ಬೆಳಗಾವಿ : ಪುಣೆ ಮತ್ತು ಮುಂಬೈ ಹೊರತುಪಡಿಸಿದರೆ ಬೆಳಗಾವಿ ಗಣೇಶೋತ್ಸವ ರಾಷ್ಟ್ರದಲ್ಲೇ ಹೆಸರುವಾಸಿ. ಅದರಲ್ಲೂ ಬೆಳಗಾವಿಯ ಗಣೇಶೋತ್ಸವ ಸೌಹಾರ್ದತೆಯ ಸಂಕೇತವಾಗಿ ಹೊರಹೊಮ್ಮಿದೆ ಎಂದು ಬಿಜೆಪಿ ನಾಯಕ ಕಿರಣ ಜಾಧವ ಹೇಳಿದರು.
ಶುಕ್ರವಾರ ನಗರದ ವಿವಿಧ ಗಣೇಶೋತ್ಸವ ಮಂಡಳಗಳಿಗೆ ಭೇಟಿ ನೀಡಿ ಅವರು ಮಾತನಾಡಿದರು.
ಬೆಳಗಾವಿಯಲ್ಲಿ ಜನತೆ ಪ್ರತಿ ವರ್ಷ ಗಣೇಶೋತ್ಸವವನ್ನು
ಬಹಳ ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದಾರೆ. ಬೆಳಗಾವಿ ಜನತೆ ಶಾಂತಿಪ್ರಿಯರು. ಬೆಳಗಾವಿ ಜನತೆಗೆ ವಿಘ್ನೇಶ್ವರ ಎಲ್ಲಾ ರೀತಿಯಲ್ಲಿ ವಿಘ್ನ ಪರಿಹರಿಸಲಿ ಎಂದು ಹಾರೈಸಿದರು.
ಹನ್ನೊಂದನೇ ದಿನದಂದು ಬೆಳಗಾವಿ ನಗರದಲ್ಲಿರುವ ಗಣೇಶ ವಿಸರ್ಜನೆ ಮಾರ್ಗ ಹಾಗೂ ಗಣೇಶ ವಿಸರ್ಜನಾ ತಾಣಗಳನ್ನು ವೀಕ್ಷಿಸಿದರು.
ನಾರ್ವೇಕರ ಗಲ್ಲಿ ಯುವಕ ಮಂಡಳ ವತಿಯಿಂದಲೂ ಸನ್ಮಾನ ಸ್ವೀಕರಿಸಿ ಮಾತನಾಡಿದ ಕಿರಣ ಜಾಧವ, ಬೆಳಗಾವಿ ಗಣೇಶೋತ್ಸವ ಬಹಳ ಅದ್ದೂರಿಯಾಗಿ ಆಚರಣೆ ಆಗುತ್ತಿದೆ. ಅದೇ ರೀತಿ ಬೆಳಗಾವಿ ಜನತೆಗೆ ಸುಖ- ಶಾಂತಿ ನೆಮ್ಮದಿ ಅಭಿವೃದ್ಧಿಯನ್ನು ಗಣರಾಯ ನೀಡಲಿ ಎಂದು ಹಾರೈಸಿದರು.
ಭಾರತ ಶ್ರೀ ಸಾರ್ವಜನಿಕ ಗಣೇಶ ಉತ್ಸವ ಮಂಡಳ, ಅನಸೂರಕರ ಗಲ್ಲಿ, ಮಾರುತಿ ಗಲ್ಲಿ ಸಾರ್ವಜನಿಕ ಗಣೇಶ ಉತ್ಸವ ಮಂಡಳ ಮುಂತಾದ ಗಣೇಶ ಮಂಡಳಿಗಳಿಗೆ ಬಿಜೆಪಿ ನಾಯಕರೊಂದಿಗೆ ಅವರು ಭೇಟಿ ನೀಡಿದರು.
ಪಾಲಿಕೆ ಸದಸ್ಯ ಸಂತೋಷ್ ಪೆಡ್ನೆಕರ್ ಅತಿಥಿಗಳನ್ನು ಬರಮಾಡಿಕೊಂಡರು. ಶ್ರೀ ಸಾರ್ವಜನಿಕ ಗಣೇಶೋತ್ಸವ ಮಂಡಳದ ಪದಾಧಿಕಾರಿಗಳು ಉಪಸ್ಥಿತರಿದ್ದರು.