ಬೆಳಗಾವಿ : ಬೆಳಗಾವಿಯಲ್ಲಿ ಗಂಡನಿಗೆ ಕೈಕೊಟ್ಟು ಪತ್ನಿಯೊಬ್ಬಳು ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಗಂಡ ಆಸೀಫ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪತ್ನಿಯೂ ಇಲ್ಲ. ಮನೆಯ ವಸ್ತು ಸಹ ಇಲ್ಲ ಎಂಬಂತಾಗಿದೆ ಈಗ ಪತಿಯ ಪರಿಸ್ಥಿತಿ. ಪತ್ನಿ ಪರಾರಿ ಯಾಕೆಂದರೆ, ಆಕೆ ಹೋಗುವಾಗ ಸಿಲಿಂಡರ್, ಕಾರು ತೆಗೆದುಕೊಂಡು ಹೋಗಿದ್ದು 60 ಗ್ರಾಂ ಚಿನ್ನ ಹಾಗೂ 5 ಲಕ್ಷ ನಗದು ಕೊಂಡೊಯ್ದಿದ್ದಾಳೆ.
ಘಟನೆ ವಿವರ : ನಂದಗಡ ನಿವಾಸಿಯಾಗಿರುವ ಆಸೀಫ್ ಅವರು ಡ್ರೈವರ್ ಕೆಲಸ ಮಾಡುತ್ತಿದ್ದಾರೆ. ಜೀವನ ನಿರ್ವಹಣೆಗಾಗಿ ಮನೆಯಲ್ಲಿ 5 ಲಕ್ಷ ರೂ. ತೆಗೆದಿಟ್ಟಿದ್ದರು. ಅದನ್ನು ಸಹ ಪತ್ನಿ ತೆಗೆದುಕೊಂಡು ಹೋಗಿದ್ದಾಳೆ. ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿಒಂದು ಗುಂಟೆ ಜಾಗ ಖರೀದಿಸಿದ್ದೇನೆ. ಆದರೆ, ನಾನು ಡ್ರೈವರ್ ಆಗಿರುವ ಕಾರಣ ನನ್ನ ಜೀವನಕ್ಕೆ ಭರವಸೆ ಇಲ್ಲ. ಹೀಗಾಗಿ ಮಕ್ಕಳ ಸಲುವಾಗಿ ಅದನ್ನು ಸಹ ಆಕೆಯ ಹೆಸರಿಗೆ ಖರೀದಿ ಮಾಡಿ ಇಟ್ಟಿದ್ದೆ. ಆದರೆ ಈಗ ಆಕೆ ತನ್ನ ಮಕ್ಕಳೊಂದಿಗೆ ಪರಾರಿಯಾಗಿದ್ದಾಳೆ. ಬೆಳಗಾವಿ ತಾಲೂಕು ಬಿ.ಕೆ. ಬಾಳೆಕುಂದ್ರಿಯಲ್ಲೂ ನನ್ನ ಜಾಗ ಇದೆ. ತಕ್ಷಣವೇ ಪೊಲೀಸರು ಪತ್ನಿಯನ್ನು ಹುಡುಕಿ ಕೊಡಿ ಎಂದು ಅವರು ಮಾರಿಹಾಳ ಪೊಲೀಸರಿಗೆ ಜ.2 ರಂದು ದೂರು ನೀಡಿದ್ದಾರೆ.