5 ಲಕ್ಷಕ್ಕೂ ಹೆಚ್ಚು ಮೌಲ್ಯದ ಅಕ್ರಮ ಮದ್ಯ ವಶ..!
ಅಕ್ರಮ ಸಾರಾಯಿ ಮಾರಾಟಗಾರರನ್ನು ಬೆನ್ನಟ್ಟಿದ ಡಿಸಿಪಿ ಸ್ನೇಹಾ ತಂಡ..!
ಬೆಳಗಾವಿ :ಸದಾಶಿವ ನಗರದಲ್ಲಿ ಲಕ್ಷಾಂತರ ರೂ ಸಾರಾಯಿಯನ್ನು ಗೋವಾದಿಂದ ಅಕ್ರಮವಾಗಿ ತಂದು ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ಖದಿಮನ ಮೇಲೆ ಡಿಸಿಪಿ ಪಿ ವಿ ಸ್ನೇಹಾ ನೇತೃತ್ವದಲ್ಲಿ ನಗರ ಸಿಸಿಬಿ ಪೊಲೀಸರು ದಾಳಿ ನಡೆಸಿ ರೂ.5,37,500/- ರಷ್ಟು ಅಕ್ರಮ ಸರಾಯಿ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ನಿನ್ನೆ (ಬುಧವಾರ) ರಾತ್ರಿ ಖಚಿತ ಮಾಹಿತಿ ಪಡೆದ ಡಿಸಿಪಿ ಪಿವಿ ಸ್ನೇಹಾ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಪೊಲೀಸ್ ಇನ್ಸ್ಪೆಕ್ಟರ್ ಅಲ್ತಾಫ್ ಮುಲ್ಲಾ ತಂಡ ಎಪಿಎಂಸಿ ಪೊಲೀಸ ಅಧಿಕಾರಿ ಹಾಗೂ ಸಿಬ್ಬಂದಿಗಳ ಸಹಕಾರದಿಂದ ಬೆಳಗಾವಿ ನಗರದ ಸದಾಶಿವ ನಗರದ ಮನೆಯೊಂದರಲ್ಲಿ ಸಂಗ್ರಹಿಸಿಟ್ಟ ಸುಮಾರು 5,37,500/- ರೂ. ಮೌಲ್ಯದ ಗೋವಾ ರಾಜ್ಯದಿಂದ ತಂದ ವಿವಿಧ ಕಂಪನಿಯ ಒಟ್ಟು 475 ಲೀಟರಗಳಷ್ಟು ಸಂಗ್ರಹಿಸಿಟ್ಟ ಅಕ್ರಮ ಸರಾಯಿ ಬಾಟಲಗಳನ್ನು ವಶಪಡಿಸಿಕೊಂಡಿದ್ದಾರೆ.
ಶೆಟ್ಟಿ ಗಲ್ಲಿಯ ಮುಖ್ಯ ಆರೋಪಿಯಾದ 1) ಹರೀಶ ರಮೇಶ ಭಸ್ಮೆ (35) ಎಂಬಾತನನ್ನು ವಶಕ್ಕೆ ಪಡೆದು ಕಾನೂನು ಕ್ರಮ ಜರುಗಿಸಿದ್ದಾರೆ. ಇನ್ನೊಬ್ಬ ಆರೋಪಿ 2) ರಾಜೇಶ ಕೇಶವ ನಾಯಕ ಈತನು ಪರಾರಿಯಾಗಿದ್ದು ಇತನಿಗಾಗಿ ಶೋಧ ಕಾರ್ಯ ನಡೆಸಿ ತನಿಖೆ ಮುಂದುವರೆಸಿದ್ದಾರೆ.
ಈ ದಾಳಿಯಲ್ಲಿ ಪಾಲ್ಗೊಂಡ ಸಿಸಿಬಿ ಪಿಐ ಅಲ್ತಾಪ ಮುಲ್ಲಾ ಹಾಗೂ ಎಪಿಎಂಸಿ ಠಾಣೆಯ ಸಿಬ್ಬಂದಿಯವರ ಕಾರ್ಯವನ್ನು ಪೊಲೀಸ್ ಆಯುಕ್ತರು ಹಾಗೂ ಪೊಲೀಸ್ ಉಪ ಆಯುಕ್ತರುಗಳು ಶ್ಲಾಘಿಸಿದ್ದಾರೆ.

 
             
         
         
        
 
  
        
 
    