ಬೆಳಗಾವಿ :
ಅಕ್ರಮವಾಗಿ ಸಾಗಿಸುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ಶ್ರೀಗಂಧ ಕಟ್ಟಿಗೆಯನ್ನು ವಶಪಡಿಸಿಕೊಂಡಿರುವ ನಂದಗಡ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ.
ಆನಂದ ರಾಮನ್ನವರ (27) ಶ್ರೀಗಂಧ ಸಾಗಾಟ ಪ್ರಕರದಲ್ಲಿ ಬಂಧಿತ. 18ರಂದು ಮಧ್ಯಾಹ್ನ ನಂದಗಡ ಪೊಲೀಸ್ ಠಾಣಾ ವ್ಯಾಪ್ತಿಯ ಕಸಬಾ ನಂದಗಡ ಗ್ರಾಮದ ವ್ಯಾಪ್ತಿಯಲ್ಲಿ ಅಕ್ರಮವಾಗಿ ಶ್ರೀಗಂಧದ ಗಿಡದ ತುಂಡುಗಳನ್ನು ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ಅಕ್ರಮವಾಗಿ ಶ್ರೀಗಂಧದ ತುಂಡು ಸಾಗಿಸುವ ಬಗ್ಗೆ ಖಚಿತ ಮಾಹಿತಿ ಪಡೆದ ನಂದಗಡ ಪಿಎಸ್ ಐ ಎಚ್. ಶ್ರೀನಿವಾಸನ್ ಹಾಗೂ ಸಿಬ್ಬಂದಿ ಈತನನ್ನು ಬಂಧಿಸಿ ಪ್ರಕರಣ ದಾಖಲು ಮಾಡಿದ್ದಾರೆ.