ಸ್ಮಶಾನ ಜಾಗಕ್ಕೂ ಪರದಾಡುತ್ತಿರುವ ಅಗಸಗಿಯ ಕೃಷಿಭೂಮಿಯಲ್ಲಿ ಅಕ್ರಮ ಲೇಔಟ್ ದಂಧೆ..!
ಬಹುಗ್ರಾಮ ಕುಡಿಯುವ ನೀರಿನ ಪೈಪ್ಲೈನ್ ಒಡೆದು ರಾಜ್ಯ ಹೆದ್ದಾರಿ ಮೇಲೆ ಮನೆ ನಿರ್ಮಾಣ..!
PWD, ಉಸ್ತುವಾರಿ ಸಚಿವರ ತವರು ಕ್ಷೇತ್ರದಲ್ಲಿಯೇ ರಾಜ್ಯ ರಸ್ತೆ ಜಾಗ ಗುಳುಂ.
ಕಣ್ಮುಚ್ಚಿ ಕುಳಿತ PWD,PRD ಅಧಿಕಾರಿಗಳು..!
ಬೆಳಗಾವಿ: ನಗರದಿಂದ ಕೇವಲ ೧೦ ಕಿಮೀ ದೂರದಲ್ಲಿರುವ ತಾಲೂಕಿನ ಅಗಸಗಿ ಗ್ರಾಮದಲ್ಲಿ ಸ್ಮಶಾನ ಜಾಗಕ್ಕೂ ಪರದಾಡುತ್ತಿರುವ ಸಮಯದಲ್ಲಿ ಊರಿಗೆ ಬಂದ ಪಕ್ಕದ ಗ್ರಾಮದ ರಿಯಲ್ ಎಸ್ಟೇಟ್ ಪುಢಾರಿನೊಬ್ಬ ಕೃಷಿ ಮಾಡುವುದಾಗಿ ಹೇಳಿ ಒಂದು ಎಕರೆ ಜಾಮೀನು ಖರೀದಿಸಿ ಕೃಷಿಭೂಮಿ ಮತ್ತು ರಾಜ್ಯ ಹೆದ್ದಾರಿ ಮೇಲೆ ಅಕ್ರಮ ಲೇಔಟ್ ಹಾಕಿ ಬಾಂಡ್ ಪೇಪರ್ ಮೇಲೆ ಮಾರಾಟ ಮಾಡಿ ದಂಧೆ ನಡೆಸಿ ಕೋಟ್ಯಂತರ ರುಪಾಯಿ ಲೂಟಿ ಮಾಡಿ ಅವಾಂತರ ಸೃಷ್ಟಿ ಮಾಡಿ ಪರಾರಿಯಾಗಿದ್ದಾನೆ.!
ಬಹುಗ್ರಾಮ ಕುಡಿಯುವ ನೀರಿನ ಪೈಪ್ಲೈನ್ ಒಡೆದು ರಾಜ್ಯ ಹೆದ್ದಾರಿ ಮೇಲೆ ಮನೆ ನಿರ್ಮಾಣ..!
ಈಗ ಆ ಅಕ್ರಮ ಲೇಔಟ್ನಲ್ಲಿ ಸೈಟ್ ತೆಗೆದುಕೊಂಡವ ಮನೆ ಕಟ್ಟಲು ನೆಲ ಅಗೆಯುವಾಗ ಗ್ರಾಮಕ್ಕೆ ಅಳವಡಿಸಿರುವ ಬಹುಗ್ರಾಮ ಕುಡಿಯುವ ನೀರಿನ ಪೈಪ್ಲೈನ್ ಒಡೆದು ಹಾಕಿದ್ದಾನೆ. ಇದು ಸುಮಾರು 20 ಅಡಿ ಕಟ್ಟಡದ ಒಳಗಡೆ ಬಂದಿದ್ದು ನಿರ್ಮಾಣವಾಗುತ್ತಿರುವ ಮನೆ ಪೈಪ್ಲೈನ್ ಹಾಗೂ ರಾಜ್ಯ ಹೆದ್ದಾರಿ ಮೇಲೆ ನಿಂತಂತಾಗಿದೆ. ಇನ್ನೂ ಊರಿಗಿದ್ದ ಒಂದೇ ಒಂದು ಕುಡಿಯುವ ನೀರು ವಿತರಣೆ ಮೂಲದ ಪೈಪ್ಲೈನ್ ಒಡೆದು ಹೋಗಿದ್ದು ಜನ ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
PWD, ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೇ ಅವಾಂತರ..!
