ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಹಾಲಿ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ರಾಜ್ಯಮಟ್ಟದ ನಾಯಕಿಯಾಗಿದ್ದಾರೆ. ಇಡೀ ರಾಜ್ಯಾದ್ಯಂತ ಅವರನ್ನು ಆರಾಧಿಸುವ ಬಹುದೊಡ್ಡ ಅಭಿಮಾನಿಗಳ ಪಡೆಯೇ ನಿರ್ಮಾಣವಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಸದ್ಯ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಬಲ ಮಹಿಳಾ ನಾಯಕಿಯಾಗಿ ಹೊರಹೊಮ್ಮಿದ್ದಾರೆ. ರಾಜ್ಯಾದ್ಯಂತ ಅವರು ಚಿರಪರಿಚಿತರಾಗಿದ್ದು ವಿಧಾನಸಭಾ ಚುನಾವಣೆ ಕಾಲಕ್ಕೆ ರಾಜ್ಯಾದ್ಯಂತ ಪ್ರಚಾರ ಕೈಗೊಳ್ಳಬೇಕಾಗಿರುವುದು ಅವರ ಅಪಾರ ಜನಪ್ರಿಯತೆಗೆ ಸಾಕ್ಷಿ ಎನ್ನಬಹುದು.
ಜನಜೀವಾಳ ಸರ್ಚ್ ಲೈಟ್ ಬೆಳಗಾವಿ : ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಮತ್ತೆ ಕಾಂಗ್ರೆಸ್ ಅಲೆ ಕಾಣಿಸಿಕೊಂಡಿದೆ. ಕಾಂಗ್ರೆಸ್ ಹಾಲಿ ಶಾಸಕ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತೊಮ್ಮೆ ವಿಜಯಿಯಾಗುವ ಎಲ್ಲಾ ಸೂಚನೆಗಳು ಸದ್ಯದ ವಾತಾವರಣದಲ್ಲಿ ಕಂಡುಬಂದಿದೆ. ಹಲವಾರು ಖಾಸಗಿ ವಾಹಿನಿಗಳು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೆಳಗಾವಿ ಗ್ರಾಮೀಣ ಮತಕ್ಷೇತ್ರಾದ್ಯಂತ ಜನತೆಯ ಹಾಗೂ ಮನೆಮನೆಯ ಸಮೀಕ್ಷೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಎಲ್ಲರೂ ವಿಶೇಷವಾಗಿ ಹಾಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪರವಾಗಿ ಜೈಕಾರ ಹಾಕಿರುವುದು ಮತ್ತೊಮ್ಮೆ ಅವರೇ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಶಾಸಕರಾಗುವ ಸೂಚನೆಯನ್ನು ರವಾನಿಸಿದೆ.
ಕಳೆದ ಐದು ವರ್ಷಗಳಿಂದ ಬೆಳಗಾವಿ ಗ್ರಾಮೀಣ ಮತಕ್ಷೇತ್ರವನ್ನು ಕಾಂಗ್ರೆಸ್ ಪಕ್ಷದಿಂದ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿನಿಧಿಸುತ್ತಿದ್ದಾರೆ. ಅವರ ಅಬ್ಬರದ ಮುಂದೆ ಪ್ರತಿ ಸ್ಪರ್ಧಿಗಳು ನೆಲಕಚ್ಚಿದ್ದು ಈ ಬಾರಿಯೂ ಅವರಿಗೆ ತಕ್ಕ ಪ್ರತಿಸ್ಪರ್ಧಿ ಯಾರು ಇಲ್ಲ ಎಂಬ ವಾತಾವರಣ ಸದ್ಯದ ವಾಸ್ತವ ನೋಟ.
ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದೆ. ಆದರೆ, ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಮ್ಮ ಮತ ಕ್ಷೇತ್ರಕ್ಕೆ ಹೇರಳ ಪ್ರಮಾಣದಲ್ಲಿ ಅಭಿವೃದ್ಧಿಯ ನಾಗಾಲೋಟವನ್ನು ಹರಿಸಿದ್ದಾರೆ. ಯಥೇಚ್ಛ ಪ್ರಮಾಣದಲ್ಲಿ ಅನುದಾನ ತಂದು ಕ್ಷೇತ್ರವನ್ನು ಹಿಂದುಳಿದ ಮತಕ್ಷೇತ್ರ ಎಂಬ ಹಣೆಪಟ್ಟಿಯಿಂದ ಬಿಡುಗಡೆಗೊಳಿಸಿರುವುದು ಕ್ಷೇತ್ರದಲ್ಲಿ ಅವರ ಪರವಾಗಿ ಬಿರುಗಾಳಿಯಂಥ ಅಲೆಗಳು ಏಳಲು ಕಾರಣವಾಗಿದೆ.
ಒಟ್ಟಾರೆ, ರಾಜ್ಯದಲ್ಲಿ ದಿನ ದಿನಕ್ಕೆ ವಿಧಾನಸಭೆಯ ಚುನಾವಣೆ ಕಾವೇರುತ್ತಿದೆ. ಆದರೆ, ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಮಾತ್ರ ಲಕ್ಷ್ಮೀ ಹೆಬ್ಬಾಳಕಾರ ಹೆಸರು ಬಿಟ್ಟರೆ ಇತರರು ಗೌಣ ಎಂಬ ಸನ್ನಿವೇಶ ಇದೆ.