ಬೆಳಗಾವಿ: ಪುಣೆಯಿಂದ ಹಳಿಯಾಳಕ್ಕೆ ಹೊರಟಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿಗೆ ಜೈ ಮಹಾರಾಷ್ಟ್ರ ಸ್ಟಿಕ್ಕರ್ ಅಂಟಿಸಿರುವ ಘಟನೆ ಸೋಮವಾರ ನಡೆದಿದೆ.
ಬೆಳಗಾವಿಯಲ್ಲಿ ವಿಧಾನಮಂಡಲದ ಅಧಿವೇಶನಕ್ಕೆ ಪರ್ಯಾಯವಾಗಿ ಮಹಾರಾಷ್ಟ್ರ ಏಕೀಕರಣ ಸಮಿತಿ ಮಹಾಮೇಳಾವ ಹಮ್ಮಿಕೊಂಡಿದ್ದು ಇದಕ್ಕೆ ಬೆಳಗಾವಿ ಜಿಲ್ಲಾಡಳಿತ ನಿಷೇಧ ಹೇರಿದೆ. ಈ ಹಿನ್ನೆಲೆಯಲ್ಲಿ ಕೊಲ್ಲಾಪುರದಲ್ಲಿ ಶಿವ ಸೇನೆ ಕಾರ್ಯಕರ್ತರು ಅಲ್ಲಿನ ಬಸ್ ನಿಲ್ದಾಣದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಸಂಚಾರ ತಡೆದು ಜೈ ಮಹಾರಾಷ್ಟ್ರ ಸ್ಟಿಕರ್ ಅಂಟಿಸಿ ಎಂದಿನಂತೆ ತಮ್ಮ ಪುಂಡಾಟ ಪ್ರದರ್ಶನ ಮಾಡಿದರು.


