ಕಕ್ಕೇರಿ : ಜನ ಜೀವಾಳ ಜಾಲ:ಖಾನಾಪುರ ತಾಲೂಕಿನ ಕಕ್ಕೇರಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಂಗಳವಾರದಂದು ಬೆಳಗಾವಿಯ ರಿನೇಶ್ರೀ ಸಲುಶನ್ಸ್ ಅಧಿಕಾರಿಗಳು ಬೆಳಗಾವಿ ಅಂತ ಹೇಳಿ ಕಕ್ಕೇರಿ ಗ್ರಾಮದ ಬೆಂಗಳೂರು ಅಯ್ಯಂಗಾರ್ ಬೇಕರಿ ಹಾಗೂ ಎಲ್ ಜಿ ಬೇಕರಿ ಅಂಗಡಿಗೆ ಭೇಟಿ ನೀಡಿ ಅಂಗಡಿಕಾರರಿಗೆ ಅಂಗಡಿ ಬಂದು ಮಾಡಿ ತಿಂಡಿ ತಿನಿಸುಗಳನ್ನು ತಪಾಸಣೆಗಾಗಿ ಬೆಂಗಳೂರಿಗೆ ಕಳಿಸುವುದಾಗಿ ಬೆದರಿಸಿದಾಗ ಅಂಗಡಿ ಮಾಲಕರು ಭಯಪಟ್ಟು ಗ್ರಾಮಸ್ಥರ ಬಳಿ ಹೇಳಿದಾಗ ಬೆಳಗಾವಿಯಿಂದ ಬಂದ ಇಬ್ಬರಿಗೆ ನೀವು ಯಾರು ಏಕೆ ಅಂಗಡಿಕಾರಿಗೆ ತೊಂದರೆ ಕೊಡ್ತಾ ಇದ್ದೀರಿ ಎಂದು ಕೇಳಿದಾಗ, ನಾವು ಫುಡ್ ಆಫೀಸರ್ ಎಂದು ಹೇಳಿದರು. ನೀವು ಕೇಸ್ ಕೊಡಿ ಇಲ್ಲವಾದರೆ ಫುಡ್ ಅನ್ನು ತಪಾಸಣೆಗೆ ಕಳಿಸಿ ಎಂದಾಗ ಆಯ್ತು ಎಂದರು. ಗ್ರಾಮಸ್ಥರು ಅಲ್ಲಿಂದ ಹೋದ ನಂತರ ಪುನ: ಬಂದು 4130 ರೂಪಾಯಿಯಂತೆ ರಸೀದಿ ಎರಡು ಅಂಗಡಿಗೆ ನೀಡಿ ಕಿರಣ್ ಕುಮಾರ ಯುವಕ ಮೊಬೈಲ್ ನಂಬರ್ 9844660342 ಗೆ ಫೋನ್ ಪೇ ಮಾಡಿ. ಇಲ್ಲವಾದಲ್ಲಿ ಗುರುವಾರ ದಿನ ಅಂಗಡಿ ಸೀಜ್ ಮಾಡುವುದಾಗಿ ಬೆದರಿಸಿದ ಹಿನ್ನೆಲೆಯಲ್ಲಿ ಬುಧವಾರ ಸಾಯಂಕಾಲ ಸಚಿನ್ ಪಾಟೀಲ್ ಹಾಗೂ ಲಿಂಗರಾಜ್ ಮಾಲಕರು ಫೋನ್ ಪೇ ಮುಖಾಂತರ ಇಬ್ಬರೂ ಮಾಲಕರು ಸೇರಿ 8200 ರೂಪಾಯಿ ಕಿರಣನಿಗೆ ಕಳಿಸಿರುತ್ತಾರೆ.
ಇವರು ನಿಜವಾದ ಅಧಿಕಾರಿಗಳು ಅಥವಾ ವಂಚನೆ ಮಾಡಿ ಹಣ ಗಳಿಸುವ ಯುವಕರು ಎಂಬುವುದು ತಿಳಿಯದಂತಾಗಿದೆ. ಈ ರಶೀದಿಯು ಡುಬ್ಲಿಕೇಟ್ ಅಥವಾ ಒರಿಜಿನಲ್ ಅನ್ನುವುದು ಜಿಲ್ಲಾಡಳಿತ ತನಿಖೆ ಮಾಡಿ ಈ ಯುವಕರ ಬಗ್ಗೆ ಮಾಹಿತಿಯನ್ನು ಬೆಳಗಾವಿ ಜಿಲ್ಲೆಯ ವ್ಯಾಪಾರಸ್ಥರಿಗೆ ಗೊತ್ತಾಗಬೇಕಾಗಿದೆ. ಇಲ್ಲವಾದಲ್ಲಿ ಈ ವಂಚಕರು ಸಾಕಷ್ಟು ಹಣವನ್ನು ಗಳಿಸುತ್ತಾರೆ.
ಇವರು ಒಂದು ವೇಳೆ ಸರ್ಕಾರಿ ಅಧಿಕಾರಿಗಳಾಗಿದ್ದರೆ ನೋಟಿಸ್ ನೀಡಿ ಇಲಾಖೆಗೆ ಬಂದು ದಂಡ ಕಟ್ಟಲು ಹೇಳುತ್ತಿದ್ದರು. ಆದರೆ ಈ ವಂಚಕರು ಫೋನ್ ಪೇ ಮಾಡಿ ಎಂದು ಹೇಳುತ್ತಿದ್ದಾರೆ. ನಿಜವಾದ ಅಧಿಕಾರಿಗಳು ಅಥವಾ ಮೋಸ ಮಾಡುವ ವಂಚಿತಕರು ಎಂಬುವುದು ಕಂಡು ಹಿಡಿಯಬೇಕಾಗಿದೆ ಬೆಳಗಾವಿ ಜಿಲ್ಲಾಡಳಿತ.