This is the title of the web page
This is the title of the web page

Live Stream

March 2023
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

Local News

ಬೆಳಗಾಂ ಶುಗರ್ಸ್ ರೈತ ಬಾಂಧವರಿಗೆ ಮಹತ್ವದ ಸೂಚನೆ Important Notice for Belgam Sugars Farmers


 

ಬೆಳಗಾವಿ :
ಬೆಳಗಾಂ ಶುಗರ್ಸ್ ಕಾರ್ಖಾನೆಯು ಕಬ್ಬು ಪೂರೈಸಿದ ರೈತ ಬಾಂಧವರ ಸಹಾಯ ಮತ್ತು ಸಹಕಾರದಿಂದಾಗಿ ಸತತ ಯಶಸ್ಸನ್ನು ಸಾಧಿಸುತ್ತಿದ್ದು, ಪ್ರಸಕ್ತ 2022-23 ರ ಹಂಗಾಮನ್ನು ಶೀಘ್ರದಲ್ಲಿ ಪ್ರಾರಂಭಿಸಲಾಗುವುದು ಎಂದು ಕಾರ್ಖಾನೆಯ ಪ್ರಕಟಣೆ ತಿಳಿಸಿದೆ.

ಪ್ರಸ್ತುತ ಹಂಗಾಮಿನಲ್ಲಿ ಕಾರ್ಖಾನೆಯ ಸುತ್ತುಮುತ್ತಲಿನ ಸುಮಾರು 80 ಕಿ.ಮೀ. ಅಂತರದಲ್ಲಿರುವ ಕಬ್ಬು ಬೆಳೆಯುವ ಪ್ರದೇಶದಿಂದ ಉತ್ತಮ ತಳಿಯ ಕಬ್ಬನ್ನು ಪಡೆಯಲಾಗುವುದು.

ಸನ್ 2020-21 ನೇ ಹಂಗಾಮಿನಲ್ಲಿ ಕಬ್ಬು ಪೂರೈಸಿದ ರೈತ ಬಾಂಧವರಿಗೆ ಪ್ರತಿ ಟನ್ ಟನ್ನಿಗೆ ರೂ.2500/- ಗಳಷ್ಟು ಮೊದಲನೇ ಕಂತಾಗಿ ಮತ್ತು ರೂ.100/- ಗಳಷ್ಟು ಹಣವನ್ನು ಎರಡನೇ ಕಂತಾಗಿ ಈಗಾಗಲೇ ನೀಡಲಾಗಿದ್ದು, ಆಡಳಿತ ಮಂಡಳಿಯ ಸಭೆಯಲ್ಲಿ ಚರ್ಚಿಸಿದಂತೆ, ಇನ್ನೂ ರೂ.50/-ಗಳಷ್ಟು ಹಣವನ್ನು ಮೂರನೆ ಕಂತಾಗಿ ನೀಡಲು ನಿರ್ಧಲಾಸಲಾಗಿದೆ. ಇದರೊಂದಿಗೆ ಸನ್ 2020-21 ನೇ ಹಂಗಾಮಿನಲ್ಲಿ ಕಬ್ಬು ಪೂರೈಸಿದ ರೈತಬಾಂಧವರಿಗೆ ಪ್ರತಿ ಟನ್‌ ಕಬ್ಬಿಗೆ ಒಟ್ಟಾರೆಯಾಗಿ ರೂ.2650/-ಗಳಷ್ಟು ದರವನ್ನು ನೀಡಿದಂತಾಗುತ್ತದೆ.

ಸನ್ 2021-22 ನೇ ಹಂಗಾಮಿನಲ್ಲಿ ಕಬ್ಬು ಪೂರೈಸಿದ ರೈತ ಬಾಂಧವರಿಗೆ ಈಗಾಗಲೇ ರೂ.2600/-ಗಳಷ್ಟು ದರವನ್ನು ನೀಡಲಾಗಿದ್ದು, ಎರಡನೇ ಕಂತಾಗಿ ರೂ.100/-ಗಳಷ್ಟು ಹಣವನ್ನು ನೀಡಲು ನಿರ್ಧಲಾಸಲಾಗಿದೆ. ಇದರೊಂದಿಗೆ ಸನ್ 2021-22 ನೇ ಹಂಗಾಮಿನಲ್ಲಿ ಕಬ್ಬು ಪೂರೈಸಿದ ರೈತ ಬಾಂಧವರಿಗೆ ಪ್ರತಿ ಟನ್ ಕಬ್ಬಿಗೆ ಒಟ್ಟಾರೆಯಾಗಿ ರೂ.2700/ ಗಳಷ್ಟು ದರವನ್ನು ನೀಡಿದಂತಾಗುತ್ತದೆ.

ಪ್ರಸಕ್ತ ಹಂಗಾಮಿನಲ್ಲಿ ಉತ್ತಮ ಗುರಿ ಸಾಧಿಸುವ ನಿರೀಕ್ಷೆ ಹೊಂದಿದ್ದು, ಇದು ರೈತ ಬಾಂಧವರ ಸಹಾಯ ಮತ್ತು ಸಹಕಾರದಿಂದ ಮಾತ್ರ ಸಾಧ್ಯವಾಗಲಿದ್ದು, ಕಾರ್ಖಾನೆಗೆ ಕಬ್ಬು ಪೂರೈಸುವ ಸಮಸ್ತ ರೈತ ಬಾಂಧವರು ಈ ಹಿಂದೆ ಹೆಚ್ಚು ಕಬ್ಬು ಪೂರೈಸಿ ಕಾರ್ಖಾನೆಯ ಪ್ರಗತಿಗೆ ಸಹಕರಿಸಿದಂತೆ ಪ್ರಸಕ್ತ ಹಂಗಾಮಿನಲ್ಲಿಯೂ ಒಳ್ಳೆಯ ಗುಣಮಟ್ಟ, ಒಳ್ಳೆಯ ರಿಕವರಿ ಇರುವ ಕಬ್ಬನ್ನು ಕಾರ್ಖಾನೆಗೆ ಪೂರೈಸಿ ಯಶಸ್ಸಿನಲ್ಲಿ ಭಾಗಿಯಾಗುವರೆಂದು ಆಶಿಸುವುದಾಗಿ ಪ್ರಕಟಣೆ ತಿಳಿಸಿದೆ.


Jana Jeevala
the authorJana Jeevala

Leave a Reply