ಇಷ್ಟೆಲ್ಲಾ ಅವಾಂತರ ಬೇರಾವ
ಕ್ಷೇತ್ರದಲ್ಲಿ ಅಲ್ಲ ಸ್ವತಃ PWD ಸಚಿವ ಹಾಗೂ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಕ್ಷೇತ್ರದಲ್ಲಿ ನಡೆದರೂ
PDW ಮತ್ತು PRD ಇಲಾಖೆಯ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ.
ಇದಲ್ಲದೇ ಈತ ಕಳೆದ ವರ್ಷ ಕೃಷಿ ಭೂಮಿಯಲ್ಲಿ ಲೇಔಟ್ ಹಾಕಿದಾಗ ಕಂದಾಯ ಇಲಾಖೆಯವರು ಬಂದು ನಿಲ್ಲಿಸಿದ್ದರು. ಆದರೆ ಆತ ಮತ್ತೆ ಯಾರಿಗೂ ತಿಳಿಯದ ರೀತಿಯಲ್ಲಿ ಹೊರಗಿನವರಿಗೆ ಸೈಟ್ ಮಾರಾಟ ಮಾಡಿ ಹಣ ಮಾಡಿಕೊಂಡು ಹೋಗಿದ್ದಾನೆ. ಇದರಿಂದಾಗಿ ಸೈಟ್ ತೆಗೆದುಕೊಂಡವರು ಸರ್ಕಾರಿ ಜಾಗ ತೆಗೆದುಕೊಂಡಂತಾಗಿದೆ. ನಿಯಮದ ಪ್ರಕಾರ ಬೆಳಗಾವಿ ಸುತಗಟ್ಟಿ ರಾಜ್ಯ ಹೆದ್ದಾರಿ 141 ಪಕ್ಕ ಯಾವುದೇ ಕಟ್ಟಡ ನಿರ್ಮಾಣ ಮಾಡಬೇಕಾದರೆ ಒಂದು ಬದಿ ಸುಮಾರು 41 ಮೀಟರ್ ಮತ್ತೊಂದು ಬದಿ 41 ಮೀಟರ್ ನೀಡಬೇಕೆಂಬ ನಿಯಮವಿದೆ. ಆದರೆ ಇವೆಲ್ಲವುಗಳನ್ನು ಗಾಳಿಗೆ ತೂರಿ ಅಕ್ರಮ ಲೇಔಟ್ ಹಾಕಿ ಮಾರಾಟ ಮಾಡಲಾಗಿದೆ.
ಸ್ಮಶಾನ ಜಾಗಕ್ಕೂ ಪರದಾಡುತ್ತಿರುವ ಅಗಸಗಿ ಗ್ರಾಮ.!
ಅಗಸಗಿ ಗ್ರಾಮದಲ್ಲಿ ಸದ್ಯ ಇರುವ ಬೆರಳೆಣಿಕೆಯಷ್ಟಿರುವ ಸಮುದಾಯ ಹಾಗೂ ಒಂದೇ ಧರ್ಮದವರಿಗೆ ಸ್ಮಶಾನಕ್ಕೂ ಕೂಡಲು ಜಾಗವಿಲ್ಲ ಅಂತಹದರಲ್ಲಿ ಅಕ್ರಮ ಲೇಔಟ್ ಹಾಕಿ ಅಲ್ಲಿ ಸಾರ್ವಜನಿಕರಿಗೆ ನೀರಿನ ನಲ್ಲಿ ಕುಡಿಸಲು ಸಹ ಜಾಗ ಬಿಡದೆ ಬೇರೆ ಜಾತಿ, ಧರ್ಮದವರಿಗೂ ನಿವೇಶನ ಮಾರಾಟ ಮಾಡಲಾಗಿದೆ. ಇದರಿಂದಾಗಿ ಇದು ಮುಂದೊಂದು ದಿನ ಆಡಳಿತಕ್ಕೆ ಕಿರಿಕಿರಿ ಆಗಲಿದ್ದು ಈಗಲೇ ಎತ್ತೆಚ್ಚುಕೊಳ್ಳಬೇಕಾಗಿದೆ ಎಂದು ಗ್ರಾಮಸ್ಥರು ಗ್ರಾಮ ಪಂಚಾಯಿತಿಯವರಿಗೆ ಎಚ್ಚರಿಕೆ ನೀಡಿದ್ದಾರೆ.
ಇಷ್ಟೆಲ್ಲಾ ಆದ ಮೇಲೂ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುವರು ಎಂದು ಗ್ರಾಮಸ್ಥರು ಕಾಯುತ್ತಿದ್ದಾರೆ.


