ಚಿಕ್ಕೋಡಿ :
ಚಿಕ್ಕೋಡಿಯಲ್ಲಿ ಅಕ್ಟೋಬರ್ 12 ರಂದು ಮನೆ ಕಳ್ಳತನ ಮಾಡಿದ್ದ ಮೂವರು ಕಳ್ಳರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಜೋಡಕುರಳಿ ಗ್ರಾಮದ ಗಜಾನಂದ ಪುರಂದರ ಕಾಂಬ್ಳೆ(28), ಸಂಜು ರಾಮಚಂದ್ರ ಬೈಲಪತ್ತಾರ(36) ಮತ್ತು ನೇಪಾಳ ಮೂಲದ ಸದ್ಯ ವಿಜಯಪುರ ನಿವಾಸಿ ಕಿರಣ್ ವಿಶಾಲ್ ಶರ್ಮಾ(20) ಬಂಧಿತರು. ಚಿಕ್ಕೋಡಿಯ ವಿಷ್ಣು ಪ್ರಕಾಶ್ ನೇತಲ್ಕರ್ ಅವರ ಮನೆಯ ಕೀಲಿ ಮುರಿದ ಇವರು ಟ್ರೇಜರಿಯಲ್ಲಿದ್ದ 370 ಗ್ರಾಂ ಬಂಗಾರದ ಆಭರಣ ಮತ್ತು 1.50 ಲಕ್ಷ ₹ ಸೇರಿದಂತೆ 12.61 ಲಕ್ಷ ರೂ. ಮೌಲ್ಯದ ವಸ್ತು ಕಳವು ಮಾಡಿದ್ದರು. ಈ ಬಗ್ಗೆ ವಿಷ್ಣು ನೇತಲ್ಕರ್ ಅವರು ಚಿಕ್ಕೋಡಿ ಪೋಲಿಸ್ ಠಾಣೆಗೆ ದೂರು ನೀಡಿದರು. ಡಿವೈಎಸ್ ಪಿ ಬಸವರಾಜ್ ಎಲಿಗಾರ್ ಮಾರ್ಗದರ್ಶನದಲ್ಲಿ ಸಿಪಿಐ ಆರ್. ಆರ್. ಪಾಟೀಲ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಕಬ್ಬಿಣದ ರಾಡ್ ಕಳವು ಮಾಡಿದ್ದ ಬಂಗಾರದ ಆಭರಣ, ಕ್ಯಾಮೆರಾ, ನಗದು ಹಣ, ಬೈಕ್ ವಶ ಪಡಿಸಿಕೊಂಡಿದೆ.

 
             
         
         
        
 
  
        
 
    