೊಲೀಸ್ ಅಧಿಕಾರಿಗಳಗೆ ಸೂಚಿಸಿದಂತೆ ಎಸಿಪಿ ಮಾರ್ಕೆಟ ರವರ ಮಾರ್ಗದರ್ಶನದಲ್ಲಿ ಎಪಿಎಂಸಿ ಠಾಣೆಯ ಪಿಐ ವಿಶ್ವನಾಥ ಡಿ ಕಣ್ಣೂರಿ ಹಾಗೂ ಸಿಬ್ಬಂದಿಯವರ ತಂಡ ಪ್ರಕರಣದ ಆರೋಪಿತನಾದ
1) ಅಬ್ದುಲಗಣಿ ಶಬ್ದರ ಶೇಖ (24) ಸಾಃ ಮುಸ್ಲಿಂ ಗಲ್ಲಿ ಅನಗೋಳ ಬೆಳಗಾವಿ,
ಈತನನ್ನು ಪತ್ತೆ ಮಾಡಿ ದಿನಾಂಕ: 09/09/2023 ರಂದು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದಾಗ ಈತನು ಎಪಿಎಂಸಿ ಪೊಲೀಸ್ ಠಾಣಿಯ ಪ್ರ.ಸಂ.122/2023 ಮತ್ತು 115/2023 ಹೀಗೆ 2 ಪ್ರಕರಣಗಳಲ್ಲಿ ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಂತೆ ಆತನನ್ನು ಬಂಧಿಸಿ ಅವರಿಂದ ರೂ.1,55,000/- ಮೌಲ್ಯದ ಬಂಗಾರದ ಆಭರಣಗಳನ್ನು ಜಪ್ತ ಮಾಡಿ ಆರೋಪಿತನ ವಿರುದ್ಧ ಕಾನೂನು ಕ್ರಮ ಜರುಗಿಸಿ, ತನಿಖೆ ಮುಂದುವರೆಸಲಾಗಿದೆ.
ಆರೋಪಿತನನ್ನು ಪತ್ತೆ ಮಾಡುವಲ್ಲಿ ಯಶ್ವಸಿಯಾದ ಪಿಐ ವಿಶ್ವನಾಥ, ಡಿ. ಕಲ್ಲೂರಿ, ಪಿಎಸ್ಐ ಮಂಜುನಾಥ ಭಜಂತ್ರಿ, ಶ್ರೀಮತಿ ತ್ರಿವೇಣಿ: ನಾಟೀಕರ, ಕರಣ ಸಿ ಹೊನಕಟ್ಟಿ ಹಾಗೂ ಎಎಸ್ ಐ ಬಿ.ಕೆ. ಮಿಟಗಾರ ಸಿಬ್ಬಂದಿಯವರಾದ 1]ಪಿ,ಡಿ.ಬಾಬಾನಗರ 2]ಡಿ.ಸಿ.ಸಾಗರ 3]ಬಸವರಾಜ ಬಾನಸೆ 4]ಕೆಂಪಣ್ಣಾ ದೊಡಮನಿ, 5)ಗೋವಿಂದಪ್ಪ ಪೂಜಾರ 6]ನಾಮದೇವ ಲಮಾಣಿ ಎಪಿಎಂಸಿ ಪೊಲೀಸ್ ಠಾಣಿ ರವರ ಕಾರ್ಯವನ್ನು ಮಾನ್ಯ ಪೊಲೀಸ್ ಆಯುಕ್ತರು, ಉಪ-ಪೊಲೀಸ್ ಆಯುಕ್ತರು (ಕಾ&ಸು) ಹಾಗೂ (ಅ&ಸಂ) ರವರು ಶ್ಲಾಘಿಸಿರುತ್ತಾರೆ.